Advertisement
ಆ್ಯಕ್ಸೆಲ್ :
Related Articles
Advertisement
ಝೂಮ್ : ಮಲಿನಾಯ್ಸ ಅಥವಾ ಬೆಲ್ಜಿಯನ್ ಶೆಫರ್ಡ್ ಜಾತಿಯ ಶ್ವಾನ. ಇದಕ್ಕೆ ಕೇವಲ 2 ವರ್ಷಗಳಾಗಿದ್ದರೂ ಕಳೆದ 8 ತಿಂಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿತ್ತು. ಹಲವು ಸಕ್ರಿಯ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿತ್ತು. ಅನಂತ್‌ನಾಗ್‌ನಲ್ಲಿ ಅ.10ರಂದು ನಡೆದ ಆಪರೇಶನ್ ವೇಳೆ ಝೂಮ್ ಏಕಾಏಕಿ ಉಗ್ರರ ಮೇಲೆ ಎರಗಿತ್ತು. ಈ ವೇಳೆ ಝೂಮ್‌ನ ದೇಹವನ್ನು 2 ಗುಂಡುಗಳು ಹೊಕ್ಕಿದ್ದವು. ಹಾಗಿದ್ದರೂ ಅದು ಛಲ ಬಿಡದೇ ಹೋರಾಟ ನಡೆಸಿತ್ತು. ಪರಿಣಾಮ ಇಬ್ಬರು ಉಗ್ರರನ್ನು ಸದೆಬಡಿಯಲು ಭದ್ರತಾಪಡೆಗೆ ಸಾಧ್ಯವಾ ಯಿತು. ತೀವ್ರವಾಗಿ ಗಾಯಗೊಂಡಿದ್ದ ಝೂಮ್‌ಗೆ ಶಸ್ತ್ರಚಿಕಿತ್ಸೆ ಯನ್ನೂ ನಡೆಸಲಾಗಿತ್ತು. ಸ್ವಲ್ಪಮಟ್ಟಿಗೆ ಚೇತರಿಕೆಯಾದಂತೆ ಕಂಡು ಬಂದಿದ್ದ ಝೂಮ್ ಗುರುವಾರ ಇಹಲೋಕ ತ್ಯಜಿಸಿತು.
ರಾಕೆಟ್ :
1998ರಲ್ಲಿ ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ “ರಾಕೆಟ್’ನನ್ನು ರಣರಂಗಕ್ಕೆ ಇಳಿಸಲಾ ಯಿತು. ಉಗ್ರನೊಬ್ಬ ಬಿಟ್ಟುಹೋಗಿದ್ದ ಸಣ್ಣ ಸ್ಕಾಫ್ìವೊಂದನ್ನು ಮೂಸಿ ನೋಡಿದ್ದ ರಾಕೆಟ್, ನೇರವಾಗಿ ದೊಡ್ಡ ಮಟ್ಟದ ಶಸ್ತ್ರಾಸ್ತ್ರ ಕೋಠಿಯತ್ತ ಹೆಜ್ಜೆಹಾ ಕಿತ್ತು. ಅಲ್ಲಿ ಸಿಕ್ಕ ಶಸ್ತ್ರಾಸ್ತ್ರಗಳು ಒಂದೆರ ಡಲ್ಲ, ಮಷೀನ್ ಗನ್‌ಗಳು, 3 ಎಕೆ47 ರೈಫಲ್‌ಗಳು, ಎರಡು ಎಕೆ-56ಗಳು, ಒಂದು ಸ್ನೆ„ಪರ್ ರೈಫಲ್, 2 9ಎಂ.ಎಂ. ಪಿಸ್ತೂಲುಗಳು, 7 ರೇಡಿಯೋ ಸೆಟ್, 11 ಐಇಡಿಗಳು, 26 ಹ್ಯಾಂಡ್ ಗ್ರೆನೇಡ್‌ಗಳು, 37 ಎಲೆಕ್ಟ್ರಿಕ್ ಡಿಟೋನೇಟರ್‌ಗಳು, 1500 ಸುತ್ತು ಗುಂಡುಗಳು… ಹೀಗೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಅಂದು ಸೇನೆ ವಶಪಡಿಸಿಕೊಳ್ಳುವಲ್ಲಿ ರಾಕೆಟ್‌ನ ಪಾತ್ರ ಮಹತ್ವದ್ದಾಗಿತ್ತು.
