ಬಂಟ್ವಾಳ: ಪಾಣೆಮಂಗಳೂರಿನ ಮದುವೆ ಹಾಲೊಂದರಲ್ಲಿ ಮಗುವಿನ ಕುತ್ತಿಗೆಯ ಸರ ಎಳೆಯಲು ಯತ್ನಿಸಿದ ಮಹಿಳೆಯೋರ್ವಳನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದು, ಆರೋಪಿ ಮಹಿಳೆಯನ್ನು ವಿಚಾರಿಸಿದಾಗ ಇತರೆಡೆಯು ಕೂಡ ಸಮಾರಂಭಗಳಲ್ಲಿ ಇದೇ ರೀತಿ ಚಿನ್ನಾಭರಣ ಎಗರಿಸುತ್ತಿದ್ದ ಕುರಿತು ಒಪ್ಪಿಕೊಂಡಿದ್ದಾಳೆ.
ಮುಡಿಪು ನಿವಾಸಿ ಫಾತಿಮಾ ಸಹಿನಾಜ್ ಬಂಽತ ಆರೋಪಿ. ಡಿ. 10 ರಂದು ಪಾಣೆಮಂಗಳೂರಿನಲ್ಲಿ ನಡೆದ ಮದುವೆಯಲ್ಲಿ ಪಾಲ್ಗೊಂಡಿದ್ದ ಮಗುವಿನ ಚಿನ್ನ ಎಳೆಯಲು ಪ್ರಯತ್ನಿಸಿದ್ದು, ಈ ವೇಳೆ ಆಕೆ ಸಿಕ್ಕಿ ಬಿದ್ದಿದ್ದಳು. ತತ್‌ಕ್ಷಣ ಬಂಟ್ವಾಳ ನಗರ ಪೊಲೀಸರಿಗೆ ಮಾಹಿತಿ ನೀಡಿ ಆಯ್ಕೆಯನ್ನು ವಶಕ್ಕೆ ಪಡೆದಿದ್ದರು.
ಬಳಿಕ ಆಕೆಯನ್ನು ವಿಚಾರಿಸಿದಾಗ ಆಕೆಯ ಕಳವಿನ ದಂಧೆ ಬೆಳಕಿಗೆ ಬಂದಿದ್ದು, ಮಹಿಳೆಯರು ಹಾಗೂ ಮಕ್ಕಳನ್ನು ಟಾರ್ಗೆಟ್ ಮಾಡಿ ಸಮಾರಂಭಗಳಲ್ಲಿ ಚಿನ್ನಾಭರಣ ಎಳೆಯುವ ವಿಚಾರವನ್ನು ಒಪ್ಪಿಕೊಂಡಿದ್ದಾಳೆ. ಜತೆಗೆ ಮದುವೆ ಹಾಲ್‌ಗಳ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.
ಘಟನೆಯ ಕುರಿತು ಕೆ.ಸಿ.ರೋಡು ನಿವಾಸಿ ಸಿದ್ದಿಕ್ ಅವರು ದೂರು ನೀಡಿದ್ದು, ಅವರ ಮಗಳ ಸರ ಎಳೆಯಲು ಪ್ರಯತ್ನಿಸಿದ್ದಳು. ಬಂಽತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.