Advertisement
ಅವರು ಶನಿವಾರ ಬಿ.ಸಿ.ರೋಡಿನ ಗಾಣದಪಡ್ಡು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಬಂಟ್ವಾಳ ಬಿಜೆಪಿ ಯಿಂದ ನಡೆದ ಬಿಜೆಪಿ ಕಾರ್ಯ ಕರ್ತರ ಸಮಾವೇಶದಲ್ಲಿ ಮಾತನಾಡಿ ದರು. ಜನಪ್ರಿಯತೆ ಹೆಚ್ಚಿಸಿ ಕೊಳ್ಳುತ್ತಿರುವ ಪ್ರಧಾನಿ ಮೋದಿ ಅವರ ಯೋಜನೆಗಳನ್ನು ಜನರ ಮನೆ -ಮನಗಳಿಗೆ ತಲುಪಿಸಿ ಎಂದರು.
Related Articles
Advertisement
ಅಸಾಧ್ಯವನ್ನು ಸಾಧ್ಯವಾಗಿಸಿದ ಮೋದಿ: ಕ್ಯಾ|ಚೌಟಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಿಜೇಶ್ ಚೌಟ ಮಾತನಾಡಿ, ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದನ್ನು ಖಂಡಿಸುವುದಕ್ಕೂ ಕಾಂಗ್ರೆಸಿಗರಿಗೆ ಧೈರ್ಯ ಇಲ್ಲ. ಈ ರೀತಿಯ ತುಷ್ಟೀಕರಣ ಮಾಡಿದರೆ ದೇಶದ ಉಳಿವು ಸಾಧ್ಯವೇ? ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಈ ಜೀವಮಾನದಲ್ಲಿ ನಾವು ನೋಡುತ್ತೇವೋ ಎನ್ನುವ ಸಂಶಯದಲ್ಲಿದ್ದೆವು. ಆದರೆ ಮೋದಿಯವರು ಅದನ್ನು ನಿರ್ಮಿಸಿ ತೋರಿಸಿದರು. ಅಂಥ ಶಕ್ತಿಯೇ ಮತ್ತೂಮ್ಮೆ ಈ ದೇಶ ಆಳಲು ನಾವೆಲ್ಲ ಕೈಜೋಡಿಸಬೇಕಾಗಿದೆ. ದೇಶದಲ್ಲಿ ಕಾಂಗ್ರೆಸ್ ಬಿತ್ತುತ್ತಿರುವ ರಾಷ್ಟ್ರವಿರೋಧಿ ಮಾನಸಿಕತೆ ವಿರುದ್ಧ ಮತ ಚಲಾಯಿಸಬೇಕಿದೆ ಎಂದರು. ಬಿಜೆಪಿ ಸೇರ್ಪಡೆಗೆ ಪೂಜಾರಿ ಆಶೀರ್ವಾದ: ಕವಿತಾ ಸನಿಲ್
ಮಂಗಳೂರು ಮನಪಾ ಮಾಜಿ ಮೇಯರ್ ಕವಿತಾ ಸನಿಲ್ ಮತ್ತು ಬಂಟ್ವಾಳ ಪುರಸಭೆಯ ಸದಸ್ಯ ಗಂಗಾಧರ ಪೂಜಾರಿ ಬಿಜೆಪಿ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಇದೇ ವೇಳೆ ಮಾತನಾಡಿದ ಕವಿತಾ ಸನಿಲ್, ಜನಾರ್ದನ ಪೂಜಾರಿ ನನ್ನ ರಾಜಕೀಯ ಗುರುಗಳು. ಬಿಜೆಪಿ ಸೇರುವಾಗಲೂ ಅವರ ಆಶೀರ್ವಾದ ಕೇಳಿದ್ದೇನೆ. ಹೋಗಿ, ಒಳ್ಳೆಯದಾಗಲಿ ಎಂದಿದ್ದಾರೆ. ರಾಜ್ಯ ಕಾಂಗ್ರೆಸ್ ಸರಕಾರವು ನೇಹಾ ಹತ್ಯೆಯನ್ನು ಕ್ಷುಲ್ಲಕ ಎನ್ನುವ ರೀತಿ ಬಿಂಬಿಸಿದ್ದನ್ನು ನೋಡಿದ್ದೇವೆ. ದೇಶದಲ್ಲಿ ಮೋದಿಯವರ ಆಡಳಿತ ಮೆಚ್ಚಿದ್ದು ದೇಶದಲ್ಲಿ ಹಿಂದುತ್ವ ಉಳಿಯಬೇಕು ಎನ್ನುವ ದೃಷ್ಟಿಯಿಂದ ಬಿಜೆಪಿ ಸೇರುತ್ತಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿಗಿಂತ ಸೇನೆಯಲ್ಲಿ ದುಡಿದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಒಳ್ಳೆಯ ಮತ್ತು ಸಮರ್ಥ ಅಭ್ಯರ್ಥಿ. ಅವರ ಗೆಲುವಿಗಾಗಿ ನಾವೆಲ್ಲ ಜಾತಿ ಮತ ಭೇದ ಬದಿಗಿಟ್ಟು ಶ್ರಮಿಸಬೇಕಿದೆ ಎಂದರು.