ಶ್ರೀನಗರ : ಶೋಪಿಯಾನ್ ಜಿಲ್ಲೆಯ ಹರ್ವೆುನ್ ಪ್ರದೇಶದಲ್ಲಿ ಸೇನಾ ಅಧಿಕಾರಿಯೊಬ್ಬರ ಶವವಾಗಿ ಪತ್ತೆಯಾಗಿದ್ದು, ದೇಹದಲ್ಲಿ ಗುಂಡು ಹೊಕ್ಕಿರುವುದು ಕಂಡು ಬಂದಿದ್ದು ಉಗ್ರರು ಅಪಹರಿಸಿ ಹತ್ಯೆಗೈದಿರುವ ಬಗ್ಗೆ ಶಂಕಿಸಲಾಗಿದೆ.
6 ತಿಂಗಳ ಹಿಂದಷ್ಟೇ ಸೇನೆಗೆ ಸೇರ್ಪಡೆಯಾಗಿದ್ದ ಕುಲ್ಗಾಮ್ ನಿವಾಸಿಯಾಗಿದ್ದ ಲೆಫ್ಟಿನೆಂಟ್ ದರ್ಜೆಯ ಅಧಿಕಾರಿ ಉಮರ್ ಫಯಾಜ್ ಶವವಾಗಿ ಪತ್ತೆಯಾಗಿದ್ದಾರೆ.
ಸಂಬಂಧಿಕರ ವಿವಾಹಕ್ಕೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರನ್ನು ಉಗ್ರರು ಅಪಹರಿಸಿದ್ದರು ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಸ್ಥಳದಲ್ಲಿ ಸೇನಾ ಪಡೆಗಳು ಮತ್ತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಫಾರೂಕ್ ಅವರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಯಾವೊಬ್ಬ ಅಧಿಕಾರಿಯೂ ಉಗ್ರರ ಉಪಟಳ ತೀವ್ರವಾಗಿರುವ ಪ್ರದೇಶಗಳ ಸಂಬಂಧಿಕರ ಮನೆಗಳಿಗೆ ಭೇಟಿ ನೀಡಬಾರದು ಎಂದು ರಾಜ್ಯ ಪೊಲೀಸರು ಎಚ್ಚರಿಕೆ ನೀಡಿದ್ದರು.
ಪುಲ್ವಾಮಾ ,ಅನಂತ್ನಾಗ್ ,ಶೋಪಿಯಾನ್ ಮತ್ತು ಕುಲ್ಗಾಮ್ನಲ್ಲಿ ಉಗ್ರರ ಉಪಟಳ ತೀವ್ರವಾಗಿದ್ದು, ಸೇನೆ ಭಾರೀ ಕಾರ್ಯಾಚರಣೆ ನಡೆಸುತ್ತಿದೆ.