Advertisement

ಆನೆಗಳ ದಸರೆ ಯಾನಕ್ಕೆ ಅರ್ಜುನ ಲೀಡರ್‌

04:54 PM Aug 12, 2017 | Team Udayavani |

ಹುಣಸೂರು: ಮೈಸೂರು ದಸರಾದ ಪ್ರಮುಖ ಆಕರ್ಷಣೆ ಗಜ ಪಯಣಕ್ಕೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ನಾಗಾಪುರ ಪುನರ್ವಸತಿ ಕೇಂದ್ರದ ಆಶ್ರಮ ಶಾಲೆ ಬಳಿ ಸರ್ವಸಿದ್ಧತೆ ನಡೆದಿದೆ. ಕಳೆದ ಮೂರು ವರ್ಷಗಳಿಂದ ಆಶ್ರಮ ಶಾಲಾ ಆವರಣದಲ್ಲಿ ನಡೆಯುತ್ತಿದ್ದ ಗಜಪಯಣ ಸಮಾರಂಭದ ವೇಳೆ ಸಾರ್ವಜನಿಕರಿಗೆ ವೀಕ್ಷಿಸಲು ತೊಂದರೆಯಾಗುತ್ತಿರುವುದನ್ನು ಮನಗಂಡ ಅರಣ್ಯ ಇಲಾಖೆ ಆಶ್ರಮ ಶಾಲೆ ಎದುರಿನ ಟಿಬೆಟ್‌ ನಿರಾಶ್ರಿತರ ಜಮೀನಿನಲ್ಲಿ ಆಯೋಜಿಸಲಾಗಿದೆ. ನಾಲ್ಕು ಸಾವಿರ ಆಸನ: ಮೈಸೂರಿನ ಚಂದ್ರು ಟೆಂಟ್ಸ್‌ ನವರು ಈ ಬಾರಿ ಸುಮಾರು ನಾಲ್ಕು ಸಾವಿರ ಮಂದಿ ಕೂರುವ ವಿಶಾಲವಾದ ಪೆಂಡಾಲ್‌ ನಿರ್ಮಿಸಲಾಗಿದೆ. ಇದರ ಎಡ ಭಾಗದಲ್ಲಿ ಗಣ್ಯರು ಹಾಗೂ ಬಲ ಭಾಗದಲ್ಲಿ ಸಾರ್ವಜನಿಕರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಭೋಜನ ವ್ಯವಸ್ಥೆ: 4 ಸಾವಿರ ಮಂದಿ ಸಾರ್ವಜನಿಕರಿಗೆ ಊಟದ ಪ್ಯಾಕೆಟ್‌ ವ್ಯವಸ್ಥೆ ಕಲ್ಪಿಸಿದ್ದರೆ, ಸಾವಿರ ಮಂದಿ ಗಣ್ಯರಿಗೆ ಹಾಗೂ ಆಹ್ವಾನಿತರಿಗೆ ಹೋಳಿಗೆ ಊಟದವ್ಯವಸ್ಥೆ ಮಾಡಲಾಗಿದೆ. ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ರಸ್ತೆಯ ಎರಡೂ ಬದಿಗಳಲ್ಲೂ ಗಿಡಗಂಟಿಗಳನ್ನು ತೆರವು ಗೊಳಿಸಲಾಗಿದೆ. ಆಕರ್ಷಕ ಸ್ವಾಗತ ಕಮಾನು: ಈ ಸಲ ಹುಣಸೂರು ನಾಗರಹೊಳೆ ಮುಖ್ಯರಸ್ತೆಯ ನಾಗಾಪುರ ಶಾಲೆ ಬಳಿ ಗಜಪಯಣಕ್ಕೆ ಚಾಲನೆ ನೀಡುವ ಸ್ಥಳದಲ್ಲಿ ಮೈಸೂರಿನ ನವೀನ್‌ ಆರ್ಟ್ಸ್ನ ಶ್ರೀನಿವಾಸ್‌ ತಂಡ ಮೈಸೂರು ಅರಮನೆ ಪ್ರವೇಶದ್ವಾರದ ಮಾದರಿಯಲ್ಲಿ ಸ್ವಾಗತ ಕಮಾನು ಆಕರ್ಷಕ ರೀತಿಯಲ್ಲಿ ನಿರ್ಮಿಸಲಾಗಿದೆ. ಆಕರ್ಷಕ ಕಲಾತಂಡಗಳು: ಇದೇ ಮೊದಲ ಬಾರಿಗೆ ಗಜಪಯಣಕ್ಕೆ ಕಳೆತುಂಬಲು ಡೊಳ್ಳುಕುಣಿತ, ಪಟಕುಣಿತ, ಕಂಸಾಳೆ ಸೇರಿದಂತೆ ಅನೇಕ ಪ್ರಕಾರಗಳು ಇರಲಿವೆ ಅಲ್ಲದೆ ಸ್ಥಳೀಯ ನಾಗಾಪುರ ಆಶ್ರಮ ಶಾಲೆ, ಪ್ರೌಢಶಾಲೆ, ಗುರುಪುರ ಪ್ರೌಡಶಾಲೆ, ನಲ್ಲೂರು ಪಾಲದ ಜ್ಞಾನ ಸರೋವರ ಶಾಲೆ ಹಾಗೂ ಗುರುಪುರ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನೀಡುವರು.
ಕಾಡುಕುಡಿಗಳ ಭರ್ಜರಿ ತಯಾರಿ: ಗಜ ಪಯಣದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ನಾಗಾಪುರ ಆಶ್ರಮ ಶಾಲೆಯ
ಕಾಡಿನ ಮಕ್ಕಳು ನಿತ್ಯ ತಾಲೀಮು ನಡೆಸುತ್ತಿದ್ದು, ಪ್ರದರ್ಶನ ನೀಡಲು ಸಜ್ಜಾಗುತ್ತಿದ್ದಾರೆ. 

