Advertisement

ಲಂಚದ ರೂಪದಲ್ಲಿ ಮದ್ಯ ಸ್ವೀಕರಿಸುತ್ತಿದ್ದ ಅಧಿಕಾರಿಯ ಬಂಧನ

10:10 AM Jun 05, 2019 | Vishnu Das |

ಲಾತೂರ್‌: ಲಂಚದ ರೂಪದಲ್ಲಿ ಹಣ ಪಡೆಯುವವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ಕಾರ್ಯಾಚರಣೆ ನಡೆಸಿದ ಪ್ರಕರಣಗಳು ಅನೇಕ ವೇಳೆ ಕಂಡುಬಂದಿವೆೆ. ಅದೇ ಲಾತೂರಿ ನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಯೋರ್ವ ಲಂಚದ ರೂಪದಲ್ಲಿ ಮದ್ಯ ಸ್ವೀಕರಿಸಿದ್ದ ರ ವಿರುದ್ಧ ಕಾರ್ಯಾಚರಣೆ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ ಆರೋಪಿಯನ್ನು ಬಂಧಿಸಿದೆ.

Advertisement

ಲಾತೂರ್‌ ತಾಲೂಕಿನ ನಿವಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ವೈದ್ಯಕೀಯ ಅಧಿಕಾರಿ ಡಾ| ಬಾಲಚಂದ್ರ ಹರಿಹರ ಚಾಕೂರ್ಕರ್‌, ಹಣದ ಬದಲು ಮದ್ಯದ ಬಾಟಲಿ ಗಳ ಲಂಚದ ರೂಪದ‌ಲ್ಲಿ ಸ್ವೀಕರಿಸು ತ್ತಿದ್ದ. ಆರೋಗ್ಯ ಇಲಾಖೆ ಸಿಬಂದಿ ಯೋರ್ವರು ನೀಡಿದ ದೂರಿನ ವಿರುದ್ಧ ಕಾರ್ಯಾಚರಣೆ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ ಆರೋಪಿಯನ್ನು ಬಂಧಿಸಿದೆ.

ಸಂಬಂಧಿಸಿದ ಸಿಬಂದಿಯ ಬಿ ಪ್ಲಸ್‌ ಶ್ರೇಣಿಯನ್ನು ರದ್ದು ಗೊಳಿಸುವ ಜತೆಗೆ ಅವರಿಗೆ ಎ ಪ್ಲಸ್‌ ಮಾಡಬೇಕು ಎಂದು ವರದಿ ಸಲ್ಲಿಸುವ ಪತ್ರ ಅಧಿಕಾರಿ ಬಾಲಚಂದ್ರ ಚಾಕೂರ್ಕರ್‌ ಬಳಿ ಬಂದಿದ್ದು, ಇದನ್ನು ಸಲ್ಲಿಸಬೇಕಾದರೆ ಮದ್ಯದ ಬಾಟಲಿಗಳನ್ನು ನೀಡಬೇಕೆಂದು ಅಧಿಕಾರಿ ಬೇಡಿಕೆ ಇರಿಸಿದ್ದ. ಈ ಹಿಂದೆ ಅನೇಕ ಬಾರಿ ಯಾವುದೇ ಕೆಲಸ ಮಾಡಬೇಕಾದರೂ ಮದ್ಯದ ಬಾಟಲಿ ನೀಡಬೇಕೆಂದು ಬೇಡಿಕೆ ಇರಿಸುತ್ತಿದ್ದ. ಇದರಿಂದ ರೋಸಿರೋದ ಸಿಬಂದಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ದೂರಿನಂತೆ ಕಾರ್ಯಾಚರಣೆ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ ಡಾ| ಚಾಕೂರ್ಕರ್‌ ಅವರನ್ನು ಸುಮಾರು 980ರೂ. ಗಳಷ್ಟು ಬೆಲೆಬಾಳುವ ಮದ್ಯದ ಬಾಟಲಿ ಜತೆ ಬಂಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next