Advertisement

ಪಾಕಿಸ್ಥಾನದ ಸ್ನೈಪರ್‌ ದಾಳಿಗೆ ಯೋಧ ಸಾವು

07:15 AM Nov 12, 2018 | Team Udayavani |

ಜಮ್ಮು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಪಾಕಿಸ್ಥಾನದ ಸ್ನೈಪರ್‌ ದಾಳಿಗೆ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಮೂರು ದಿನಗಳ ಅವಧಿಯಲ್ಲಿ ಇದು 3ನೇ ಪ್ರಕರಣವಾಗಿದೆ. ನೌಶೇರಾ ವಲಯದ ಕಲಾಲ್‌ ಪೋಸ್ಟ್‌ ಬಳಿ ಗಸ್ತು ಕಾರ್ಯದಲ್ಲಿ ನಾಯ್ಕ ಗೋಸಾವಿ ಕೇಶವ್‌ ಸೋಮ್‌ಗಿರ್‌ ನಿರತರಾಗಿದ್ದಾಗ ಎಲ್‌ಒಸಿ ಕಡೆಯಿಂದ ಪಾಕ್‌ ಯೋಧರು ಹಾರಿಸಿದ ಗುಂಡಿಗೆ ಅವರು ಬಲಿಯಾಗಿದ್ದಾರೆ. ಇದೇ ವೇಳೆ ಅಖ್ನೂರ್‌ನಲ್ಲಿ ಸೇನೆಯ ಪೋರ್ಟರ್‌ ಇದೇ ಮಾದರಿ ದಾಳಿಗೆ ಬಲಿಯಾಗಿದ್ದಾರೆ. ಇದೇ ವೇಳೆ ಕುಪ್ವಾರ ಜಿಲ್ಲೆಯ ಹಂದ್ವಾರಾದಲ್ಲಿ ಭದ್ರತಾ ಪಡೆಗಳ ಮೇಲೆ ಉಗ್ರರು ದಾಳಿ ನಡೆಸಿದ ವೇಳೆ ಉಂಟಾದ ಗುಂಡಿನ ಚಕಮಕಿಯಲ್ಲಿ ಭಯೋತ್ಪಾದಕನೊಬ್ಬನನ್ನು ಕೊಲ್ಲಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next