Advertisement

ಗಡಿಯಲ್ಲಿ ಪಾಕ್‌ ತೀವ್ರ ದಾಳಿ ಎದುರಿಸಲು ಸೂಕ್ತ ವ್ಯವಸ್ಥೆ: ಸರಕಾರ

07:00 PM Jan 20, 2018 | udayavani editorial |

ಜಮ್ಮು : ಪಾಕಿಸ್ಥಾನ ಕಳೆದ ಕೆಲವು ದಿನಗಳಿಂದ ಗಡಿ ನಿಯಂತ್ರಣ ರೇಖೆಯಲ್ಲಿ  ನಿರಂತರವಾಗಿ ಗುಂಡಿನ ಮತ್ತು ಶೆಲ್‌ ದಾಳಿ ನಡೆಸುತ್ತಿರುವುದರಿಂದ ಈ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕೆ ವ್ಯಾಪಕ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜಮ್ಮು ಕಾಶ್ಮೀರ ಸರಕಾರ ಇಂದು ಹೇಳಿದೆ.

Advertisement

ಕಳೆದ ಗುರುವಾರದಿಂದ ಪಾಕ್‌ ಗುಂಡಿನ ದಾಳಿಗೆ ಇಬ್ಬರು ಯೋಧರು, ಇಬ್ಬರು ಬಿಎಸ್‌ಎಫ್ ಜವಾನರು ಮತ್ತು 9 ಪೌರರು ಹತರಾಗಿದ್ದಾರೆ; 46 ಮಂದಿ ಗಾಯಗೊಂಡಿದ್ದಾರೆ.

ಪಾಕ್‌ ದಾಳಿಯಿಂದ ಉದ್ಭವಿಸುವ ಯಾವುದೇ ವೈದ್ಯಕೀಯ ವಿಷಮ ಪರಿಸ್ಥಿತಿಯನ್ನು  ನಿಭಾಯಿಸುವುದಕ್ಕಾಗಿ ಪರ್ಯಾಪ್ತ ಸಂಖ್ಯೆಯ ಪರಿಣತ ವೈದ್ಯರು, ಅರೆ ವೈದ್ಯಕೀಯ ಸಿಬಂದಿಗಳು  ಮತ್ತು ಜೀವ ರಕ್ಷಕ ಔಷಧಿ, 197 ಅಂಬುಲೆನ್ಸ್‌ಗಳನು ವ್ಯವಸ್ಥೆಗೊಳಿಸಲಾಗಿದೆ ಎಂದು ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಬಲಿ ಭಗತ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next