Advertisement

ಭೂ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಮನೋಜ್ ಮುಕುಂದ್ ನರವಣೆ

09:46 AM Jan 01, 2020 | keerthan |

ಹೊಸದಿಲ್ಲಿ: ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನರವಣೆ ಅವರು ಭಾರತೀಯ ಭೂ ಸೇನೆಯ ನೂತನ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಭೂ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಅವರ ಅಧಿಕಾರವಧಿ ಇಂದಿಗೆ ಪೂರ್ಣವಾದ ಹಿನ್ನಲೆಯಲ್ಲಿ ನೂತನ ಮಖ್ಯಸ್ಥರನ್ನು ನೇಮಿಸಲಾಗಿದೆ.

Advertisement

ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನರವಣೆ ಅವರು ಇದುವರೆಗೆ ಭೂಸೇನೆಯ ವಯಸ್ ಚೀಫ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಭಾರತೀಯ ಸೇನೆಯಲ್ಲಿ ಸುಮಾರು 37 ವರ್ಷ ಅನುಭವ ಹೊಂದಿರುವ ನರವಣೆ ಅವರು ಮಹಾರಾಷ್ಟ್ರ ಮೂಲದವರು. ಇಂಡಿಯನ್ ಮಿಲಿಟರಿ ಅಕಾಡಮೆ ಮತ್ತು ನ್ಯಾಷನಲ್ ಡಿಫೆನ್ಸ್ ಅಕಾಡಮೆಯಿಂದ ತರಬೇತಿ ಪಡೆದಿದ್ದರು. ಜಮ್ಮು ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಗಳಲ್ಲಿ ಹೆಸರುವಾಸಿಯಾಗಿದ್ದರು. ಇವರ ನೇತೃತ್ವದಲ್ಲಿ ಭಾರತ- ಚೀನಾದ 4000 ಕಿ.ಮೀ ಗಡಿಭಾಗದಲ್ಲಿ ಈಸ್ಟರ್ನ ಕಮ್ಯಾಂಡ್ ವಿಭಾಗದ ಸೇನಾ ಪಡೆಗಳು ನಿಯೋಜನೆಗೊಂಡಿದೆ.

ಇದುವರೆಗೆ ಭೂ ಸೇನೆಯ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಅವರು ದೇಶದ ಮುರೂ ರಕ್ಷಣಾ ಪಡೆಗಳ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿದೆ. ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next