ಪಿಎಂ ಖಾನ್ ಜನಪ್ರಿಯತೆ ಕುಸಿಯುತ್ತಿರುವ ಕಾರಣ ವಿಶೇಷ “ನೆರವು
ಮುಂದೆ ಅವಶ್ಯವಿದ್ದರೆ ಪೂರ್ಣ ಆಡಳಿತ ನಿಯಂತ್ರಣ ಸಾಧ್ಯತೆ
Advertisement
ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಕುಸಿಯುತ್ತಿರುವ ಆಡಳಿತ ಯಂತ್ರವನ್ನು ಅಲ್ಲಿನ ಸೇನೆ ನಿಧಾನವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ. ಕಳೆದೆರಡು ತಿಂಗಳಲ್ಲಿ ಪಾಕಿಸ್ಥಾನ ಏರ್‌ಲೈನ್ಸ್, ವಿದ್ಯುತ್ ನಿಯಂತ್ರಣ ಮಂಡಳಿ, ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಹುದ್ದೆಗೆ ತನ್ನ ವ್ಯಕ್ತಿಗಳನ್ನೇ ಮುಖ್ಯಸ್ಥರನ್ನಾಗಿ ನೇಮಿಸಿದೆ. ಇದು ಇಮ್ರಾನ್ ಸರಕಾರದ ಮೇಲೆ ಸೇನೆ ಮೇಲುಗೈ ಸಾಧಿಸುವ ಲಕ್ಷಣಗಳಾಗಿವೆ.
Related Articles
Advertisement
ಸೇನೆಯ ಪ್ರಭಾವಳಿ ಎಷ್ಟಿದೆ ಎನ್ನುವು ದಕ್ಕೆ ಒಂದು ಉದಾಹರಣೆ ಇಲ್ಲಿದೆ. ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದ ಸುದ್ದಿಗೋಷ್ಠಿಯಲ್ಲಿ ಸರಕಾರದ ಅಧಿಕಾರಿ ಗಳ ಜತೆಗೆ ಸೇನೆಯ ಅಧಿಕಾರಿಗಳೂ ಉಪಸ್ಥಿತರಿರುತ್ತಾರೆ. ಹೀಗಾಗಿ ಪಾಕಿಸ್ಥಾನದಲ್ಲಿ ಮತ್ತೆ ಸೇನೆ ನಾಗರಿಕ ಸರಕಾರವನ್ನು ಪತನಗೊಳಿಸಲಿದೆಯೇ ಎಂಬ ಆತಂಕ ಶುರುವಾಗಿದೆ.
ಸರ್ಜಿಕಲ್ ಸ್ಟ್ರೈಕ್ ವದಂತಿಗೆ ನಿದ್ದೆಗೆಟ್ಟರುಕರಾಚಿ: ಭಾರತೀಯ ವಾಯು ಪಡೆಯ ಯೋಧರು ಗಡಿ ನಿಯಂತ್ರಣ ರೇಖೆ ದಾಟಿ ದಾಳಿ ನಡೆಸುತ್ತಿದ್ದಾರೆ. ಕರಾಚಿಯ ಆಕಾಶದ ಮೇಲೆ ಭಾರತದ ಯುದ್ಧ ವಿಮಾನಗಳು ಹಾರಾಡುತ್ತಿವೆ ಎಂಬ ವದಂತಿಗೆ ಪಾಕ್ ಮಂಗಳವಾರ ರಾತ್ರಿಯಿಡೀ ನಿದ್ದೆಗೆಟ್ಟಿದೆ. ಭಾರತದ ಯುದ್ಧವಿಮಾನಗಳ ಕಣ್ತಪ್ಪಿಸಲು ಕರಾಚಿಯ ಎಲ್ಲ ಬೀದಿದೀಪಗಳನ್ನೂ ಆರಿಸಲಾಗಿದೆ. ಬಾಲಕೋಟ್ ಮಾದರಿಯಲ್ಲಿ ಇನ್ನೊಂದು ದಾಳಿ ನಡೆಯುತ್ತಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. “ವಿಮಾನ ನಿಲ್ದಾಣದ ಬಳಿ ಜೆಟ್ ವಿಮಾನಗಳು ಹಾರಾಡಿದ್ದನ್ನು ನಾನು ನಿಜಕ್ಕೂ ನೋಡಿದ್ದೆ. ಏನಾಗಿದೆ?’ ಎಂದು ಕರಾಚಿಯ ಲಾರೈಬ್ ಮೊಹಿಬ್ ಟ್ವಿಟರ್‌ನಲ್ಲಿ ಆತಂಕದ ಪ್ರಶ್ನೆ ಮುಂದಿಟ್ಟಿದ್ದರು. “ಕರಾಚಿಯಲ್ಲಿ ಸಾಕಷ್ಟು ಜೆಟ್ ವಿಮಾನಗಳು ಹಾರಾಡುತ್ತಿದ್ದವು’ ಎಂದು ಮತ್ತೂಬ್ಬ ಕರಾಚಿ ನಿವಾಸಿ ಪೋಸ್ಟ್ ಮಾಡಿದ್ದರು. ಈ ಬಗ್ಗೆ ಟ್ವಿಟರ್‌ನಲ್ಲಿ ಹ್ಯಾಶ್‌ಟ್ಯಾಗ್ ಸೃಷ್ಟಿಯಾಗಿ ವೈರಲ್ ಆಗಿದ್ದರೂ ಪಾಕಿಸ್ತಾನದ ವಾಯುಪಡೆ ಮಾತ್ರ ಇದುವರೆಗೂ ಸ್ಪಷ್ಟನೆ ನೀಡಿಲ್ಲ.