Advertisement

Prakash Raj: ಚಂದ್ರಯಾನ-3 ಯಶಸ್ಸು: ಪ್ರಕಾಶ್ ರಾಜ್‌ ಬಂಧನಕ್ಕೆ ಆಗ್ರಹಿಸಿ ಸಾವಿರಾರು ಟ್ವೀಟ್

10:53 AM Aug 24, 2023 | Team Udayavani |

ಬೆಂಗಳೂರು: ಭಾರತದ ಚಂದ್ರಯಾನ-3 ಯಶಸ್ಸು ಆಗಿದೆ. ಆ ಮೂಲಕ ಇಡೀ ದೇಶ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ವೈಜ್ಞಾನಿಕ ಲೋಕದಲ್ಲಿ ಭಾರತ ಹೊಸ ಮೈಲುಗಲ್ಲನ್ನು ಸಾಧಿಸಿದೆ.

Advertisement

ದೇಶ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಭಾರತದ ಐತಿಹಾಸಿಕ ಸಾಧನೆಯ ಬಗ್ಗೆ ಶ್ಲಾಘಿಸಲಾಗುತ್ತಿದೆ. ಈ ನಡುವೆ ಇತ್ತೀಚೆಗೆ ಬಹುಭಾಷಾ ಪ್ರಕಾಶ್‌ ರಾಜ್‌ ʼಚಂದ್ರಯಾನ-3ʼ ಕುರಿತು ಮಾಡಿದ ಒಂದು ಟ್ವೀಟ್‌ ಚಂದ್ರಯಾನ-3 ಯಶಸ್ಸಿನ ಬಳಿಕ ಮತ್ತೆ ಸದ್ದು ಮಾಡುತ್ತಿದೆ. #ArrestPrakashRaj ಟ್ವಿಟರ್‌ ನಲ್ಲಿ ಟ್ರೆಂಡ್‌ ಆಗಿದೆ.

ರಾಜಕೀಯವಾಗಿ ಅವರ ಅಭಿಪ್ರಾಯಗಳನ್ನು ಟೀಕೆ ಮಾಡುವವರು ಅನೇಕರಿದ್ದಾರೆ. ಯಾವ ವಿವಾದ ಬಂದರೂ ನಟ ಪ್ರಕಾಶ್‌ ರಾಜ್‌ ಎಲ್ಲದಕ್ಕೂ ಉತ್ತರವನ್ನು ತನ್ನ ಖಾರವಾದ ಟ್ವೀಟ್‌ ಗಳಿಂದಲೇ ಪ್ರತಿಕ್ರಿಯೆ ನೀಡುತ್ತಾರೆ. ಆದರೆ ಅನೇಕಬಾರಿ ಪ್ರಕಾಶ್‌ ಈ ಟ್ವೀಟ್‌ ಗಳ ವಿಚಾರಗಳಿಂದಲೇ ಅವರು ವಿವಾದಕ್ಕೆ ಸಿಲುಕಿಕೊಂಡಿದ್ದಾರೆ.

ವಿಜ್ಞಾನಿಗಳು ಹಾಗೂ ಇಸ್ರೋವಿನ ಕನಸಿನ ʼಚಂದ್ರಯಾನ-3ʼ ಬಗ್ಗೆ ನಟ ಪ್ರಕಾಶ್‌ ರಾಜ್‌ ಮಾಡಿರುವ ಟ್ವೀಟ್‌ ವೊಂದು ವಿವಾದಕ್ಕೀಡಾಗಿದೆ. ಕಾರ್ಟೂನ್‌ ರಚಿತ ಒಬ್ಬ ವ್ಯಕ್ತಿ ಚಹಾವನ್ನು ಮಗಚುವ ಫೋಟೋವೊಂದನ್ನು ಹಾಕಿ “ತಾಜಾ ಸುದ್ದಿ ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ”ವೆಂದು ಬರೆದುಕೊಂಡಿದ್ದರು.

