Advertisement

Shocking: 142 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ, ಸರಕಾರಿ ಶಾಲೆಯ ಪ್ರಾಂಶುಪಾಲ ಅರೆಸ್ಟ್

12:44 PM Nov 23, 2023 | Team Udayavani |

ಚಂಡೀಗಢ: ಶಾಲೆಯಲ್ಲಿ ಓದುತ್ತಿರುವ ಸುಮಾರು 142 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಶಾಲೆಯ ಪ್ರಾಂಶುಪಾಲರನ್ನು ಬಂಧಿಸಿದ ಘಟನೆ ಹರಿಯಾಣ ಜಿಲ್ಲೆಯ ಜಿಂದ್ ನಲ್ಲಿ ನಡೆದಿದೆ.

Advertisement

ಹರಿಯಾಣದ ಜಿಂದ್‌ನ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಕನಿಷ್ಠ 142 ಅಪ್ರಾಪ್ತ ಬಾಲಕಿಯರು ಆರು ವರ್ಷಗಳ ಅವಧಿಯಲ್ಲಿ ಶಾಲೆಯ ಪ್ರಾಂಶುಪಾಲರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದರು, ಈ ವಿಚಾರವಾಗಿ ಲೈಂಗಿಕ ಕಿರುಕುಳ ಸಮಿತಿ ನಡೆಸಿದ ತನಿಖೆಯಲ್ಲಿ ಈ ವಿಷಯ ಬಹಿರಂಗವಾಗಿದೆ.

ಪ್ರಾಂಶುಪಾಲರು ತಮ್ಮ ಕಚೇರಿಗೆ ಕರೆದು ಲೈಂಗಿಕ ಕೃತ್ಯ ಎಸಗಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೇಣು ಭಾಟಿಯಾ ತಿಳಿಸಿದ್ದಾರೆ. ಮಹಿಳಾ ಆಯೋಗ ನೀಡಿದ ದೂರಿನ ಬಳಿಕ ನವೆಂಬರ್ 6 ರಂದು ಪ್ರಾಂಶುಪಾಲರನ್ನು ಹರಿಯಾಣ ಪೊಲೀಸರು ಬಂಧಿಸಿದ್ದಾಗಿ ಹೇಳಿದ್ದಾರೆ.

ಬಾಲಕಿಯರ ಲೈಂಗಿಕ ಕಿರುಕುಳದ ದೂರನ್ನು ಮುಂದಿನ ಕ್ರಮಕ್ಕಾಗಿ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. 390 ಹುಡುಗಿಯರಲ್ಲಿ 142 ಮಂದಿ ವಿದ್ಯಾರ್ಥಿನಿಯರು ಪ್ರಿನ್ಸಿಪಾಲ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಈ ಆರೋಪದ ಮೇಲೆ ಸದ್ಯ ಪ್ರಾಂಶುಪಾಲರು ಬಂಧನದಲ್ಲಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪತ್ರ ಬರೆದ ವಿದ್ಯಾರ್ಥಿನಿಯರು:
ತಮ್ಮ ಶಾಲೆಯಲ್ಲಿ ನಡೆಯುತಿದ್ದ ಕಿರುಕುಳದ ಕುರಿತು ಆಗಸ್ಟ್ 31 ರಂದು ಸುಮಾರು 15 ಹುಡುಗಿಯರು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ರಾಜ್ಯ ಮಹಿಳಾ ಆಯೋಗ ಸೇರಿದಂತೆ ಇತರರಿಗೆ ಕೃತ್ಯದ ಕುರಿತು ಪತ್ರ ಬರೆದಿದ್ದರು.

Advertisement

ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷಣ ಇಲಾಖೆ ಆರೋಪಿಯನ್ನು ಅಕ್ಟೋಬರ್ 27 ರಂದು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಇದನ್ನೂ ಓದಿ: Nihang: ಗುರುದ್ವಾರ ಒಡೆತನಕ್ಕಾಗಿ ಜಗಳ: ನಿಹಾಂಗ್‌ ಸಿಖ್‌ ಗುಂಡಿನ ದಾಳಿಗೆ ಪೊಲೀಸ್‌ ಮೃತ್ಯು

Advertisement

Udayavani is now on Telegram. Click here to join our channel and stay updated with the latest news.

Next