Advertisement

ಜಮ್ಮು-ಕಾಶ್ಮೀರ: ಕದನ ವಿರಾಮ ಉಲ್ಲಂಘಿಸಿ ಪಾಕ್ ನಿಂದ ಗುಂಡಿನ ದಾಳಿ; ಯೋಧ ಹುತಾತ್ಮ

11:44 AM Feb 04, 2021 | Team Udayavani |

ಜಮ್ಮು: ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯ ಗಡಿನಿಯಂತ್ರಣ ರೇಖೆ ಪ್ರದೇಶದಲ್ಲಿ ಪಾಕಿಸ್ತಾನ ಪಡೆಗಳು ಕದನವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ ಪರಿಣಾಮ ಭಾರತೀಯ ಯೋಧ ಹುತಾತ್ಮರಾಗಿರುವ ಘಟನೆ ನಡೆದಿದೆ.

Advertisement

ಇದನ್ನೂ ಓದಿ:ಧರಂ ಸಿಂಗ್‌ ಸಂಬಂಧಿ ಕೊಲೆ ಪ್ರಕರಣ: ಮಲತಾಯಿಯಿಂದಲೇ ಸುಪಾರಿ!

ಭದ್ರತಾಪಡೆ ಮೂಲಗಳ ಪ್ರಕಾರ, ರಜೌರಿ ಜಿಲ್ಲೆಯ ಸುಂದರ್ಬಾನಿ ಸೆಕ್ಟರ್ ಗಡಿ ನಿಯಂತ್ರಣ ರೇಖೆ ಪ್ರದೇಶದಲ್ಲಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದನಕಾರಿ ಗುಂಡಿನ ದಾಳಿ ನಡೆಸಿರುವುದಾಗಿ ತಿಳಿಸಿದೆ.

ಪಾಕ್ ದಾಳಿಯಲ್ಲಿ ಭಾರತೀಯ ಸೇನೆಯ ಸಿಪಾಯಿ ಲಕ್ಷ್ಮಣ್ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರು ಸಾವನ್ನಪ್ಪಿರುವುದಾಗಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 140 ಅಂಕ ಕುಸಿತ; 50 ಸಾವಿರ ಗಡಿಯಲ್ಲಿ ಸೆನ್ಸೆಕ್ಸ್

Advertisement

ಯೋಧನಾಗಿ ಲಕ್ಷ್ಮಣ ಅವರು ಧೈರ್ಯಶಾಲಿಯಾಗಿದ್ದು, ಕರ್ತವ್ಯ ನಿಷ್ಠರಾಗಿದ್ದರು. ಅವರ ತ್ಯಾಗ, ಬಲಿದಾನವನ್ನು ದೇಶ ಸದಾ ಸ್ಮರಿಸಲಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನ ಜಮ್ಮು-ಕಾಶ್ಮೀರದ ಗಡಿನಿಯಂತ್ರಣ ರೇಖೆ ಪ್ರದೇಶದಲ್ಲಿ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುತ್ತಲೇ ಇದೆ. ಇದರ ಪರಿಣಾಮ ಗಡಿಭಾಗದಲ್ಲಿ ವಾಸವಾಗಿರುವ ಗ್ರಾಮದ ಸಾವಿರಾರು ಜನರು ಒತ್ತಡದಲ್ಲಿ ಜೀವನ ಸಾಗಿಸುವಂತಾಗಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next