ಮಾನಸಿ :
2015ರ ಆಗಸ್ಟ್‌ನಲ್ಲಿ ಲ್ಯಾಬ್ರಡಾರ್ ಮಾನಸಿಗೆ 4 ವರ್ಷ ತುಂಬಿತ್ತು. ಕುಪ್ವಾರಾದ ಎಲ್‌ಒಸಿಯಲ್ಲಿ ಉಗ್ರರ ಚಲನವಲನ ಗಮನಕ್ಕೆ ಬರುತ್ತಿದ್ದಂತೆ ಮಾನಸಿ ಅಲರ್ಟ್ ಆದಳು. ಕೂಡಲೇ ತನ್ನ ಹ್ಯಾಂಡ್ಲರ್ ಬಶೀರ್ ಅಹ್ಮದ್‌ರನ್ನು ಸದ್ದು ಬಂದ ಕಡೆಗೆ ಎಳೆಯಲಾ ರಂಭಿಸಿದಳು. ಹಿಮ ತುಂಬಿದ್ದ ಕಾರಣ, ದೃಷ್ಟಿ ಗೋಚರತೆ ಸ್ಪಷ್ಟವಾಗಿರಲಿಲ್ಲ. ಹಾಗಿದ್ದರೂ ಬಶೀರ್, ಮಾನಸಿ ಸೇರಿದಂತೆ ಯೋಧರು ಉಗ್ರರಿಗಾಗಿ ಶೋಧ ಕಾರ್ಯ ನಡೆಸಿದರು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಬಶೀರ್ ಮತ್ತು ಮಾನಸಿ ಇಬ್ಬರೂ ಕೊನೆಯುಸಿರೆಳೆದರು.
ಯಾವ ಜಾತಿಯ ಶ್ವಾನಗಳು? :
ಆಯಾಯ ಪ್ರದೇಶದ ಎತ್ತರ ಮತ್ತು ಹವಾಗುಣ ಅವಲಂಬಿಸಿ, ಸೇನೆಯು ಸಾಮಾನ್ಯವಾಗಿ ಲ್ಯಾಬ್ರಡಾರ್, ಮುಧೋಳ, ಬಖರ್ವಾಲ್, ಕಾಕರ್ ಸ್ಪೇನಿಯಲ್, ಗ್ರೇಟ್ ಸ್ವಿಸ್ ಮೌಂಟನ್, ಜರ್ಮನ್ ಶೆಫರ್ಡ್, ಬೆಲ್ಜಿಯನ್ ಶೆಫರ್ಡ್ ನಂಥ ಶ್ವಾನಗಳನ್ನು ನೇಮಕ ಮಾಡುತ್ತದೆ. ಸೇನೆಯ ಶ್ವಾನಗಳಿಗೆ ಹೆಚ್ಚಾಗಿ ಬಾಂಬ್‌ಗಳ ಪತ್ತೆ, ಶತ್ರುಗಳ ಬೇಟೆ, ಶತ್ರುಗಳ ರಹಸ್ಯ ತಾಣಗಳ ಪತ್ತೆ, ವಿಐಪಿಗಳ ಭದ್ರತೆ ಹಾಗೂ ಸಾಕ್ಷ್ಯಾಧಾರ ಸಂಗ್ರಹಿಸುವಂಥ ತರಬೇತಿ ನೀಡಲಾಗುತ್ತದೆ. ಕೆಲವು ವಾರಗಳ ಹಿಂದಷ್ಟೇ ಕನಕ್ ಎಂಬ ಲ್ಯಾಬ್ರಡಾರ್ ಬಾರಾಮುಲ್ಲಾದ ಹೆದ್ದಾರಿಯಲ್ಲಿದ್ದ ಐಇಡಿಯನ್ನು ಪತ್ತೆಹಚ್ಚಿ, 12ಕ್ಕೂ ಹೆಚ್ಚು ಯೋಧರ ಪ್ರಾಣ ಉಳಿಸಿತ್ತು.
-ಹಲೀಮತ್ ಸಅದಿಯಾ