Advertisement

ಮಂಗಳೂರು: ದರೋಡೆ,ಸರಗಳ್ಳತನ, ಸೇರಿದಂತೆ 24 ಪ್ರಕರಣಗಳಲ್ಲಿ ಬೇಕಾಗಿದ್ದ 7 ಮಂದಿ ಆರೋಪಿಗಳ ಬಂಧನ

03:00 PM Nov 02, 2021 | Team Udayavani |

ಮಂಗಳೂರು: ಸರ ಕಳ್ಳತನ,ದರೋಡೆ, ದ್ವಿಚಕ್ರ ವಾಹನ ಕಳವು ಹಾಗೂ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸೇರಿದಂತೆ 24 ಪ್ರಕರಣಗಳಲ್ಲಿ ಭಾಗಿಯಾದ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಬಂಧಿತ ಆರೋಪಿಗಳನ್ನು, ಚೊಕ್ಕಬೆಟ್ಟುವಿನ ಅರ್ಷದ್ (42) ಪಂಜಿಮೊಗರು ನಿವಾಸಿ ಸಫ್ವಾನ್ (29), ಕಾವೂರಿನ ಮಹಮ್ಮದ್ ತೌಸಿಫ್ (30), ಶಾಂತಿನಗರದ ಅಬ್ದುಲ್ ಖಾದರ್ ಸಿನಾನ್ (30),  ಕುಂದಾಪುರದ ಕುಂಬಾಶಿಯ ಮೊಹಮ್ಮದ್ ರೆಹಮಾನ್ (23) ಕಾವೂರು ನಿವಾಸಿ ಅಬ್ದುಲ್ ಇಶಾಮ್ (26) ಮಲ್ಲೂರಿನ ಮಹಮ್ಮದ್ ಫಜಲ್ (32) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಮುಖಭಂಗ: ಕಾಂಗ್ರೆಸ್ ನ ಶ್ರೀನಿವಾಸ ಮಾನೆ ವಿಜಯ

ಆರೋಪಿಗಳಿಂದ 10 ಲಕ್ಷ ಮೌಲ್ಯದ 210 ಗ್ರಾಂ ತೂಕದ ಚಿನ್ನದ ಸರ, ಕರಿಮಣಿ ಸರಗಳನ್ನು ಹಾಗೂ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು ವಿವಿಧ ಕಡೆಗಳಲ್ಲಿ ಕಳ್ಳತನ ಮಾಡಿರುವ ಚಿನ್ನಾಭರಣಗಳನ್ನು ಹಾಗೂ 5 ಕ್ಕೂ ಹೆಚ್ಚು ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲು ಬಾಕಿಯಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಪಶ್ಚಿಮಬಂಗಾಳದ ಬಿಜೆಪಿ ಭದ್ರಕೋಟೆಯಲ್ಲಿ ಟಿಎಂಸಿ ಗೆಲುವು, 2 ಲೋಕಸಭೆಯಲ್ಲಿ ಬಿಜೆಪಿ ಮುನ್ನಡೆ

Advertisement

ಬಜ್ಪೆ ಠಾಣೆಯಲ್ಲಿ 1 ಸರಗಳ್ಳತನ,ಬಂದರು ಠಾಣೆಯಲ್ಲಿ 1  ಸರಗಳ್ಳತನ ಪ್ರಕರಣ, ಬರ್ಕೆ ಠಾಣೆಯಲ್ಲಿ 1 ಸರಗಳ್ಳತನ ಪ್ರಕರಣ, ಕಾವೂರು ಠಾಣೆಯಲ್ಲಿ 4 ಸರಗಳ್ಳತನ ಪ್ರಕರಣ, ಮಂಗಳೂರು ಉತ್ತರ, ಉರ್ವ, ಮಂಗಳೂರು ಪೂರ್ವ, ಮಂಗಳೂರು ಟೌನ್ ಮತ್ತು ಉಳ್ಳಾಲ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ, ಬೈಕ್ ಕಳ್ಳತನ, ದರೋಡೆ ಪ್ರಕರಣ, ಪೊಲೀಸ್ ಹಲ್ಲೆ ಸೇರಿದಂತೆ 24 ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದು, ಅವರ ಪತ್ತೆಗಾಗಿ ವಿಶೇಷ ಪೊಲೀಸ್ ತಂಡ ರಚನೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next