ಚಾಮರಾಜನಗರ: ಕೋವಿಡ್ ಸೋಂಕು ಸಮುದಾಯ ಮಟ್ಟಕ್ಕೆ ಹರಡುವುದನ್ನು ತಡೆಗಟ್ಟಲು ಕಾಂಗ್ರೆಸ್‌ನಿಂದ ಪ್ರತಿ ಹಳ್ಳಿಗಳಲ್ಲಿ ಮನೆ ಮನೆಗೆ ತೆರಳಿ ಆರೋಗ್ಯ ಹಸ್ತ ಅಭಿಯಾನ ನಡೆಸಲಾಗುತ್ತಿದೆ ಎಂದು ಶಾಸಕ ಸಿ. ಪುಟ್ಟರಂಗ ಶೆಟ್ಟಿ ತಿಳಿಸಿದರು.
ತಾಲೂಕಿನ ಹರದನಹಳ್ಳಿ ಗ್ರಾಪಂ ವ್ಯಾಪ್ತಿಯ ಬಂಡಿಗೆರೆಯಲ್ಲಿ ನಡೆದ ಆರೋಗ್ಯ ಹಸ್ತ ಅಭಿಯಾನಕ್ಕೆ ಥರ್ಮಲ್ ಸ್ಕ್ಯಾನಿಂಗ್ ಮಾಡುವ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್ ಸಮುದಾಯಕ್ಕೆ ಹರಡುವುದನ್ನು ತಡೆಗಟ್ಟಲು ಕಾಂಗ್ರೆಸ್ ಪಕ್ಷ ಹಳ್ಳಿಗಳಲ್ಲಿಕೊರೊನಾವಾರಿಯರ್ಸ್‌ಮೂಲಕಪರೀಕ್ಷೆಮಾಡಿಸಿ, ಜನರಲ್ಲಿ ಜಾಗೃತಿ ಮುಡಿಸುವಕೆಲಸ ಮಾಡುತ್ತಿದೆ ಎಂದರು.
ಸರ್ಕಾರವೇ ಮಾಡಲಿ ಎಂದು ಕುಳಿತರೆ ಗಂಡಾಂತರವಾಗುತ್ತಿದೆ. ನಾವು ಜನರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕೋವಿಡ್ ವಾರಿಯರ್ ಆಗಿ ಜನರ ಸಂಕಷ್ಟಗಳಿಗೆ ಸ್ಪಂದಿಸ ಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆರೋಗ್ಯ ಹಸ್ತ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದರು. ಗ್ರಾಪಂ ಹಾಗೂ ವಾರ್ಡ್‌ಗಳ ಮಟ್ಟದಲ್ಲಿ ನಡೆಯುವ ಈ ಅಭಿ ಯಾನದಲ್ಲಿ ಪ್ರತಿಯೊಬ್ಬರೂಕೋವಿಡ್‌ಪರೀಕ್ಷೆಮಾಡಿಸಿಕೊಂಡು ಆರೋಗ್ಯವನ್ನುಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್‌ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಂಸದ ಆರ್. ಧ್ರುವನಾರಾಯಣ ನೇತೃತ್ವದಲ್ಲಿ ಆರೋಗ್ಯ ಹಸ್ತ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ. ಪಕ್ಷದಿಂದ ನೇಮಕವಾಗಿರುವ ಕೋವಿಡ್ ವಾರಿಯಸ್‌ಗಳು ಯುದ್ದೋಪಾದಿಯಲ್ಲಿಕೆಲಸ ಮಾಡುತ್ತಿದ್ದಾರೆ ಎಂದರು. ಬ್ಲಾಕ್ ಅಧ್ಯಕ್ಷ ಎ.ಎಸ್. ಗುರುಸ್ವಾಮಿ ಮಾತನಾಡಿ, ಚಾಮರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಗ್ರಾಪಂಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿ ಮನೆಯಲ್ಲೂ ಮಹಿಳೆಯರು, ವೃದ್ಧರು ಹಾಗೂ ಮಕ್ಕಳು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ವೀಕ್ಷಕಿ ಪಲ್ಲವಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಜಿಪಂ ಸದಸ್ಯ ರಮೇಶ್, ಮಾಜಿ ಸದಸ್ಯೆ ಕಾವೇರಿ ಶಿವಕುಮಾರ್, ತಾಪಂ ಸದಸ್ಯ ಮಹದೇವಶೆಟ್ಟಿ, ಯಜಮಾನರಾದ ಕೃಷ್ಣಶೆಟ್ಟಿ, ಕೃಷ್ಣರಾಜು, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಬಂಗಾರಶೆಟ್ಟಿ, ವಾರಿಯರ್ಗಳಾದ ಜಯಸ್ವಾಮಿ, ಕೇಶವಮೂರ್ತಿ, ಚಿಕ್ಕಮಹದೇವ್, ಹರದನಹಳ್ಳಿ ನವೀನ್, ನರಸನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು.