Advertisement

Interstate ಕಳ್ಳರ ಬಂಧನ; 61ಲಕ್ಷ ರೂ. ಮೌಲ್ಯದ ಸಿಗರೇಟ್ ವಶಕ್ಕೆ

08:53 PM Aug 09, 2023 | Team Udayavani |

ವಿಜಯಪುರ : ನಗರದಲ್ಲಿ ಈಚೆಗೆ ಸಂಭವಿಸುತ್ತಿದ್ದ ಕಳ್ಳತನ ಪ್ರಕರಣದ ತನಿಖೆಯಲ್ಲಿದ್ದ ಪೊಲೀಸರಿಗೆ ಅಂತರಾಜ್ಯ ಸಿಗರೇಟ್-ವಾಹನ ಕಳ್ಳರು ಸೆರೆ ಸಿಕ್ಕಿದ್ದಾರೆ. 8 ಆರೋಪಿಗಳಲ್ಲಿ ಸೆರೆ ಸಿಕ್ಕಿರುವ ಐವರಿಂದ 61.49 ಲಕ್ಷ ರೂ. ಮೌಲ್ಯದ ಸಿಗರೇಟ್-ಕಾರು ವಶಕ್ಕೆ ಪಡೆಯಲಾಗಿದೆ.

Advertisement

ಬಂಧಿತರನ್ನು ಮಹಾರಾಷ್ಟ್ರದ ನವಿಮುಂಬೈನ ಶಿವಾಜಿನಗರದ  ಡ್ರೈವರ್ ಮಹ್ಮದ್ ರೆಹಾನೆ ಶೇಖ್(45), ಪುಣೆಯ ಹಳೆಸಾಂಗ್ಲಿ ಕಿರಾಣಿ ವ್ಯಾಪಾರಿ ರಾಮಪಾಲ್ ಹರಿರಾಮ ಚೌಧರಿ( 31), ಪುಣೆಯ ರಾವೇತ್ ನಿವಾಸಿ ಹೊಟೇಲ್ ಕಾರ್ಮಿಕ ತೇಜರಾಮ ಚಂಪಾಲಾಲ್ ಉನೇಚ್( 39), ಪುಣೆಯ ಸಾಸವಾಡದ ಕಿರಾಣಿ ವ್ಯಾಪಾರಿ ರಾಜಸ್ಥಾನ ಮೂಲದ  ಚೈನಾರಮ್ ಮಿಶ್ರೀಲಾಲ್ ಜಾಟ(36), ರಾಜಸ್ಥಾನ ಮೂಲದ ಇನ್ನೋರ್ವ ಆರೋಪಿ ಪುಣೆಯ ಸಾಸವಾಡದ  ಕಿರಾಣಿ ವ್ಯಾಪಾರಿ ದೀಪಾರಾಮ ಜಾಟ್ (32 )ಬಂಧಿತ ಆರೋಪಿಗಳು. ಪ್ರಕರಣದ ಇನ್ನೂ ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

ಬಂಧಿತರಿಂದ 37,49,514 ಲಕ್ಷ ರೂ. ಮೌಲ್ಯದ ಐಟಿಸಿ ಕಂಪನಿಯ ಸಿಗರೇಟ್ ಹಾಗೂ ಒಂದು ಗೂಡ್ಸ್ ವಾಹನ, ಫೋರ್ಡ್ ಕಾರು, ಮಹಿಂದ್ರಾ ಕಾರು ಸೇರಿದಂತೆ 61,49,514 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಎಸ್ಪಿ ಎಚ್.ಡಿ.ಆನಂದಕುಮಾರ, ಎಎಸ್ಪಿ ಎಸ್.ಕೆ.ಮಾರಿಹಾಳ, ಡಿಎಸ್ಪಿ ಬಸವರಾಜ ಯಲಿಗಾರ, ಸಿದ್ದೇಶ್ವರ ಕೃಷ್ಣಾಪೂರ, ಪೊಲೀಸ್ ಉಪ-ಅಧೀಕ್ಷಕರು ಇವರ ಮಾರ್ಗದರ್ಶನದಲ್ಲಿ ಗೋಲಗುಂಬಜ ಸಿಪಿಯ ವಿಜಯಮಾಹಾಂತೇಶ ಮಠಪತಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಸ್‍ಐಗಳಾದ ಐ.ಎಂ.ದುಂಡಸಿ, ಎಸ್.ಸಿ.ಗುರುಬೇಟ್ಟಿ ಜ್ಯೋತಿ ವಾಲಿಕಾರ, ಸಚಿನ ಆಲಮೇಲಕರ ತನಿಖಾ ತಂಡದಲ್ಲಿದ್ದರು.

ಸಿಬ್ಬಂದಿಗಳಾದ ಎಸ್.ಎಸ್.ಮಾಳೆಗಾಂವ್ ಹಬಿ.ಎಂ.ಪವಾರ್, ವೈ.ಪಿ.ಕಬಾಡೆ, ಐ.ಆರ್.ಮಂಕಣಿ, ಎಸ್.ಜಿ.ಗಾಯನ್ನವರ, ಸಂಜು ಬನಪಟ್ಟಿ, ಪುಂಡಲಿಕ ಬಿರಾದಾರ, ಮಹೇಶ ಸಾಲಿಕೇರಿ, ಜೆ.ಎಸ್.ವನಂಜಕರ, ಈರಪ್ಪ ಸೋಡ್ಡಿ, ಆನಂದ ಕಂಬಾರ, ಮೌನೇಶ ಬಡಿಗೇರ, ನಿಂಗಣ್ಣ ವಟಾರ, ಸುನೀಲ ಗೌಳಿ, ಗುಂಡು ಗಿರಣೀವಡ್ಡರ, ಮತೀನ ಬಾಗವಾನ ಇವರಿದ್ದ ತಂಡ ಆರೋಪಿಗಳ ಬಂಧನ ಕಾರ್ಯಾಚರಣೆಯ ತಂಡದಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next