Advertisement

Bantwal: ಮೂವರ ಬಂಧನ; 70 ಸಾವಿರ ಮೌಲ್ಯದ ಸೊತ್ತು ವಶ

09:47 PM Aug 16, 2024 | Team Udayavani |

ಬಂಟ್ವಾಳ: ಬಿ.ಸಿ. ರೋಡಿನ ಪದ್ಮಾ ಕಾಂಪ್ಲೆಕ್ಸ್‌ ಕಟ್ಟಡದ ತಳಭಾಗದಲ್ಲಿ ನಡೆಯುತ್ತಿದ್ದ ಅಕ್ರಮ ಮಟ್ಕಾ ಚೀಟಿ ದಂಧೆಯ ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ಡಿವೈಎಸ್‌ಪಿ ನೇತೃತ್ವದ ತಂಡ ದಾಳಿ ನಡೆಸಿ ಮೂವರು ಆರೋಪಿಗಳ ಜತೆಗೆ ನಗದು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಆ. 14ರಂದು ನಡೆದಿದೆ.

Advertisement

ಮಂಜೇಶ್ವರ ನಿವಾಸಿ ಸಜೀತ್‌ ಕೆ. (38), ಉಚ್ಚಿಲ ನಿವಾಸಿ ವಿಶಾಲ್‌ ಸಿ. ಉಚ್ಚಿಲ್‌ (35) ಹಾಗೂ ಮಂಜೇಶ್ವರ ಬಡ್ಡಹಿತ್ತಲು ನಿವಾಸಿ ಸುನೀಲ್‌ ಕುಮಾರ್‌ (39) ಬಂಧಿತ ಆರೋಪಿಗಳಾಗಿದ್ದಾರೆ.

ಅಕ್ರಮ ಮಟ್ಕಾ ಚೀಟಿ ವ್ಯವಹಾರ ನಡೆಸುವ ಕುರಿತು ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ಡಿವೈಎಸ್‌ಪಿ ವಿಜಯಪ್ರಸಾದ್‌ ನೇತೃತ್ವದ ತಂಡ ದಾಳಿ ನಡೆಸಿದೆ. ದಾಳಿಯ ವೇಳೆ ಕೃತ್ಯಕ್ಕೆ ಬಳಸಿದ್ದ ವಿವಿಧ ಮುಖಬೆಲೆಯ ನೋಟುಗಳು, ಕ್ಯಾಲ್ಕುಲೇಟರ್‌, ಪೆನ್ನುಗಳು, ಪುಸ್ತಕಗಳು, ಮೊಬೈಲ್‌ಗ‌ಳು ಸೇರಿ ಒಟ್ಟು 70 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next