ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಅವರು ಈಗ ಅಕ್ಷರಶಃ ಗೊಂದಲದಲ್ಲಿ ಮುಳುಗಿದ್ದಾರಂತೆ. ಇತ್ತ ಜೆಡಿಎಸ್ ಟಿಕೆಟ್ ಇಲ್ಲ, ಅತ್ತ ಕಾಂಗ್ರೆಸ್ ಟಿಕೆಟ್ ಗ್ಯಾರೆಂಟಿಯೂ ಆಗಿಲ್ಲ.. ಇನ್ನೊಂದೆಡೆ ಬಿಜೆಪಿಯಿಂದ ಅಧಿಕೃತ ಆಹ್ವಾನವೂ ಇಲ್ಲ. ಹೀಗಾಗಿ ಅವರದು ತ್ರಿಶಂಕು ಸ್ಥಿತಿ.
ಜೆಡಿಎಸ್ ನಾಯಕರೊಂದಿಗಿನ ವೈಮನಸ್ಸಿನಿಂದಾಗಿ ಈ ಸಲ ಜೆಡಿಎಸ್ ಟಿಕೆಟ್ ಕೈತಪ್ಪಿದೆ.
ದೇವೇಗೌಡರ ಕುಟುಂಬದ ವಿರುದ್ಧ ಹೋರಾಡುತ್ತಲೇ ರಾಜಕಾರಣದಲ್ಲಿ ಬೆಳೆದಿರುವ ಮಾಜಿ ಸಚಿವ ಎ.ಮಂಜುಗೆ ಜೆಡಿಎಸ್ ಟಿಕೆಟ್ ಘೋಷಿಸಿರುವುದು ಎಟಿಆರ್ ಹಾಗೂ ಅವರ ಆಪ್ತ ವಲಯವನ್ನು ಚಿಂತೆಗೀಡು ಮಾಡಿದೆ.
ಕಾಂಗ್ರೆಸ್ ಟಿಕೆಟ್‌ಗೆ ಕೃಷ್ಣೇಗೌಡ, ಡಾ| ದಿನೇಶ್ ಭೈರೇಗೌಡ, ಶ್ರೀಧರ ಗೌಡ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಹೀಗಾಗಿ ಎಟಿಆರ್ ಸೇರ್ಪಡೆಯಾದರೆ ಮೂರು-ಮತ್ತೂಂದು ಅನ್ನುವಂತಾಗಿದೆ. ಎಟಿಆರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ವಿಧಾನಸಭಾ ಚುನಾವಣೆ ಬದಲಿಗೆ ದಿಲ್ಲಿಗೆ (ಲೋಕಸಭೆ) ಕಳು ಹಿಸೋಣ, ಅವರನ್ನು ಪಕ್ಷಕ್ಕೆ ಬರ ಮಾಡಿಕೊಳ್ಳುವುದೇ ಒಳ್ಳೇಯದು ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಕೆಪಿಸಿಸಿ ನಾಯಕರಿಗೆ ಕಿವಿ ಊದಿದ್ದಾರಂತೆ. ಇದು ಒಳ್ಳೆ ಐಡಿಯಾವೆಂದು ನಾಯಕರು ತಲೆಯಾಡಿಸಿದ್ದರಂತೆ.