Advertisement

ಬೈಕ್‌ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ

12:30 PM Feb 02, 2017 | |

ಜೇವರ್ಗಿ: ಹತ್ತಿ ಜತೆಗೆ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪಟ್ಟಣದ ಪೊಲೀಸರು ಬುಧವಾರ ಬಂಧಿಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ರಮೇಶ ಬಾಲಪ್ಪ ದರ್ಶನಾಪುರ, ಪವನಕುಮಾರ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

Advertisement

ಡಿ. 24ರಂದು ಆಂದೋಲಾದ ರುದ್ರಮುನಿ ಅಮರಯ್ಯ ಹಿರೇಮಠ ಅವರ ಮನೆ ಅಂಗಳದಲ್ಲಿದ್ದ ತುಂಬಿದ ಆರು ಹತ್ತಿ ಚೀಲಗಳು ಕಳ್ಳತನವಾಗಿದ್ದ ಬಗ್ಗೆ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಜ.30ರಂದು ಸಿದ್ರಾಮ ತಳವಾರ, ಮೈಲಾರಿ ನಾಟೀಕಾರ ಎಂಬುವರನ್ನು ಬಂಧಿಸಿ ಹತ್ತಿ ವಶಪಡಿಸಿಕೊಳ್ಳಲಾಯಿತು.

ಪ್ರಕರಣದ ಪ್ರಮುಖ ಆರೋಪಿ ರಮೇಶ ದರ್ಶನಾಪುರ ತಲೆಮರಿಸಿಕೊಂಡಿದ್ದ. ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಶಶಿಕುಮಾರ, ಡಿಎವೈಎಸ್‌ಪಿ ಜಯಪ್ರಕಾಶ, ಡಿಎವೈಎಸ್‌ಪಿ ವಿಜಯ ಅಂಚಿ, ಸಿಪಿಐ ಎಚ್‌. ಎಂ. ಇಂಗಳೇಶ್ವರ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಪ್ರದೀಪ ಬೀಸೆ, ಸಿಬ್ಬಂದಿಗಳಾದ ಗುರುಬಸಪ್ಪ, ಪರಮೇಶ್ವರ, ಮಲ್ಲಿಕಾರ್ಜುನ ಬಾಸಗಿ, ಶಿವರಾಜಕುಮಾರ, ಲಾಲಪ್ಪ, ವಿಶ್ವನಾಥ, 

ಭಾಗಣ್ಣ ಪಟ್ಟಣದ ಬಸವೇಶ್ವರ ವೃತ್ತದ ಬಳಿ ರಮೇಶ ಹಾಗೂ ಪವನಕುಮಾರ ಎಂಬುವರನ್ನು ವಿಚಾರಣೆಗೊಳಪಡಿಸಿದಾಗ ಬೈಕ್‌ ಕಳ್ಳತನದ ಬಗ್ಗೆಯೂ ಮಾಹಿತಿ ಸಿಕ್ಕಿದೆ. ಬಂಧಿತರಿಂದ 5.70 ಲಕ್ಷ ರೂ. ಮೌಲ್ಯದ 11 ಮೋಟಾರ್‌ ಸೈಕಲ್‌ ಹಾಗೂ ಹತ್ತಿ ಕಳ್ಳತನಕ್ಕೆ ಉಪಯೋಗಿಸಿದ ಒಂದು ಟಂಟಂ ವಾಹನ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next