ಕನಕಪುರ: ವಾಹನ ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಗ್ರಾಮಾಂತರ ಠಾಣೆ ಪೊಲೀಸರು ಬಂಧಿತರಿಂದ ಮಾರಕಾಸ್ತ್ರ, ನಗದು, ಮೊಬೈಲ್, ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿಯ ಕೋಟೆ ಬೀದಿ ಉರ್ಮಗೇರಿಯ ಅಜಯ್ ಅಲಿಯಾಸ್ ಗುಯ್ಯ (21), ದೇವಸ್ಥಾನ ಬೀದಿಯ ಗಂಗಾಧರ್ ಅಲಿಯಾಸ್ ಟುಯ್ಯ(22)ಬಂಧಿತರು.ಬೆಂಗಳೂರಿನ ಚನ್ನಮ್ಮನಕೆರೆ ಓಂ ಶಕ್ತಿ ದೇವಸ್ಥಾನದ 6ನೇ ಕ್ರಾಸ್‌ನಲ್ಲಿ ವಾಸವಾಗಿದ್ದ ಇವರು ಈ ಹಿಂದೆ ಬೆಂಗಳೂರಿನ ಸುಬ್ರಮಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದಬೈಕ್ ಅನ್ನು ದರೋಡೆಗೆ ಬಳಸಿ ಸೆ.20ರ ರಾತ್ರಿ10 ಗಂಟೆಯಲ್ಲಿ ತಾಲೂಕಿನ ಬೆಂಗಳೂರು -ಮೈಸೂರು ರಸ್ತೆ ಕಾಳೇಗೌಡನ ದೊಡ್ಡಿ ಗ್ರಾಮದ ಬಳಿ ಲಾರಿ ಅಡ್ಡಗಟ್ಟಿ ಚಾಲಕನಿಗೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿ 5800 ರೂ.ನಗದು,2 ಮೊಬೈಲ್ ಕಿತ್ತು ಪರಾರಿಯಾಗಿದ್ದರು. ಚಾಲಕ ಗ್ರಾ ಮಾಂತರ ಠಾಣೆಗೆ ದೂರು ನೀಡಿದ್ದರು.
ವಿಶೇಷ ತಂಡ ರಚಿಸಲಾಗಿತ್ತು: ಎಸ್ಪಿ ಎಸ್. ಗಿರೀಶ್ ಆದೇಶದ ಮೇರೆಗೆ ಡಿವೈಎಸ್ಪಿ ರಾಮರಾಜನ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು.
ಬಂಧಿತರಿಂದ ನಗದು ಜಪ್ತಿ:ಮಳವಳ್ಳಿ ಬಡಾವಣೆಯೊಂದರಲ್ಲಿ ಆರೋಪಿ ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 1460 ರೂ. ನಗದು, ಮಾರಕಾಸ್ತ್ರ, ಬೈಕ್, ಮೊಬೈಲ್ ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಎಸ್‌ಐಗಳಾದ ಅನಂತರಾಮು, ಲಕ್ಷ್ಮಣ್‌ಗೌಡ,ಎಎಸ್‌ಐದುಗೇìಗೌಡ, ಮುನಿರಾಜು, ಸಿಬ್ಬಂದಿಗಳಾದಜಯಣ್ಣ,ನವೀನ್, ಮಹದೇವಶೆಟ್ಟಿ ಕಾರ್ಯಾಚರಣೆಯಲ್ಲಿದ್ದರು.