Advertisement

ಶಸ್ತ್ರಾಸ್ತ್ರ ಪ್ರದರ್ಶನ: ಮುತ್ತಪ್ಪ ರೈಗೆ ಸಿಸಿಬಿ ನೋಟಿಸ್‌

12:37 PM Oct 20, 2018 | Team Udayavani |

ಬೆಂಗಳೂರು: ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಮುತ್ತಪ್ಪ ರೈ ಆಯುಧ ಪೂಜೆ ದಿನದಂದು ರಿವಾಲ್ವರ್‌, ಪಿಸ್ತೂಲ್‌ ಸೇರಿ ಮತ್ತಿತರ ಶಸ್ತ್ರಾಸ್ತ್ರಗಳನ್ನು ಪೂಜೆಗೆ ಇರಿಸಿದ್ದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಬೆನ್ನಲ್ಲೇ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಎಚ್ಚೆತ್ತುಕೊಂಡಿದೆ.

Advertisement

ಪೂಜೆಗಿಟ್ಟಿದ್ದ ಬಂದೂಕು, ರಿವಾಲ್ವರ್‌, ಪಿಸ್ತೂಲ್‌ ಸೇರಿ ಮತ್ತಿತರ ಶಸ್ತ್ರಾಸ್ತ್ರಗಳಿಗೆ  ಸಂಬಂಧಿಸಿದ ದಾಖಲೆಗಳೊಂದಿಗೆ 24 ಗಂಟೆಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಮುತ್ತಪ್ಪ ರೈಗೆ ಸಿಸಿಬಿ ಡಿಸಿಪಿ ಗಿರೀಶ್‌ ಶುಕ್ರವಾರ ನೋಟಿಸ್‌ ಜಾರಿಗೊಳಿಸಿದ್ದಾರೆ.

ಶಸ್ತ್ರಾಸ್ತ್ರಗಳನ್ನು ಪೂಜೆಗಿಟ್ಟ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಪಡಿಸಿ ನಾಗರೀಕರಲ್ಲಿ ಭಯದ ವಾತಾವರಣ ಉಂಟು ಮಾಡುತ್ತಿದ್ದೀರಿ ಎಂದು ಮುತ್ತಪ್ಪ ರೈಗೆ ನೋಟಿಸ್‌ನಲ್ಲಿ ಸಿಸಿಬಿ ತಿಳಿಸಿದೆ.

ಹೀಗಾಗಿ ನೋಟಿಸ್‌ ತಲುಪಿದ 24 ಗಂಟೆಗಳಲ್ಲಿ ಪೂಜೆಗಿಟ್ಟಿದ್ದ ಎಲ್ಲ ಶಸ್ತ್ರಾಸ್ತ್ರಗಳು ಹಾಗೂ ಅವುಗಳಿಗೆ ಸಂಬಂಧಿಸಿದ ದಾಖಲೆಗಳ ಸಮೇತ ಎಸಿಪಿ ವಿ.ಮರಿಯಪ್ಪ ಅವರ ಮುಂದೆ ಹಾಜರಾಗಬೇಕು. ಹಾಜರಾಗದಿದ್ದಲ್ಲಿ  ಕಾನೂನು ಕ್ರಮ ಜರುಗಿಸಲಾಗುವುದು ಎಂದು ನೋಟಿಸ್‌ನಲ್ಲಿ ಉಲ್ಲೇಖೀಸಿದೆ. ಮುತ್ತಪ್ಪ ರೈ ಪರವಾಗಿ ರಿಕ್ಕಿ ರೈ ಎಂಬುವವರು ನೋಟಿಸ್‌ನಲ್ಲಿ ಸಹಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next