Advertisement

ಐಪಿಎಲ್‌ ಹರಾಜು: ಜೂ. ತೆಂಡುಲ್ಕರ್‌ಗೆ ಅರ್ಹತೆ

12:44 AM Jan 18, 2021 | Team Udayavani |

ಮುಂಬಯಿ: ಸಚಿನ್‌ ತೆಂಡುಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡುಲ್ಕರ್‌ ಐಪಿಎಲ್‌ ಹರಾಜಿನಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದಿದ್ದಾರೆ. ಅವರು “ಸಯ್ಯದ್‌ ಮುಷ್ತಾಕ್‌ ಅಲಿ ಟಿ20′ ಕೂಟದಲ್ಲಿ ಶುಕ್ರವಾರ ಹರ್ಯಾಣ ವಿರುದ್ಧ ಮುಂಬಯಿ ಪರ ಆಡುವ ಮೂಲಕ ಈ ಅರ್ಹತೆ ಗಳಿಸಿದರು.

Advertisement

ಐಪಿಎಲ್‌ ನಿಯಮಗಳ ಪ್ರಕಾರ, ಹರಾಜಿನಲ್ಲಿ ಹೆಸರು ಸೇರ್ಪಡೆಯಾಗಲು ರಾಜ್ಯದ ಸೀನಿಯರ್‌ ತಂಡದ ಪರ ಕನಿಷ್ಠ ಒಂದು ಪಂದ್ಯದಲ್ಲಾದರೂ ಆಡಿರಬೇಕು. ಮೊನ್ನೆಯಷ್ಟೇ ಅರ್ಜುನ್‌ಗೆ ಈ ಅವಕಾಶ ಸಿಕ್ಕಿದೆ. ಅವರು ಎಡಗೈ ವೇಗದ ಬೌಲಿಂಗ್‌ ಜತೆಗೆ ಬ್ಯಾಟಿಂಗ್‌ ಕೂಡ ಮಾಡಬಲ್ಲರು.

Advertisement

Udayavani is now on Telegram. Click here to join our channel and stay updated with the latest news.

Next