Advertisement
ಜೆ.ಪಿ.ನಗರದ ಬಿಳೇಕಳ್ಳಿ ನಿವಾಸಿ ರಾಜ ಅಲಿಯಾಸ್ ಜಪಾನ್ ರಾಜ (40), ನಾಗರಾಜ್ ಅಲಿಯಾಸ್ ಮತ್ತಿನಾಗ (24), ಮಲ್ಲೇಶ್ವರ ನಿವಾಸಿ ಕಿರಣ್ ಅಲಿಯಾಸ್ ಕಿರಣ್ ಕುಮಾರ್ (26) ಬಂಧಿತರು. ಇದೇ ವೇಳೆ ಆರೋಪಿಗಳು ಕದ್ದ ಚಿನ್ನಾಭರಣ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಜಯನಗರ ನಿವಾಸಿ ನೀಲಮ್ಮ (70) ಮತ್ತು ಕದ್ದ ಚಿನ್ನಖರೀದಿಸಿದ ಆರೋಪದಲ್ಲಿ ಬಿಳೇಕಳ್ಳಿ ನಿವಾಸಿ, ಜ್ಯುವೆಲರಿ ಮಾಲೀಕ ಸೈಯದ್ ಫರೂಕ್ (47)ನನ್ನು ಬಂಧಿಸಲಾಗಿದೆ.
ಡಿ.12ರಂದು ಮೂವರು ಆರೋಪಿಗಳು ಕೆ.ಪಿ.ಅಗ್ರಹಾರ ಠಾಣೆ ವ್ಯಾಪ್ತಿಯ ಮಾಗಡಿ ರಸ್ತೆಯಲ್ಲಿರುವ ಫೋರ್ಡ್ ಐಕಾನ್ ಕಾರು ಶೋ ರೂಂ ಹತ್ತಿರ ಮಾರಕಾಸ್ತ್ರಗಳನ್ನು ಹಿಡಿದು ದರೋಡೆ ಮಾಡಲು ಸಂಚು ರೂಪಿಸಿದ್ದರು. ಈ ಮಾಹಿತಿ ಆಧರಿಸಿ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು. ಜೈಲಿನಲ್ಲೇ ಕಳವಿಗೆ ಸಂಚು?: ಆರೇಳು ವರ್ಷಗಳಿಂದ ಮನೆಗಳ್ಳತನ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿರುವ ಆರೋಪಿಗಳು, ಕಳ್ಳತನ ಪ್ರಕರಣಗಳ ಸಂಬಂಧ ಆಗಾಗ ಪರಪ್ಪನ ಅಗ್ರಹಾರ ಜೈಲು ಸೇರುತ್ತಿದ್ದರು. ಈ ವೇಳೆ ಪರಸ್ಪರ ಪರಿಚಯವಾಗಿದ್ದು, ಜೈಲಿನಿಂದಲೇ ಮನೆ ಕಳ್ಳತನಕ್ಕೆ ಸಂಚು ರೂಪಿಸುತ್ತಿದ್ದರು. ಜಾಮೀನು ಪಡೆದು ಹೊರ ಬಂದ ಬಳಿಕ ಮೂವರು ಒಟ್ಟಾಗಿ ಕೃತ್ಯವೆಸಗುತ್ತಿದ್ದರು ಎಂದು ಪೊಲೀಸರು ಹೇಳಿದರು
Related Articles
ಮಾಡುತ್ತಿದ್ದ. ಈ ಸಂದರ್ಭದಲ್ಲಿ ನಾಗರಾಜ್ ಮತ್ತು ಕಿರಣ್ ಮನೆಯ ಹೊರಗಡೆ ನಿಂತು ನಿಗಾವಹಿಸುತ್ತಿದ್ದರು.
