ಗಯಾ (ಬಿಹಾರ): ಇಲ್ಲಿನ ಭಾರತೀಯ ಸೇನೆಯ ಅಧಿಕಾರಿಗಳ ತರಬೇತಿ ಅಕಾಡೆಮಿಯ ವಿಮಾನವೊಂದು ಇಬ್ಬರು ಟ್ರೈನಿ ಪೈಲಟ್‌ಗಳೊಂದಿಗೆ ಶುಕ್ರವಾರ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ.
ಗಯಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ಬಂಗಜೀತ್ ಸಹಾ ಅವರ ಪ್ರಕಾರ, ಇಬ್ಬರೂ ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೈಲಟ್‌ಗಳು ತುರ್ತು ಭೂಸ್ಪರ್ಶ ಮಾಡಲು ಯತ್ನಿಸಿದಾಗ ಬೋಧಗಯಾ ಬ್ಲಾಕ್‌ನ ಗ್ರಾಮಕ್ಕೆ ಹೊಂದಿಕೊಂಡಿರುವ ಹೊಲಗಳಲ್ಲಿ ಬಿದ್ದಿದೆ ಎಂದು ಅವರು ಹೇಳಿದರು.
ತರಬೇತಿ ನೀಡಲಾಗುತ್ತಿದ್ದ ವಿಮಾನ ಕೆಳಗೆ ಬೀಳುವುದನ್ನು ಗಮನಿಸಿದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಕೆಡೆಟ್‌ಗಳನ್ನು ಹೊರಗೆ ತೆಗೆದಿದ್ದಾರೆ ಎಂದು ವರದಿಯಾಗಿದೆ. ಕೂಡಲೇ ಬಂದ ಸೇನಾ ಸಿಬ್ಬಂದಿ ಅವರನ್ನು ಕರೆದೊಯ್ದಿದ್ದು, ಅಪಘಾತಕ್ಕೀಡಾದ ವಿಮಾನದ ಅವಶೇಷಗಳನ್ನೂ ಸಂಗ್ರಹಿಸಲಾಗಿದೆ.
“ಅಪಘಾತಕ್ಕೆ ಕಾರಣವಾಗಿರಬಹುದಾದ ತಾಂತ್ರಿಕ ದೋಷದ ಸ್ವರೂಪವು ತಜ್ಞರ ಪರೀಕ್ಷೆಯ ನಂತರವೇ ತಿಳಿಯುತ್ತದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕರು ತಿಳಿಸಿದ್ದಾರೆ.