Advertisement

ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

07:59 PM Sep 23, 2022 | Team Udayavani |

ಪಣಜಿ: ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕೊಲ್ವಾ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಆರೋಪಿಗಳಿಂದ ಒಂದು ಕೆ.ಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Advertisement

ಇದನ್ನೂ ಓದಿ:  ಶಿವಮೊಗ್ಗದ ಶಂಕಿತ ಉಗ್ರ ಮಾಜ್ ತಂದೆ ಮುನೀರ್ ಅಹಮದ್ ನಿಧನ

ರತನ್ ಅವ್ಲೆ (20) ಮತ್ತು ಅಬ್ಬಾಸ್ ಖರುಷಿ (19) ಬಂಧಿತ ಆರೋಪಿಗಳು.

ಕರ್ನಾಟಕದಿಂದ ಇಬ್ಬರು ಗಾಂಜಾ ಮಾರಾಟ ಮಾಡಲು ಬರುತ್ತಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಇದರ ಆಧಾರದ ಮೇಲೆ ಪೊಲೀಸರು ಕೊಲ್ವಾ ಹೌಸಿಂಗ್ ಬೋರ್ಡ್ ಪರಿಸರದಲ್ಲಿ ಬಂಧಿಸಿದ್ದಾರೆ.

ಪ್ರವಾಸಿ ಸೀಸನ್ ಆರಂಭವಾಗುತ್ತಿದ್ದಂತೆ, ಮಹಾರಾಷ್ಟ್ರದಿಂದ ಡ್ರಗ್ಸ್ ತಂದು ಗೋವಾದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ. ಈ ಕುರಿತು ತನಿಖೆ ನಡೆಸಲು ಕೊಲ್ವಾ ಮಹಾರಾಷ್ಟ್ರಕ್ಕೆ ಪೊಲೀಸರು ತೆರಳಲಿದ್ದಾರೆ.

Advertisement

ಕಾರ್ಯಾಚರಣೆಯಲ್ಲಿ ಪಿಐ ಸೋಮನಾಥ್ ಮಹಾಜಿಕ್, ಪಿಎಸ್‍ಐ ಸುಶಾಂತ್ ಸಂಗೋಡ್ಕರ್, ಎಲ್‍ಪಿಎಸ್‍ಐ ಸೋನಮ್ ವರ್ಣೇಕರ್, ಹೆಡ್ ಕಾನ್‍ಸ್ಟೆಬಲ್‌ ಸುನೀಲ್ ಮಾಂಡ್ರೇಕರ್ ಮತ್ತು ಕಾನ್‍ಸ್ಟೆಬಲ್‍ಗಳಾದ ಸೂರಜ್ ಕಿನ್ಲೇಕರ್, ಸಂದೀಪ್ ಮಲಿಕ್, ವಿನಾಯಕ್ ಪಲಾವ್ ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next