Advertisement
ಮೂರು ಪಟ್ಟು ಜಾಸ್ತಿ: 2017ರ ಅಕ್ಟೋಬರ್‌ನಲ್ಲಿ ಕಲಬುರಗಿಯಲ್ಲಿ ಸೇನಾ ನೇಮಕಾತಿ ರ್ಯಾಲಿ ನಡೆಸಿದಾಗ ಜಿಲ್ಲೆಯಿಂದ ಕೇವಲ 600 ಜನ ಅಭ್ಯರ್ಥಿಗಳು ನೋಂದಣಿ ಮಾಡಿದ್ದರು. ಆದರೆ, ಈ ಬಾರಿ 1700 ಅಭ್ಯರ್ಥಿಗಳು ಜಿಲ್ಲೆಯವರೇ ನೋಂದಣಿ ಮಾಡಿದ್ದಾರೆ. ಈ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಜನವರಿ, ಫೆಬ್ರವರಿಯಲ್ಲಿ ಲಿಖೀತ ಪರೀಕ್ಷೆ ನಡೆಯಲಿದೆ.
ಪಿ.ದಂಗವಲ್, ಸೇನಾ ನೇಮಕಾತಿ ರ್ಯಾಲಿ ನಿರ್ದೇಶಕ
Related Articles
ರಾಯಚೂರು: ನಗರದ ಕೃಷಿ ವಿವಿ ಆವರಣದಲ್ಲಿ ಡಿ.11ರಿಂದ 20ರವರೆಗೆ ನಡೆಯಲಿರುವ ಸೇನಾ ನೇಮಕಾತಿ ರ್ಯಾಲಿ ವೇಳೆ ಉಚಿತ ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮುಖಂಡ ಚಂದ್ರಶೇಖರ ಪಾಟೀಲ ಮಿರ್ಜಾಪುರ ತಿಳಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 10 ದಿನಗಳ ಕಾಲ ನಡೆಯುವ ರ್ಯಾಲಿಯಲ್ಲಿ 37 ಸಾವಿರ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಅಲ್ಲದೇ, ನೂರಾರು ಜನ ಸೇನಾ ಸಿಬ್ಬಂದಿ, ಜಿಲ್ಲಾಡಳಿತ ಸಿಬ್ಬಂದಿ ಕೂಡ ಪಾಲ್ಗೊಳ್ಳಲಿದ್ದಾರೆ. ಅವರೆಲ್ಲರಿಗೂ ಉಚಿತ ಊಟದ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಗಣೇಶ ಕಾಲೋನಿ ಹಾಗೂ ಡ್ಯಾಡಿ ಕಾಲೋನಿಯ ಈಶ್ವರ ದೇವಸ್ಥಾನ ಸೇವಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳು ಈ ಕಾರ್ಯಕ್ಕೆ ಕೈ ಜೋಡಿಸಿವೆ ಎಂದು ತಿಳಿಸಿದರು. ದೇಶ ಕಾಯುವ ಮಹತ್ತರ ಕಾರ್ಯಕ್ಕೆ ಮುಂದಾಗುತ್ತಿರುವ ಅನೇಕ ಯುವಕರಿಗೆ ನಮ್ಮಿಂದ ಚಿಕ್ಕ ನೆರವು ಮಾಡಬೇಕು ಎಂಬ ಸದುದ್ದೇಶದಿಂದ ಉಚಿತ ಊಟದ ಸೇವಾ ಕಾರ್ಯ ಕೈಗೊಂಡಿದ್ದೇವೆ. ಈಗಾಗಲೇ 20 ಕ್ವಿಂಟಲ್ ಅಕ್ಕಿ, ತೊಗರಿ, ಬೇಳೆ, ತರಕಾರಿ, ಎಣ್ಣೆ ಸಂಗ್ರಹಿಸಿದ್ದು, ಒಂದು ಲಕ್ಷ ರೂ. ದೇಣಿಗೆ ಕೂಡ ಸಂಗ್ರಹವಾಗಿದೆ.
Advertisement
ದಾನಿಗಳು ಅಡುಗೆಗೆ ಬೇಕಾದ ವಸ್ತುಗಳನ್ನು ದೇಣಿಗೆ ರೂಪದಲ್ಲಿ ನೀಡಬಹುದು ಎಂದು ತಿಳಿಸಿದರು. ನಿತ್ಯ 3000 ಜನರಿಗೆ ಊಟ ನೀಡುವ ಉದ್ದೇಶವಿದ್ದು, 12 ಲಕ್ಷ ರೂ. ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಮೊದಲ ದಿನ ಮಂಗಳವಾರ ಸಿರಾ ಮತ್ತು ಪಲಾವ್ ಮಾಡುತ್ತಿದ್ದು, ಉಳಿದ ದಿನಗಳಲ್ಲಿ ವಿವಿಧ ಬಗೆಯ ಅಡುಗೆ ಮಾಡಲಾಗುವುದು. ಸಮಾನ ಮನಸ್ಕರೆಲ್ಲ ಸೇರಿ ಹಣ ಸಂಗ್ರಹಿಸುತ್ತಿದ್ದು, ದಾನ ನೀಡಲು ಆಸಕ್ತಿ ಉಳ್ಳವರು ಮೊ: 99862 34887, 9449800765 ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ತಿಳಿಸಿದರು. ಕಲ್ಲೂರು ಬಸನಗೌಡ, ಭೀಮಾರೆಡ್ಡಿ, ಹೊಕ್ರಾಣಿ ನರೇಂದ್ರ, ಆದೋನಿ ಬಸವಂತಪ್ಪ, ಕೇದಾರನಾಥ ಸ್ವಾಮಿ, ಸಂಜೀವ ಕುಮಾರ, ಮಲ್ಲಿಕಾರ್ಜುನ ಸುದ್ದಿಗೋಷ್ಠಿಯಲ್ಲಿದ್ದರು.