ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದ ಅನಂತ್ ನಾಗ್ ನಲ್ಲಿ ಇಬ್ಬರು ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ನೆರವಾಗಿ, ಗುಂಡೇಟಿಗೆ ತುತ್ತಾಗಿದ್ದ ಸೇನಾ ಶ್ವಾನ “ಝೂಮ್” ಗುರುವಾರ( ಅಕ್ಟೋಬರ್ 13) ವಿಧಿವಶವಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ; ಗುಜರಾತ್ ಆಪ್ ಮುಖಂಡನ ಬಂಧನ
ಸೇನಾ ಅಧಿಕಾರಿಗಳ ಮಾಹಿತಿ ಪ್ರಕಾರ, ಉಗ್ರರ ಎನ್ ಕೌಂಟರ್ ನಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಆರ್ಮಿ ಶ್ವಾನ ಝೂಮ್ ಮಧ್ಯಾಹ್ನ 11.45ರವರೆಗೆ ಚಿಕಿತ್ಸೆಗೆ ಸ್ಪಂದಿಸಿದ್ದು, ನಂತರ ದಿಢೀರನೆ ಅಸ್ವಸ್ಥಗೊಂಡು ನಿಧನವಾಗಿರುವುದಾಗಿ ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಶ್ವಾನ ಝೂಮ್ ಭದ್ರತಾ ಪಡೆಯ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಪ್ರಮುಖ ಪಾತ್ರ ವಹಿಸುತ್ತಿದ್ದು, ಅಕ್ಟೋಬರ್ 10ರಂದು ಕಾಶ್ಮೀರದ ಅನಂತ್ ನಾಗ್ ನಲ್ಲಿ ನಡೆದ ಕಾರ್ಯಾಚರಣೆ ವೇಳೆ ಕಾಲು ಮತ್ತು ಮುಖಕ್ಕೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಲಷ್ಕರ್ ಎ ತೊಯ್ಬಾದ ಇಬ್ಬರು ಉಗ್ರರನ್ನು ಸದೆಬಡಿಯಲು ಶ್ವಾನ ಝೂಮ್ ಸೇನಾ ಪಡೆಗೆ ನೆರವು ನೀಡಿತ್ತು.