Advertisement

ಆನೆಗಳ ಆಗಮನ: ಗಜಪಯಣ ಆರಂಭಗೊಳ್ಳುವ ನಾಗಾಪುರ ಆಶ್ರಮ ಶಾಲಾ ಬಳಿಗೆ ಶುಕ್ರವಾರ ಸಂಜೆಯೆ ಅಂಬಾರಿ ಹೊರುವ
ಎಚ್‌.ಡಿ.ಕೋಟೆಯ ಬಳ್ಳೆ ಶಿಬಿರದಿಂದ ಕ್ಯಾಪ್ಟನ್‌ ಅರ್ಜುನ, ಮತ್ತಿಗೋಡು ಆನೆ ಶಿಬಿರದಿಂದ ಬಲರಾಮ, ಅಭಿಮನ್ಯು, ವರಲಕ್ಷ್ಮೀ, ಇದೇ ಮೊದಲ ಸಲ ಪಾಲ್ಗೊಳ್ಳುತ್ತಿರುವ ಅತಿ ಕಿರಿಯ ಭೀಮ, ಕೆ.ಗುಡಿ ಶಿಬಿರದಿಂದ ಗಜೇಂದ್ರ ಹಾಗೂ ಕೊಡಗಿನ ದುಬಾರೆಯಿಂದ ವಿಜಯ, ಕಾವೇರಿ ಆನೆಗಳು ಆಗಮಿಸಿವೆ. ಇಲ್ಲಿಗೆ ಬರುವ ಮುನ್ನ ಆಯಾ ಆನೆ ಶಿಬಿರಗಳಲ್ಲಿ ಮಾವುತರು, ಕವಾಡಿ ಹಾಗೂ ಅರಣ್ಯ ಸಿಬ್ಬಂದಿ ವಿಶೇಷ ಪೂಜೆ ಸಲ್ಲಿಸಿದರು. ಇವರ ಕುಟುಂಬದವರೂ ಸಹ ಜೊತೆಗೆ ಆಗಮಿಸಿದ್ದಾರೆ. ಬೆಳಗ್ಗೆ 11ಕ್ಕೆ ಉಸ್ತುವಾರಿ ಸಚಿವರ ಚಾಲನೆ: ನಾಗಾಪುರ ಆಶ್ರಮ ಶಾಲಾಬಳಿಯಿಂದ ಹೊರಡುವ ಗಜಪಯಣಕ್ಕೆ ಶನಿವಾರ ಬೆಳಗ್ಗೆ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಚಾಲನೆ ನೀಡುವರು. ಶಾಸಕ ಮಂಜುನಾಥ್‌, ಜಿಪಂ ಅಧ್ಯಕ್ಷೆ ನಯಿಮಾಸುಲ್ತಾನಾ, ಮೇಯರ್‌ ರವಿಕುಮಾರ್‌, ಸಂಸದ ಪ್ರತಾಪಸಿಂಹ ಹಾಗೂ ಜಿಲ್ಲೆಯ ಶಾಸಕರು, ಎಂಎಲ್‌ಸಿಗಳು, ಗುರುಪುರ ಹಾಗೂ ದೊಡ್ಡಹೆಜೂjರು ಗ್ರಾಪಂ ಅಧ್ಯಕ್ಷರು ಭಾಗವಹಿಸಲಿದ್ದಾರೆ. ಅಧಿಕಾರಿಗಳ ವೀಕ್ಷಣೆ: ಸಿಸಿಎಫ್ ಕರುಣಾಕರ್‌, ಡಿಸಿಎಫ್ ಏಡುಕೊಂಡಲು, ಆರ್‌ಎಫ್ಒ ದೇವರಾಜ್‌ ನೇತೃತ್ವದಲ್ಲಿ ಎಲ್ಲ ತಯಾರಿಗಳು ನಡೆದಿದೆ. ತಹಶೀàಲ್ದಾರ್‌ ಮೋಹನ್‌, ಪೊಲೀಸ್‌ ಅಧಿಕಾರಿಗಳು ಸಹ ಭೇಟಿ ನೀಡಿದ್ದರು.

ಕಿ ಸಂಪತ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next