Advertisement

ಜೂನಿಯರ್‌ ತೆಂಡುಲ್ಕರ್‌ ಲಾರ್ಡ್ಸ್‌ ಗ್ರೌಂಡ್ಸ್‌ಮ್ಯಾನ್‌!

08:44 AM Aug 11, 2018 | Team Udayavani |

ಲಂಡನ್‌: ಜೂನಿಯರ್‌ ತೆಂಡುಲ್ಕರ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಲಾರ್ಡ್ಸ್‌ ಟೆಸ್ಟ್‌ ಪಂದ್ಯಕ್ಕೂ ಮುನ್ನ ನೆಟ್ಸ್‌ನಲ್ಲಿ ವಿರಾಟ್‌ ಕೊಹ್ಲಿಗೆ ಬೌಲಿಂಗ್‌ ನಡೆಸಿದ್ದ ಅರ್ಜುನ್‌, ಶುಕ್ರವಾರ ಪಂದ್ಯದಾರಂಭಕ್ಕೂ ಮುನ್ನ ಲಾರ್ಡ್ಸ್‌ ಅಂಗಳಕ್ಕಿಳಿದು ಗ್ರೌಂಡ್ಸ್‌ ಮ್ಯಾನ್‌ ಕರ್ತವ್ಯ ನಿಭಾಯಿಸಿದ್ದಾರೆ.

Advertisement

ಮಳೆಯಿಂದ ಒದ್ದೆಯಾದ ಲಾರ್ಡ್ಸ್‌ ಅಂಗಳವನ್ನು ಸ್ವಚ್ಛ ಮಾಡುತ್ತಿದ್ದ ಮೈದಾನದ ಸಿಬಂದಿಗಳೊಂದಿಗೆ ಬೆರೆತು ಅವರಿಗೆ ನೆರವಾದರು. ಇದಕ್ಕೆ ಸಂಬಂಧಿಸಿದ ಅರ್ಜುನ್‌ ತೆಂಡುಲ್ಕರ್‌ ಅವರ ಚಿತ್ರವೊಂದನ್ನು ಲಾರ್ಡ್ಸ್‌ ಕ್ರಿಕೆಟ್‌ ಗ್ರೌಂಡ್‌ನ‌ ಅಧಿಕೃತ ಟ್ವಿಟರ್‌ ಪೋಸ್ಟ್‌ ಮಾಡಿದೆ. 

“ಅರ್ಜುನ್‌ ತೆಂಡುಲ್ಕರ್‌! ಎಂಸಿಸಿಯಲ್ಲಿ ಪಡೆಯುತ್ತಿರುವ ಜತೆಯಲ್ಲೇ ಇಲ್ಲಿನ ಅಂಗಳದ ಸಿಬಂದಿಯ ನೆರವಿಗೆ ನಿಂತಿದ್ದಾರೆ’ ಎಂದು ಟ್ವೀಟ್‌ನಲ್ಲಿ ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next