Advertisement

ಉಡುಪಿಯಲ್ಲಿ ಶಂಕಿತ ಉಗ್ರರ ಬಂಧನ!

10:19 AM Nov 07, 2019 | sudhir |

ಉಡುಪಿ: ಉಡುಪಿ ಸಂಸ್ಕೃತ ಕಾಲೇಜು ಬಳಿ ಬುಧವಾರ ಸಾಯಂಕಾಲ ದುಷ್ಕೃತ್ಯಕ್ಕೆ ಹೊಂಚುಹಾಕಿದ್ದ ವ್ಯಕ್ತಿ ಹಾಗೂ ರಾತ್ರಿ ಮಲ್ಪೆಯಲ್ಲಿ ಬೋಟ್‌ನಲ್ಲಿ ಸಂಶಯಾತ್ಮಕವಾಗಿ ಸಂಚರಿಸುತ್ತಿದ್ದ 6 ಮಂದಿಯನ್ನು ಬಂಧಿಸುವ ಮೂಲಕ ಪೊಲೀಸರು ಜಿಲ್ಲೆಯಲ್ಲಿ ನಡೆಯುತ್ತಿದ್ದ ದೊಡ್ಡ ಸಂಚನ್ನು ವಿಫ‌ಲಗೊಳಿಸಿ¨ªಾರೆ!

Advertisement

ಆದರೆ ಇವರೆಲ್ಲ ನೈಜ ಉಗ್ರರಲ್ಲ…! ಪೊಲೀಸರು. ಇದು ಭಾರತೀಯ ನೌಕಾಪಡೆ, ಭಾರತೀಯ ತಟರಕ್ಷಣಾ ಪಡೆ, ಕರಾವಳಿ ಕಾವಲು ಪಡೆ, ಜಿಲ್ಲಾ ಪೊಲೀಸ್, ಜಿಲ್ಲಾಡಳಿತ, ಬಂದರು ಮತ್ತು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಕಸ್ಟಮ್ಸ್ ಹಾಗೂ ಇತರ ಇಲಾಖೆಗಳು ಜಂಟಿಯಾಗಿ ನ. 6 ಮತ್ತು 7ರಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಸುತ್ತಿರುವ ಸಾಗರ ಕವಚ ಅಣಕು ಕಾರ್ಯಾಚರಣೆ.

ಕಾರ್ಯಾಚರಣೆಯಲ್ಲಿ 200ಕ್ಕೂ ಅಧಿಕ ಪೊಲೀಸ್‌ ಸಿಬಂದಿ, 27 ಮಂದಿ ಅಧಿಕಾರಿಗಳು ಭಾಗವಹಿಸಿದ್ದು, 15 ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಪಾಳಿಯಲ್ಲಿ 36 ಗಂಟೆ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೇ ಸ್ಫೋಟಕವಸ್ತುಗಳು ಕಂಡುಬಂದರೆ ನಿಷ್ಕ್ರಿಯಗೊಳಿಸಲು ಡಿಆರ್‌ನಿಂದ 2 ತಂಡ ರಚಿಸಲಾಗಿದ್ದು, ಉಡುಪಿ ಮತ್ತು ಕುಂದಾಪುರದಲ್ಲಿ ನಿಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next