Advertisement

ಮುಂಜಾಗ್ರತೆಯಿಂದ ಕೋವಿಡ್ ತಡೆ ಸಾಧ್ಯ

03:15 PM Sep 09, 2020 | Suhan S |

ಯಮಕನಮರಡಿ: ಮುಂಜಾಗ್ರತೆಯಿಂದ ಕೊರೊನಾ ತಡೆ ಸಾಧ್ಯವಿದೆ. ಸೋಂಕಿಗೆ ಯಾರೂ ಕೂಡ ಭಯ ಪಡುವ ಅಗತ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

Advertisement

ಲಿಂ| ಶ್ರೀ ಗುರುಸಿದ್ಧ ಮಹಾಸ್ವಾಮಿಗಳ ಸಭಾಮಂಟಪದಲ್ಲಿಜಿಲ್ಲಾಮಟ್ಟದ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಸಸಿಗೆ ನೀರುಣಿಸಿ ಚಾಲನೆ ನೀಡಿ ಅವರು ಮಾತನಾಡಿದರು. ಕೋವಿಡ್ ಯೋಧರಿಗೆ ಸೋಂಕು ತಪಾಸಣೆ ಮಾಡುವ ಕ್ರಮವನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಡಲಾಗಿದೆ. ಕೋವಿಡ್ ತಡೆಗಟ್ಟಲು ರಾಜ್ಯಾದ್ಯಂತ್ಯ ಕಾಂಗ್ರೆಸ್‌ ಪಕ್ಷದಿಂದ ಮುಂಜಾಗ್ರತೆ ಕ್ರಮಗಳನ್ನು ಹಮ್ಮಿಕೊಂಡು ಜಿಲ್ಲಾಮಟ್ಟದ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ನಾಳೆಯಿಂದ ಗೋಕಾಕ, ಚಿಕ್ಕೋಡಿಯಲ್ಲಿ ಆರಂಭಿಸಿ ಸಂಪೂರ್ಣವಾಗಿ ತಪಾಸಣೆ ಮಾಡಲಾಗುವುದು. ಯಮಕನಮರಡಿ ಕ್ಷೇತ್ರದ 33 ಗ್ರಾಪಂಗಳಲ್ಲಿ ಪ್ರತಿ ಇಬ್ಬರು ಯೋಧರನ್ನು ನೇಮಿಸಿ ಪ್ರತಿ ಮನೆ-ಮನೆಗೆತೆರಳಿ ಜನರ ಆರೋಗ್ಯ ತಪಾಸಣೆ ಮಾಡುವ ಕಾರ್ಯ ಆರಂಭಿಸಲಾಗುವುದು ಎಂದರು.

ಕೋವಿಡ್ ವೈರಸ್‌ ತಡೆಯುವಲ್ಲಿ ಶ್ರಮ ವಹಿಸಿದ ಯುವಕರಿಗೆ, ಯೋಧರಿಗೆ ಒಂದು ದಿನದ ತರಬೇತಿ ಹಾಗೂ ಕಿಟ್‌ ವಿತರಿಸುವ ಮೂಲಕ ಅವರಿಗೆ ಪಕ್ಷ ಸಂಘಟನೆಗೆ ಹೆಚ್ಚಿನ ಆಸಕ್ತಿ ವಹಿಸಲು ಪ್ರೋತ್ಸಾಹಿಸುವುದರ ಜೊತೆ ಕಾಂಗ್ರೆಸ್‌ಪಕ್ಷ ಬೇರುಮಟ್ಟದಿಂದ ಸಂಘಟಿಸುವ ಉದ್ದೇಶದಿಂದ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು. ಲಕ್ಷ್ಮಣರಾವ್‌ ಚಿಂಗಳೆ, ವೀರಕುಮಾರ ಪಾಟೀಲ, ರಾಮಣ್ಣಾ ಗುಳ್ಳಿ, ಅರುಣ ಕಟಾಂಬಳೆ, ಸುನೀಲ ಹಮ್ಮಣ್ಣವರ, ವೀರಣ್ಣಾ ಬಿಸಿರೊಟ್ಟಿ, ಸಿದ್ದಗೌಡ ಸುಣಗಾರ, ಮಹಾಂತೇಶ ಮಗದುಮ್ಮ, ರವೀಂದ್ರ ಜಿಂಡ್ರಾಳಿ, ದಸ್ತಗೀರ ಬಸ್ಸಾಪುರಿ, ಕಿರಣ ರಜಪೂತ, ಮಂಜುನಾಥ ಪಾಟೀಲ, ಮಲ್ಲಗೌಡ ಪಾಟೀಲ,ಮಾರುತಿ ಬೆನಕೊಳಿ, ಮಹಾದೇವ ಪಟೋಳಿ ಇದ್ದರು.

