ಬೆಂಗಳೂರು: ಬ್ಯಾಂಕ್‌ಗೆ ಡಿಪಾಸಿಟ್ ಮಾಡಲು ತೆರಳುತ್ತಿದ್ದ ಆರ್‌ಟಿಒ ಅಧಿಕಾರಿಯಿಂದ 5 ಲಕ್ಷ ರೂ. ಎಗರಿಸಿ ಪರಾರಿಯಾಗಿದ್ದ ಪ್ರಕರಣವನ್ನು ಭೇದಿಸಿ ರುವ ರಾಜಾಜಿನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ರಾಜಾಜಿನಗರದ ಆರ್‌ಟಿಒ ಕಚೇರಿ ಬಳಿ ಕೆಲಸ ಮಾಡುತ್ತಿದ್ದ ಸಚಿನ್ ಹಾಗೂ ಜಯಂತ್ ಬಂಧಿತ ಆರೋಪಿಗಳಾಗಿದ್ದಾರೆ. ಏ.21ರಂದು ಆರ್‌ಟಿಒ ಕಚೇರಿ ಬಳಿ ದ್ವಿತೀಯ ದರ್ಜೆ ಸಹಾಯಕರೊಬ್ಬರು ರಾಜಾಜಿನಗರದ ಆರ್‌ಟಿಒ ಕಚೇರಿಯಲ್ಲಿ ಸಂಗ್ರಹ ವಾಗಿದ್ದ 5 ಲಕ್ಷ ರೂ.ಅನ್ನು ಬ್ಯಾಂಕ್‌ಗೆ ಡೆಪಾಸಿಟ್ ಮಾಡಲು ಹೋಗುತ್ತಿದ್ದಾಗ ಹೆಲ್ಮೆಟ್ ಧರಿಸಿ ಬೈಕ್ ನಲ್ಲಿ ಬಂದು ಹಣ ಇದ್ದ ಬ್ಯಾಗ್ ಕಸಿದು ಕ್ಷಣಾರ್ಧ ದಲ್ಲಿ ಖದೀಮರು ಪರಾರಿಯಾಗಿದ್ದರು.
ಈ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಜಾಡು ಬೆನ್ನುಹತ್ತಿದ್ದ ಪೊಲೀಸರು ಸಿಸಿಟೀವಿ ಪರಿಶೀಲನೆ ನಡೆಸಿ ಅರೋಪಿಗಳನ್ನು ಬಂಧಿಸಿ 2.52 ಲಕ್ಷ ರೂ.ನಗದು ಹಾಗೂ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಆರೋಪಿ ಸಚಿನ್ 6 ವರ್ಷಗಳಿಂದ ಆರ್‌ಟಿಒ ಕಚೇರಿ ಬಳಿಯ ಪಾರ್ಟ್ ಒನ್ ಅಂಗಡಿ ಯಲ್ಲಿ ಕೆಲಸ ಮಾಡಿಕೊಂಡಿದ್ದು ಅಂಗಡಿ ಮಾಲೀಕ ಜೊತೆ ಹಣದ ವಿಚಾರವಾಗಿ ಗಲಾಟೆ ಆಗಿ ಕೆಲಸ ಬಿಟ್ಟಿದ್ದು, ಮಾಡಿದ ಸಾಲ ತೀರಿಸಲು ದರೋಡೆಗೆ ಪ್ಲ್ರಾನ್ ಮಾಡಿದ್ದ ಎಂಬುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಪ್ರತಿದಿನ ಮಧ್ಯಾಹ್ನ ಆರ್‌ಟಿಒ ಸಿಬ್ಬಂದಿ ಬ್ಯಾಂಕ್ ಗೆ ಹಣ ಕಟ್ಟಲು ಹೋಗುತ್ತಿದ್ದರು. ಇದನ್ನು ಗಮನಿ ಸಿದ್ದ ಆರೋಪಿ ಸಚಿನ್ ತನ್ನ ಸಾಲ ತೀರಿಸಲು ದರೋಡೆ ಮಾಡಲು ಒಂದು ತಿಂಗಳ ಸಂಚು ರೂಪಿಸಿದ್ದನು. ಇದಕ್ಕಾಗಿ ತನ್ನ ಸಹಚರ ಜಯಂತ್ ಜೊತೆ ಸೇರಿ, ಆರ್‌ಟಿಒ ಕಚೇರಿಗೆ ಹಣ ಕಟ್ಟಲು ಬಂದಿದ್ದ ಸಿಬ್ಬಂದಿಯನ್ನು ಅಡ್ಡಗಟ್ಟಿ ಆತನ ಕೈಯಲ್ಲಿದ ಹಣದ ಬ್ಯಾಗ್ ಕಿತ್ತು ಪರಾರಿಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.