ಈ ಟ್ವೀಟ್‌ ಬಗ್ಗೆ ದೇಶದೆಲ್ಲೆಡೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜ್ಞಾನಿಗಳ ಸಾಧನೆಯನ್ನು ಈ ರೀತಿ ರಾಜಕೀಯವಾಗಿ ವ್ಯಂಗ್ಯವಾಗಿ ಟೀಕಿಸಿರುವ ಪ್ರಕಾಶ್‌ ರಾಜ್‌ ಅವರ ನಡೆಗೆ ಭಾರೀ ವಿರೋಧ ವ್ಯಕ್ತವಾದ ಜೊತೆಗೆ ಬಾಗಲಕೋಟೆ ಜಿಲ್ಲೆಯಲ್ಲಿ ಅವರ ವಿರುದ್ದ ದೂರು ಕೂಡ ದಾಖಲಾಗಿದೆ.

Advertisement

ಬುಧವಾರ(ಆ.23 ರಂದು) ವಿಕ್ರಮ್‌ ಲ್ಯಾಂಡರ್ ಚಂದ್ರನ ಮೇಲೆ ಇಳಿದು ಭಾರತದ ʼಚಂದ್ರಯಾನ-3ʼ  ಯಶಸ್ಸಾಗಿದೆ. ಚಂದ್ರಯಾನ-3 ಯ ಸಾಧನೆಯ ಬಳಿಕ ಪ್ರಕಾಶ್‌ ರಾಜ್‌ ಅವರ ಟ್ವಿಟರ್‌ ನಲ್ಲಿ ಟ್ರೆಂಡ್‌ ಆಗಿದ್ದಾರೆ. ಅವರನ್ನು ಬಂಧಿಸುವಂತೆ ಅನೇಕರು ಟ್ವೀಟ್‌ ಮೂಲಕ ಆಗ್ರಹಿಸಿದ್ದಾರೆ.

ಚಲನಚಿತ್ರ ನಟ ಪ್ರಕಾಶ್ ರಾಜ್ #Chandrayan3ಗೆ ಅವಮಾನ ಮಾಡಿದ್ದಾರೆ. ನೀವು ಅವರನ್ನು ಜೈಲಿನಲ್ಲಿ ನೋಡಲು ಬಯಸಿದರೆ ಮರು ಪೋಸ್ಟ್ ಮಾಡಿ ಎಂದು ಪ್ರಾಚಿ ಸಾಧ್ವಿ ಟ್ವೀಟ್‌ ಮಾಡಿದ್ದಾರೆ.

ಇದು ದೇಶ ವಿರೋಧಿಗಳ ಸ್ಥಿತಿಯಾಗಲಿದೆ ಎಂದು ವ್ಯಂಗ್ಯ ವಿಡಿಯೋವೊಂದರಲ್ಲಿ ಪ್ರಕಾಶ್‌ ರಾಜ್‌ ಅವರ ಫೋಟೋವೊಂದನ್ನು ಹಾಕಿ ಟ್ರೋಲ್‌ ಮಾಡಿದ್ದಾರೆ.

ಹೇಗಿದೆ ಜೋಶ್ #ಪ್ರಕಾಶ್ ರಾಜ್? ಎಂದು ಮತ್ತೊಬ್ಬರು #ArrestPrakashRaj ಹ್ಯಾಷ್‌ ಟ್ಯಾಗ್‌ ನಡಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

ಚಂದ್ರಯಾನ-3  ಯಶಸ್ಸಿನ ಬಗ್ಗೆ ನಟ ಪ್ರಕಾಶ್‌ ರಾಜ್‌ ಟ್ವೀಟ್‌ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.

ಭಾರತದ.. ಮನುಕುಲದ ಹೆಮ್ಮೆಯ ಕ್ಷಣಗಳಿವು .. 🙏🏿🙏🏿🙏🏿 ಧನ್ಯವಾದಗಳು #ISRO #Chandrayaan3 #VikramLander ಮತ್ತು ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ .. ವಿಶಾಲ ವಿಶ್ವದ ಇನ್ನಷ್ಟು ವಿಸ್ಮಯಗಳನ್ನು ಅರಿಯಲು….ಸಂಭ್ರಮಿಸಲು .. ಇದು ದಾರಿಯಾಗಲಿ. #justasking ಎಂದು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next