Advertisement
ಟರ್ಕಿ ಅಸಮಾಧಾನಕ್ಕೆ ಕಾರಣ? ಜಿ20 ಶೃಂಗಸಭೆಯ ವೇಳೆ ಕೈಗೊಂಡ ನಿರ್ಣಯದಲ್ಲಿ ಹೊಸ ಆರ್ಥಿಕ ಕಾರಿಡಾರ್‌ನಲ್ಲಿ ಚೀನದ ಬೆಲ್ಟ್ ಆ್ಯಂಡ್ ರೋಡ್ ಯೋಜನೆಗೆ ಬೆಂಬಲವಾಗಿದ್ದ ಟರ್ಕಿಯನ್ನು ಹೊರಗಿಡಲಾಗಿತ್ತು. ಈ ಬಗ್ಗೆ ಶೃಂಗಸಭೆಯ ಬಳಿಕ ಪ್ರತಿಕ್ರಿಯೆ ನೀಡಿದ್ದ ಟರ್ಕಿಯ ಅಧ್ಯಕ್ಷ ರಿಸೆಪ್ ತಯಿಪ್ ಎಡ್ರೊಗೆನ್ ಅವರು, ಟರ್ಕಿಯನ್ನು ಹೊರತುಪಡಿಸಿ ಯಾವುದೇ ಕಾರಿಡಾರ್ ರಚಿಸಲು ಸಾಧ್ಯವಿಲ್ಲ. ಪೂರ್ವದಿಂದ ಪಶ್ಚಿಮಕ್ಕೆ ವ್ಯಾಪಾರಕ್ಕೆ ತೆರಳಲು ಸೂಕ್ತವಾದ ಮಾರ್ಗವೆಂದರೆ ಟರ್ಕಿ ಮೂಲಕ ತೆರಳುವುದು ಎಂದಿದ್ದರು. ಹಿಂದಿನಿಂದಲೂ ಪೂರ್ವ ಮತ್ತು ಪಶ್ವಿಮ ರಾಷ್ಟ್ರಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಟರ್ಕಿಗೆ ಹೊಸ ಕಾರಿಡಾರ್ ರಚನೆಯ ನಿರ್ಧಾರ ಆಘಾತ ನೀಡಿತ್ತು.
ಭಾರತ- ಮಧ್ಯಪ್ರಾಚ್ಯ- ಯುರೋಪ್ ಕಾರಿಡಾರ್‌ಗೆ ಪರ್ಯಾಯವಾಗಿ ಸುಮಾರು 17 ಬಿಲಿಯನ್ ಡಾಲರ್ ಮೊತ್ತದ ಹೊಸ ಮಾರ್ಗದ ಬಗ್ಗೆ ಇರಾಕ್ ಡೆವಲಪ್‌ಮೆಂಟ್ ರೋಡ್ ಇನಿಶಿಯೇಟಿವ್ ಯೋಜನೆ ರೂಪಿಸಿದೆ. ಕತಾರ್, ಯುಎಇ ಮತ್ತು ಇರಾಕ್ ರಾಷ್ಟ್ರಗಳ ಮಧ್ಯೆ ಈ ಬಗ್ಗೆ ಮಾತುಕತೆಗಳು ನಡೆಯುತ್ತಿವೆ ಎಂದು ಟರ್ಕಿಯ ವಿದೇಶಾಂಗ ಸಚಿವ ಹ್ಯಾಕನ್ ಪೈಢನ್ ಹೇಳಿದ್ದಾರೆ. ದಕ್ಷಿಣ ಇರಾಕ್‌ನ ಗ್ರ್ಯಾಂಡ್ ಫಾ ಬಂದರಿನಿಂದ ಹೊರಟು ಇರಾಕ್‌ನ 10 ಪ್ರಾಂತಗಳನ್ನು ದಾಟಿ ಟರ್ಕಿಯನ್ನು ತಲುಪುವ ಬಗ್ಗೆ ಬಾಗ್ಧಾದ್ ಸರಕಾರ ಬಿಡುಗಡೆ ಮಾಡಿದ ನೀಲನಕ್ಷೆಯಲ್ಲಿ ತಿಳಿಸಿದೆ. ಮೂರು ಹಂತದಲ್ಲಿ ಈ ಯೋಜನೆ ನಿರ್ಮಾಣವಾಗಲಿದ್ದು, 2028ರಲ್ಲಿ ಮೊದಲ ಹಂತ ಪೂರ್ಣಗೊಂಡರೆ, ಕೊನೆಯ ಹಂತ 2050ರಲ್ಲಿ ಮುಗಿಯಲಿದೆ. ಭಾರತ- ಮಧ್ಯಪ್ರಾಚ್ಯ- ಯುರೋಪ್ ಕಾರಿಡಾರ್ ಪೂರ್ಣಗೊಳ್ಳಲೂ ಹಲವು ದಶಕಗಳು ಬೇಕಾಗಿವೆ ಎಂದು ವಿಶ್ಲೇಷಕರು ಹೇಳಿದ್ದಾರೆ.
Related Articles
ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲು ಟರ್ಕಿಯು ಆರ್ಥಿಕ ಸಮಸ್ಯೆ ಎದುರಿ ಸುತ್ತಿದೆ. ಈ ಹಿನ್ನೆಲೆಯಲ್ಲಿ ಯುಎಇ ಮತ್ತು ಕತಾರ್‌ನ ಬೆಂಬಲದ ನಿರೀಕ್ಷೆ ಯಲ್ಲಿದೆ. ಈ ಯೋಜನೆಯಲ್ಲಿ ಗಲ್ಫ್ ರಾಷ್ಟ್ರಗಳು ಹೂಡಿಕೆ ಮಾಡುವಂತೆ ಮನ ವೊಲಿಸಬೇಕಾಗಿದೆ ಎಂದು ಯುರೇಷ್ಯಾ ಥಿಂಕ್ -ಟ್ಯಾಂಕ್‌ನ ಯುರೋಪ್ ನಿರ್ದೇಶಕ ಎಮ್ರೆ ಪೆಕರ್ ಹೇಳಿದ್ದಾರೆ.
Advertisement
ರಂಜಿನಿ, ಮಿತ್ತಡ್ಕ