Advertisement

ಸೇನೆಯ ಹೊಸ ಹಿಟ್‌ ಲಿಸ್ಟ್‌ನಲ್ಲಿ 7ಹಿಜ್ಬುಲ್‌, 6 ಎಲ್‌ಇಟಿ ಉಗ್ರರು

03:42 PM Sep 01, 2018 | Team Udayavani |

ಜಮ್ಮು : ಈ ಹಿಂದೆ ಆಪರೇಶನ್‌ ಆಲೌಟ್‌ ಕಾರ್ಯಾಚರಣೆಯಲ್ಲಿ ಅನೇಕ ಪ್ರಮುಖ ಭಯೋತ್ಪಾದಕರನ್ನು ಕೊಂದು ಮುಗಿಸಿದ್ದ  ಭಾರತೀಯ ಸೇನೆ ಇದೀಗ ಆಪರೇಶನ್‌ ಆಲೌಟ್‌-2 ಸ್ಕೆಚ್‌ ಹಾಕಿದೆ. 

Advertisement

ಇದರ ಪ್ರಕಾರ ಸಿದ್ಧಪಡಿಸಲಾಗಿರುವ ಹೊಸ ಹಿಟ್‌ ಲಿಸ್ಟ್‌ನಲ್ಲಿ  ಜಮ್ಮು ಕಾಶ್ಮೀರದಲ್ಲಿ ಏಳು ಹಿಜ್ಬುಲ್‌ ಮುಜಾಹಿದೀನ್‌, ಆರು ಲಷ್ಕರ್‌ ಎ ತಯ್ಯಬ ಉಗ್ರರು ಸೇನೆಯ ಟಾಪ್‌ ಟಾರ್ಗೆಟ್‌ ಆಗಿದ್ದಾರೆ. 

ಆಪರೇಶನ್‌ ಆಲೌಟ್‌ 2 ಬಗ್ಗೆ ಸೇನೆಯಿಂದ ಯಾವುದೇ ಅಧಿಕೃತ ಹೇಳಿಕೆ ಇಲ್ಲ. ಆದರೂ ಪಾಕ್‌ ಬೆಂಬಲಿತ ವಿವಿಧ ಉಗ್ರ ಸಂಘಟನೆಗಳ ಉನ್ನತ ಭಯೋತ್ಪಾದಕರನ್ನು ಮಟಾಶ್‌ ಮಾಡುವ ಯೋಜನೆಯನ್ನು ಸೇನೆ ರೂಪಿಸಿರುವುದಾಗಿ ನಿಕಟ ಮೂಲಗಳು ತಿಳಿಸಿವೆ.

ಜಮ್ಮು ಕಾಶ್ಮೀರದಲ್ಲೇ ಕಾರ್ಯಾಚರಿಸುತ್ತಿರುವ ಈ ಟಾಪ್‌ ಟಾರ್ಗೆಟ್‌ ಉಗ್ರರನ್ನು ಮುಗಿಸಿ ಬಿಡುವುದಕ್ಕೆ ಸೇನೆ ಸ್ಕೆಚ್‌ ಹಾಕಿದೆ. ಸೇನೆಯ ಹಿಟ್‌ ಲಿಸ್ಟ್‌ ನಲ್ಲಿ ಜೆಇಎಂ, ಎಚ್‌ಎಂ, ಎಲ್‌ಇಟಿ, ಅಲ್‌ ಬದರ್‌ ಅನ್ಸಾರ್‌ ಘಜ್ವಾತ್‌ ಉಲ್‌ ಹಿಂದ್‌ ಉಗ್ರ ಸಂಘಟನೆಯ ಉನ್ನತ ಉಗ್ರರು ಸೇರಿದ್ದಾರೆ. 

ದಕ್ಷಿಣ ಕಾಶ್ಮೀರದಲ್ಲಿ ಈಚೆಗೆ ಉಗ್ರರು ಪೊಲೀಸರ ನಿಕಟ ಬಂಧುಗಳನ್ನು ಅಪಹರಿಸಿರುವುದು, ನಿರಂತರವಾಗಿ ಎನ್‌ಕೌಂಟರ್‌ಗಳು ನಡೆಯುತ್ತಿರುವುದು ಇವೇ ಮೊದಲದ ಕಾರಣಗಳಿಗಾಗಿ ಸೇನೆ ಉಗ್ರರ ಮೇಲಿನ ಅಂತಿಮ ಪ್ರಹಾರಕ್ಕಾಗಿ ಆಪರೇಶನ್‌ ಆಲೌಟ್‌ 2 ಯೋಜನೆಯನ್ನು ಹಾಕಿಕೊಂಡಿದೆ ಎಂದು ಮೂಲಗಳು ಹೇಳಿವೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next