ಆತ ಕ್ರಿಕೆಟ್‌ನ ದಂತಕಥೆ. ಕ್ರೀಸ್‌ನಲ್ಲಿ ಬ್ಯಾಟ್ ಹಿಡಿದು ನಿಂತರೆ ಎದುರಾಳಿ ಬೌಲರ್‌ಗಳು ಬೆವರಿಳಿಯುತ್ತಿದ್ದರು. ಆತನ ಆಟಕ್ಕೆ ಮುರಿಯಲಾಗದಂಥ ದಾಖಲೆಗಳ ಶಿಖರಗಳೇ ನಿರ್ಮಾಣವಾಗಿವೆ. ಒಂದೇ ಮಾತಲ್ಲಿ ಹೇಳಬೇಕು ಅಂದರೆ ಆತ ಕ್ರಿಕೆಟ್‌ನಲ್ಲಿ ಹಿಮಾಲಯದ ಶಿಖರ ಇದ್ದಂತೆ. ಕ್ರೀಡಾ ಜಗತ್ತಿಗೆ ಆತ ಸ್ಫೂರ್ತಿದಾಯಕ. ಆತನೇ ಸಚಿನ್ ತೆಂಡುಲ್ಕರ್. ಆದರೆ ಸಚಿನ್ ಏಕೈಕ ಪುತ್ರ ಅರ್ಜುನ್ ತೆಂಡುಲ್ಕರ್ ಹಾದಿ ಮಾತ್ರ ಬೇರೆಯಾಗಿದೆ. ಹೌದು, ಅಪ್ಪ ಮಾಸ್ಟರ್ ಬ್ಲಾಸ್ಟರ್ ಆಗಿ ಬೌಲರ್‌ಗಳ ಹೃದಯ ನಡುಗಿಸಿದ್ದರೆ, ಮಗ ವೇಗದ ಬೌಲರ್ ಆಗಿ ಬ್ಯಾಟ್ಸ್‌ಮನ್‌ಗಳ ಹೃದಯ ನಡುಗಿಸುತ್ತಿದ್ದಾನೆ. ಅರ್ಜುನ್ ಕೂಡ ಅಪ್ಪನಂತೆಯೇ ದೊಡ್ಡ ಬ್ಯಾಟ್ಸ್ ಮನ್ ಆಗಬೇಕು ಅಂಥ ಕನಸು ಕಂಡ ಬಾಲಕ. ಆದರೆ ಇತನ ಎತ್ತರ ಬ್ಯಾಟಿಂಗ್ ಗಿಂತ ಬೌಲಿಂಗ್‌ಗೆ ಹೆಚ್ಚಿನ ನೆರವು ನೀಡುತ್ತಿದೆ. ಹೀಗಾಗಿ ಬ್ಯಾಟ್ಸ್ ಮನ್ ಆಗಿಬೇಕಿದ್ದ ಅರ್ಜುನ್ ಇದೀಗ ವೇಗದ ಬೌಲರ್ ಆಗಿದ್ದಾರೆ. ಎದುರಾಳಿ ಬ್ಯಾಟ್ಸ್ ಮನ್‌ಗಳ ಬೆವರಿಳಿಸುತ್ತಿದ್ದಾನೆ.
ಭರ್ಜರಿ ಫಾರ್ಮ್
ಸದ್ಯ ಮುಂಬೈ ಕಿರಿಯರ ತಂಡದಲ್ಲಿ ಆಡುತ್ತಿರುವ ಅರ್ಜುನ್ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ನಡುಗಿಸುತ್ತಿದ್ದಾರೆ.ಇತ್ತೀಚೆಗೆ ನಡೆದ ಕೂಚ್ ಬೆಹಾರ್ ಕೂಟದಲ್ಲಿ ಮಧ್ಯ ಪ್ರದೇಶ ಮತ್ತು ರೈಲ್ವೇಸ್ ವಿರುದ್ಧ ತಲಾ 5 ವಿಕೆಟ್ ಕಿತ್ತು ಮುಂಬೈ ತಂಡದ ಗೆಲುವಿನ ರುವಾರಿಯಾಗಿದ್ದಾರೆ. ಪ್ರಮುಖ ಬ್ಯಾಟ್ಸ್ ಮನ್‌ಗಳನ್ನು ಪೆವಿಲಿಯನ್‌ಗೆ ಸೇರಿಸಿದ ಖ್ಯಾತಿ ಅರ್ಜುನ್ ಅವರದು. ಇದೇ ಫಾರ್ಮ್ನಲ್ಲಿ ಅರ್ಜುನ್ ಮುನ್ನುಗ್ಗಿದರೆ ಅಭಿಮಾನಿಗಳಿಗೆ ರಾಷ್ಟ್ರೀಯ ತಂಡದಲ್ಲಿ ಸಚಿನ್ ಪುತ್ರನನ್ನು ಕಾಣುವ ಕಾಲ ದೂರವಿಲ್ಲ.
ದಿಗ್ಗಜರಿಂದ ಮಾರ್ಗದರ್ಶನ
ಸಚಿನ್ ತೆಂಡುಲ್ಕರ್ ಪುತ್ರನಾಗಿರುವುದರಿಂದ ತಾರಾ ಆಟಗಾರರನ್ನು ಭೇಟಿ ಮಾಡುವುದು,ಅವರಿಂದ ಸಲಹೆ ಪಡೆಯುವುದು ಯಾವುದೂ ಅರ್ಜುನ್‌ಗೆ ಅಸಾಧ್ಯವಾಗಿಲ್ಲ. ಹೀಗಾಗಿ ಪಾಕ್‌ನ ಮಾಜಿ ವೇಗಿ ವಾಸಿಂ ಅಕ್ರಮ್ ಸೇರಿದಂತೆ ಮಾಜಿ ದಿಗ್ಗಜ ಬೌಲರ್‌ಗಳಿಂದ ಮಾರ್ಗದರ್ಶನ ಸಿಕ್ಕಿದೆ. ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿಯೇ ತರಬೇತಿ ಪಡೆದು ಆಗಿದೆ.
ವೈರಲ್ ಆದ ಬೌಲಿಂಗ್ ಶೈಲಿ
ಪ್ರಸಕ್ತ ವರ್ಷ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸಕ್ಕೆ ಬಂದಿತ್ತು. ಈ ಸಂದರ್ಭದಲ್ಲಿ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನೆಟ್ಸ್ ಅಭ್ಯಾಸದ ವೇಳೆ ವಿರಾಟ್ ಕೊಹ್ಲಿಗೆ ಅರ್ಜುನ್ ಬೌಲಿಂಗ್ ಮಾಡಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೈರಲ್ ಆಗಿತ್ತು. ಅರ್ಜುನ್ ಬೌಲಿಂಗ್ ಶೈಲಿ ನೋಡಿ ಕ್ರೀಡಾಭಿಮಾನಿಗಳು ಫಿದಾ ಆಗಿದ್ದಾರೆ. ಬೌಲರ್‌ಗಳ ಎದೆ ನಡುಗಿಸುವಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.