Advertisement

ಕಾಶ್ಮೀರ ಕಲ್ಲುತೂರಾಟಗಾರರು ಸೈನಿಕರನ್ನು ಉಗ್ರರಂತೆ ಕಾಣುತ್ತಿದ್ದಾರೆ!

03:59 PM Oct 27, 2018 | Sharanya Alva |

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿನ ಅಭಿವೃದ್ಧಿಯನ್ನು ಹಾಳುಗೆಡವಲು ಪಾಕಿಸ್ತಾನ ಯತ್ನಿಸುತ್ತಿದೆ. ಭಯೋತ್ಪಾದನೆ ಚಟುವಟಿಕೆ ನಿರಂತರವಾಗಿ ನಡೆಯುತ್ತಿರಬೇಕೆಂದು ಬಯಸುವ ಪಾಕಿಸ್ತಾನದ ಯತ್ನಕ್ಕೆ ನಾವು ಅವಕಾಶ ಕೊಡಲ್ಲ ಎಂದಿರುವ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಕಾಶ್ಮೀರದ ಕಲ್ಲು ತೂರಾಟಗಾರರು ಸೈನಿಕರನ್ನು ಉಗ್ರರ ರೀತಿ ಗುರಿಯಾಗಿರಿಸಿ ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

Advertisement

ಜಮ್ಮು ಮತ್ತು ಕಾಶ್ಮೀರದಲ್ಲಿ ಗುರುವಾರ ಬಾರ್ಡರ್ ರೋಡ್ಸ್ ಆರ್ಗನೈಸೇಷನ್(ಬಿಆರ್ ಒ)ನಲ್ಲಿ ಕರ್ತವ್ಯದಲ್ಲಿದ್ದ ಸೈನಿಕ ರಾಜೇಂದ್ರ ಸಿಂಗ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದರು.

ಶನಿವಾರ ನವದೆಹಲಿಯಲ್ಲಿ ಜನರಲ್ ರಾವತ್ ಅವರು 72ನೇ ಇನ್ ಫ್ಯಾನ್ಟ್ರಿ ದಿನಾಚರಣೆಯಲ್ಲಿ ಹುತಾತ್ಮ ಸೈನಿಕರಿಗೆ ಗೌರವ ಸಲ್ಲಿಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಕಾಶ್ಮೀರದ ಕಲ್ಲುತೂರಾಟಗಾರರು ಉಗ್ರಗಾಮಿ ಸಂಘಟನೆಯ ಕಾರ್ಯಕರ್ತರೇ ಆಗಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕಾಗಿದೆ ಎಂದು ರಾವತ್ ಎಚ್ಚರಿಕೆ ನೀಡಿದ್ದಾರೆ.

ಉಗ್ರಗಾಮಿ ಚಟುವಟಿಕೆ ಸದಾ ಜೀವಂತವಾಗಿರಿಸಿಕೊಳ್ಳುವ ಪಾಕಿಸ್ತಾನದ ಕನಸು ಎಂದಿಗೂ ನನಸಾಗುವುದಿಲ್ಲ. ನೆರೆಯ ರಾಷ್ಟ್ರದ ಕುತಂತ್ರವನ್ನು ಎಲ್ಲಾ ರೀತಿಯಿಂದಲೂ ಎದುರಿಸಲು ಭಾರತ ಸಮರ್ಥವಾಗಿದೆ ಎಂದು ರಾವತ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next