Advertisement
ವೃದ್ಧೆ ಬಳಕೆ: ಪ್ರಕರಣದಲ್ಲಿ ಬಂಧನವಾಗಿರುವ ಜಯನಗರ ನಿವಾಸಿ ನೀಲಮ್ಮ, ಸ್ವಂತ ಆಟೋ ಹೊಂದಿದ್ದು, ಈಆಟೋವನ್ನು ಆರೋಪಿ ರಾಜ ಬಾಡಿಗೆಗೆ ಓಡಿಸುತ್ತಿದ್ದ. ಹೀಗಾಗಿ ನೀಲಮ್ಮನಿಗೆ ನಾಲ್ಕೈದು ವರ್ಷಗಳಿಂದ ಆರೋಪಿಯ ಪರಿಚಯವಿದೆ. ಈ ಹಿನ್ನೆಲೆಯಲ್ಲಿ ಆರೋಪಿ ತನ್ನ ಸಹಚರರ ಜತೆ ಸೇರಿ ಕಳವು ಮಾಡುತ್ತಿದ್ದ ಚಿನ್ನಾಭರಣಗಳನ್ನು ನೀಲಮ್ಮಗೆ ಕೊಟ್ಟು, ಅವೆರಲ್ಲವೂ ತನ್ನ ಪತ್ನಿ, ಸಂಬಂಧಿಕರ ಒಡವೆಗಳು. ಮನೆ ಕಟ್ಟಲು, ಮಕ್ಕಳ ಶಾಲಾ ಫೀಸ್ ಕಟ್ಟಲು ಹಣ ಬೇಕು ಎಂದು ಸುಳ್ಳು ಹೇಳಿ ನಂಬಿಸುತ್ತಿದ್ದ. ಈತನ ಮಾತು ನಂಬುತ್ತಿದ್ದ ನೀಲಮ್ಮ, ಜಯನಗರದ ಅಕ್ಷಯ ಗೋಲ್ಡ್ ಕಂಪನಿ, ಹಿಂದೂಸ್ತಾನ್ ಗೋಲ್ಡ್ ಕಂಪನಿ, ಅಟ್ಟಿಕಾ ಗೋಲ್ಡ್ ಕಂಪನಿ, ಸುಲ್ತಾನ್ ಗೋಲ್ಡ್ ಕಂಪನಿಗಳಲ್ಲಿ ಚಿನ್ನ ಮಾರಾಟ ಮಾಡಿಸುತ್ತಿದ್ದರು. ಈ ರೀತಿ ಸಹಾಯ ಮಾಡಿದ ನೀಲಮ್ಮಗೆ ಆರೋಪಿ 2ರಿಂದ 3 ಸಾವಿರ ರೂ. ಹಣ ಕೊಡುತ್ತಿದ್ದ. ಆರೋಪಿ ಕಖ ಎಂದು ತಿಳಿಯದ ನೀಲಮ್ಮ, ಜೀವನ ನಿರ್ವಹಣೆಗೆ ಸಹಾಯವಾಗಲಿದೆ ಎಂದು ಹಣ ಪಡೆದುಕೊಳ್ಳುತ್ತಿದ್ದರು. ಮತ್ತೂಂದೆಡೆ ಜ್ಯುವೆಲರಿ ಅಂಗಡಿ ಮಾಲೀಕ, ಬಿಳೇಕಳ್ಳಿ ದೇವರ ಚಿಕ್ಕನಹಳ್ಳಿಯ ನಿವಾಸಿ ಸೈಯದ್ ಫಾರೂಕ್‌ಗೆ ಆರೋಪಿಗಳು ಚಿನ್ನಾಭರಣ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರುಹೇಳಿದರು. ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್, ಪಶ್ಚಿಮ ವಲಯ ಡಿಸಿಪಿ ರವಿ ಡಿ. ಚೆನ್ನಣ್ಣನವರ್ ಉಪಸ್ಥಿತರಿದ್ದರು. ಐಷಾರಾಮಿ ಜೀವನ
ಆರೋಪಿಗಳು ಚಿನ್ನಾಭರಣಗಳನ್ನು ಮಾರಾಟ ಮಾಡಿದ ಹಣದಲ್ಲಿ ಮೋಜು-ಮಸ್ತಿ, ಪ್ರವಾಸ ಎಂದೆಲ್ಲಾ ಐಷಾರಾಮಿ ಜೀವನ ನಡೆಸುತ್ತಿದ್ದರು. ಪ್ರತಿ ಬಾರಿ ಕೃತ್ಯವೆಸಗಿದ ಬಳಿಕ ತಮಿಳುನಾಡು, ಆಂಧ್ರಪ್ರದೇಶ, ಕೇರಳದ ಪ್ರವಾಸಿ ತಾಣಗಳಿಗೆ ಹೋಗುತ್ತಿದ್ದರು ಎಂಬುದುವಿಚಾರಣೆ ಸಂದರ್ಭದಲ್ಲಿ ತಿಳಿದು ಬಂದಿದೆ