ಕೊಲಿವಿಲ್ಲೆ: ಶಿಕ್ಷೆಗೊಳಗಾಗಿರುವ ಪಾಕಿಸ್ಥಾನ ಮೂಲದ ಭಯೋತ್ಪಾದಕನನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಬಂದೂಕುಧಾರಿ ವ್ಯಕ್ತಿಯೊಬ್ಬ ಹಲವರನ್ನು ಒತ್ತೆಯಾಳಾಗಿರಿಸಿಕೊಂಡ ಘಟನೆ ಅಮೆರಿಕದ ಟೆಕ್ಸಾಸ್ ಸಿನಗಾಗ್‌ನಲ್ಲಿ ನಡೆದಿದೆ.
ಎಷ್ಟು ಮಂದಿಯನ್ನು ಆತ ಒತ್ತೆಯಾಳಾಗಿ ಇರಿಸಿದ್ದಾನೆಂಬ ನಿಖರ ಮಾಹಿತಿ ಪೊಲೀಸರಿಗೆ ಸಿಕ್ಕಿಲ್ಲ. ಆದರೆ ಸುಮಾರು ಎಂಟು ಗಂಟೆಗಳ ಬಳಿಕ ಓರ್ವನನ್ನು ಬಿಡುಗಡೆ ಮಾಡಲಾಗಿದೆ.
ಬಿಡುಗಡೆಯಾದ ವ್ಯಕ್ತಿ ಸಾಧ್ಯವಾದಷ್ಟು ಬೇಗ ತನ್ನ ಕುಟುಂಬದೊಂದಿಗೆ ಮತ್ತೆ ಸೇರಿಕೊಳ್ಳುತ್ತಾನೆ ಮತ್ತು ಅವನಿಗೆ ವೈದ್ಯಕೀಯ ಆರೈಕೆಯ ಅಗತ್ಯವಿಲ್ಲ” ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.
ಡಲ್ಲಾಸ್‌ನ ಪಶ್ಚಿಮಕ್ಕೆ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಕಾಲಿವಿಲ್ಲೆಯಲ್ಲಿರುವ ಬೆತ್ ಇಸ್ರೇಲ್ ನಲ್ಲಿ ಶನಿವಾರ ಬೆಳಿಗ್ಗೆ ತುರ್ತು ಪರಿಸ್ಥಿತಿಯ ಬಗ್ಗೆ ಅವರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒತ್ತೆಯಾಳು ಶಸ್ತ್ರಸಜ್ಜಿತನಾಗಿದ್ದನು ಮತ್ತು ಅಜ್ಞಾತ ಸ್ಥಳಗಳಲ್ಲಿ ಬಾಂಬ್ ಗಳನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.
ಇದನ್ನೂ ಓದಿ:ಕರಾವಳಿಗರಿಗೆ ಆತಂಕ; ಆರ್ಥಿಕತೆಗೂ ಹೊಡೆತ ಭೀತಿ; ಶಿರಾಡಿ ಘಾಟಿ ಆರು ತಿಂಗಳು ಬಂದ್ ಪ್ರಸ್ತಾವ
ಬಂದೂಕುಧಾರಿ ವ್ಯಕ್ತಿಯು ಆಫಿಯಾ ಸಿದ್ದಿಕಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದಾನೆ ಎಂದು ವರದಿಯಾಗಿದೆ. ವ್ಯಕ್ತಿ ತಾನು ಸಿದ್ದಿಕಿಯ ಸಹೋದರ ಎಂದು ಹೇಳಿಕೊಂಡಿದ್ದಾನೆ ಎಂದು ವರದಿಗಳು ತಿಳಿಸಿದೆ.
2010ರಲ್ಲಿ ಅಫ್ಘಾನಿಸ್ತಾನದಲ್ಲಿ ಅಮೆರಿಕದ ಅಧಿಕಾರಿಗಳ ಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ವಿಜ್ಞಾನಿ ಸಿದ್ದಿಕಿ ಅವರಿಗೆ ನ್ಯೂಯಾರ್ಕ್ ನ್ಯಾಯಾಲಯ 86 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ಪ್ರಕರಣವು ಪಾಕಿಸ್ತಾನದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.