………………………………………………………………………………………………………………………………………………………

 ಜನರ ಆರೋಗ್ಯದತ್ತ ಗಮನ ಹರಿಸಲು ಸೂಚನೆ : ಮೂಡಲಗಿ: ಕೋವಿಡ್‌-19ರ ಪ್ರವೇಶದಿಂದಾಗಿ ದೇಶದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಧೈರ್ಯಗುಂದಿದ ಇಂತಹ ಸ್ಥಿತಿಯಲ್ಲಿ ಕಾಂಗ್ರೆಸ್‌ ಪಕ್ಷ ಬಡವರಿಗೆ ಆರೋಗ್ಯಹಸ್ತ ಚಾಚಿದ್ದು, ಜನರ ಆರೋಗ್ಯ ಸುರಕ್ಷತೆಯ ಕಡೆಗೆ ಗಮನಹರಿಸಬೇಕೆಂದು ಕಾರ್ಯಕರ್ತರಿಗೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ವಿನಯನಾವಲಗಟ್ಟಿ ಕರೆ ನೀಡಿದರು.

Advertisement

ಕೌಜಲಗಿ ಪಟ್ಟಣದ ಡಾ| ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಜರುಗಿದ ಅರಭಾವಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ಪಕ್ಷದ ಕೋವಿಡ್‌-19ವಾರಿಯಾರ್ಸ್‌ಗಳ “ಆರೋಗ್ಯ ಹಸ್ತ’ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾಂಗ್ರೆಸ್‌ ಅಧಿ ಕಾರದಲ್ಲಿಲ್ಲದಿದ್ದರೂ ಜನಸಾಮಾನ್ಯರ ಸೇವೆಗೆ ಸದಾ ಕಂಕಣಬದ್ಧವಾಗಿದೆ. ಪ್ರತಿ ಗ್ರಾಮ ಮಟ್ಟದಲ್ಲಿ ಓರ್ವ ಕಾಂಗ್ರೆಸ್‌ ಪಕ್ಷದ “ಆರೋಗ್ಯ ಹಸ್ತ’ ಕಾರ್ಯಕರ್ತ ಸೇವೆ ಸಲ್ಲಿಸಲಿದ್ದಾನೆ ಎಂದು ನಾವಲಗಟ್ಟಿ ಹೇಳಿದರು.

ಆರೋಗ್ಯ ಹಸ್ತ ಕಾರ್ಯಕ್ರಮದ

ಅರಭಾವಿ ಕ್ಷೇತ್ರದ ಸಂಚಾಲಕ ಸದಾನಂದ ಡಂಗನವರ ಮಾತನಾಡಿ, ಕಾಂಗ್ರೆಸ್‌ ದೀನದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ, ಬಡವರ ಪಕ್ಷವಾಗಿದೆ. ಅವರ ಆರೋಗ್ಯ ರಕ್ಷಣೆಯೇ ಪಕ್ಷದ ಪ್ರಮುಖ ಕರ್ತವ್ಯವಾಗಿದೆ ಎಂದರು.

ಮುಖಂಡ ಅರವಿಂದ ದಳವಾಯಿ ಮಾತನಾಡಿದರು. ಡಾ|ಮಾರ್ಟಿನ್‌ ಅವರು ಆರೋಗ್ಯಹಸ್ತ ಕಾರ್ಯಕರ್ತರಿಗೆ ತರಬೇತಿ ನೀಡಿದರು. ಅರಭಾವಿ ಕ್ಷೇತ್ರದ 40 ಕಾರ್ಯಕರ್ತರಿಗೆ ಆರೋಗ್ಯ ಹಸ್ತ ಕಿಟ್‌ ವಿತರಿಸಲಾಯಿತು. ಅರಭಾವಿ ಕ್ಷೇತ್ರದ ನೂತನ ಪದಾಧಿ ಕಾರಿಗಳಿಗೆ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಅಧಿಕಾರ ಹಸ್ತಾಂತರಿಸಿದರು.

ಅಲ್ಪಸಂಖ್ಯಾತರ ಘಟಕದ ನೂತನ ಅಧ್ಯಕ್ಷ ಇಮಾಮಸಾಬ ಹೂನ್ನೂರ, ಗುಲಾಬ್‌ ಬಾಳೇಕುಂದ್ರಿ, ವಿ.ಪಿ.ನಾಯಿಕ, ಗುರಪ್ಪ ಹಿಟ್ಟಣಗಿ, ಬಸನಗೌಡ ಪಾಟೀಲ (ಪಟಗುಂದಿ), ಸುರೇಶ ಮಗದುಮ್‌, ಚನ್ನಯ್ಯ ನಿರ್ವಾಣಿ,ಹನಮಂತಗೌಡ ಚಿಕ್ಕೇಗೌಡರ, ಶಂಕರ ಸಣ್ಣಮೇತ್ರಿ, ಮೆಹಬೂಬ ಮುಲ್ತಾನಿ, ಸಿದ್ದಪ್ಪ ಸಣ್ಣಕ್ಕಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next