ಶ್ರೀನಗರ: ಮೇಜರ್ ಲಿತುಲ್ ಗೊಗೊಯ್ ಅವರು ತಪ್ಪು ಮಾಡಿದ್ದು ಧೃಡಪಟ್ಟಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜ.ರಾವತ್ ಭಾರತೀಯ ಸೇನೆಯ ಯಾವುದೇ ದರ್ಜೆಯ, ಯಾವುದೇ ಅಧಿಕಾರಿ ಯಾವುದೇ ತಪ್ಪು ಮಾಡಿದ್ದು ಕಂಡು ಬಂದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ. ಭವಿಷ್ಯದ ದೃಷ್ಟಿಯಲ್ಲಿ ಅದು ಪಾಠ ಆಗಬೇಕು ಎಂದರು.
ಕಾಶ್ಮೀರದ ಹೊಟೇಲ್‌ವೊಂದರಲ್ಲಿ ಜನರಲ್ ಲಿತುಲ್ ಗೊಗೊಯ್ ಅವರನ್ನು ಮಹಿಳೆ ಮತ್ತು ಸ್ಥಳೀಯ ಪುರುಷನೊಬ್ಬನೊಂದಿಗೆ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಅವರನ್ನು ಅವರ ಸೇನಾ ಘಟಕದ ವಶಕ್ಕೆ ನೀಡಲಾಗಿತ್ತು.
ಮಹಿಳೆ ಸ್ವಯಂ ಪ್ರೇರಿತರಾಗಿ ಗೊಗೊಯ್ ಅವರನ್ನು ಭೇಟಿಯಾಗಲು ಬಂದಿದ್ದಳು ಎಂದು ತಿಳಿದು ಬಂದಿದ್ದು, ಆಕೆ ಅಪ್ರಾಪ್ತೆ ಅಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಳಿಕ ಗೊಗೊಯ್ ಅವರು ಮರಳಿ ರಾಷ್ಟ್ರೀಯ ರೈಫಲ್ಸ್‌ಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಗೊಗೊಯ್ ಅವರು 2017 ರಲ್ಲಿ ಕಲ್ಲು ತೂರಾಟಗಾರನೊಬ್ಬನನ್ನು ಜೀಪ್‌ನ ಬಾನೆಟ್‌ಗೆ ಕಟ್ಟಿ ಮೆರವಣಿಗೆ ಮಾಡಿದ ಪ್ರಕರಣದಲ್ಲಿ ಸುದ್ದಿಯಾಗಿದ್ದರು.