Advertisement

ಉತ್ಸವ ಮೂರ್ತಿ ಕದ್ದವರ ಬಂಧನಕ್ಕೆ ಆಗ್ರಹ

05:56 PM Feb 18, 2021 | Team Udayavani |

ರಾಯಚೂರು: ಕಲ್ಲೂರು ಗ್ರಾಮದ ಮಾರಟೇಶ್ವರ ದೇವಸ್ಥಾನದ ಉತ್ಸವ ಮೂರ್ತಿ ಕದ್ದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು
ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ ಶೆಟ್ಟಿ ಬಣ) ಕಲ್ಲೂರು ಹೋಬಳಿ ಘಟಕದ ಸದಸ್ಯರು ಒತ್ತಾಯಿಸಿದರು. ಈ ಕುರಿತು ಬುಧವಾರ ಡಿಸಿಗೆ ಮನವಿ ಸಲ್ಲಿಸಿದರು.

Advertisement

ಫೆ.13ರಂದು ಈ ಉತ್ಸವ ಮೂರ್ತಿ ಸುಮಾರು ಐದುನೂರು ವರ್ಷಗಳ ಹಳೆಯ ಮೂರ್ತಿಯಾಗಿದೆ. ಪ್ರತಿ ವರ್ಷ ಸಂಕ್ರಾಂತಿ ಹಬ್ಬದಂದು ನಡೆಯುವ ಜಾತ್ರಾ ಮಹೋತ್ಸವ ವೇಳೆ ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಗುತ್ತದೆ. ರಥದಲ್ಲಿಟ್ಟು ರಥೋತ್ಸವ ನಡೆಸಲಾಗುತ್ತಿತ್ತು. ದಸರಾ ಹಬ್ಬದ ವೇಳೆ ಬನ್ನಿ ಮರದ
ಕಟ್ಟೆಯವರೆಗೆ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು. ಇಂಥ ಪೌರಾಣಿಕ ಹಿನ್ನೆಲೆಯುಳ್ಳ ಮೂರ್ತಿ ಕಳವು ಮಾಡಿದ್ದು ಗ್ರಾಮಸ್ಥರ  ನೋವುಂಟು ಮಾಡಿದೆ ಎಂದು ವಿವರಿಸಿದರು.

ಈ ಘಟನೆಯಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಕೂಡಲೇ ಮಾರಟೇಶ್ವರ ದೇವಸ್ಥಾನದಲ್ಲಿನ ಉತ್ಸವ ಮೂರ್ತಿ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಬೇಕು ಹಾಗೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಸಂಘಟನೆಯ ಕಲ್ಲೂರು ಹೋಬಳಿ ಘಟಕದ ಅಧ್ಯಕ್ಷ ಶಾಂತಮೂರ್ತಿ, ಸದಸ್ಯರಾದ ವಿನೋದ ಕುಮಾರ, ಹರೀಶ್‌, ಅರ್ಜುನ್‌, ಮಹೇಂದ್ರ, ದೇವರಾಜ್‌, ಕುಮಾರ, ತೇಜಶ್ವರ, ಅನಿಲ್‌ ಕುಮಾರ ಹಾಗೂ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next