ಲಕ್ನೋ: ಪ್ಲೇ ಆಫ್ ರೇಸ್ ನಲ್ಲಿರುವ ಮುಂಬೈ ಇಂಡಿಯನ್ಸ್ ತಂಡವು ಮಂಗಳವಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದೆ. ಆದರೆ ಈ ಪಂದ್ಯಕ್ಕೂ ಮೊದಲು ಮುಂಬೈ ಇಂಡಿಯನ್ಸ್ ತಂಡದ ಬೌಲರ್ ಅರ್ಜುನ್ ತೆಂಡೂಲ್ಕರ್ ಅವರಿಗೆ ನಾಯಿ ಕಚ್ಚಿದೆ.
ಲಕ್ನೋ ತಂಡದ ಬೌಲರ್ ಗಳಾದ ಯುಧ್ವೀರ್ ಸಿಂಗ್ ಮತ್ತು ಮೊಹ್ಸೀನ್ ಖಾನ್ ಜತೆಗೆ ಮಾತನಾಡುವ ವೇಳೆ ಅರ್ಜುನ್ ತೆಂಡೂಲ್ಕರ್ ಇದರ ಬಗ್ಗೆ ಬಹಿರಂಗ ಪಡಿಸಿದ್ದಾರೆ.
ಇದನ್ನೂ ಓದಿ:Jharkhand; ವಿವಾಹವಾಗಲು ನಿರಾಕರಿಸಿದ ಯುವತಿಯ ತಲೆಬೋಳಿಸಿ ಮೆರವಣಿಗೆ!
ಅರ್ಜುನ್ ತೆಂಡೂಲ್ಕರ್ ಅವರು ಈ ಸೀಸನ್ ನಲ್ಲಿ ಐಪಿಎಲ್ ಗೆ ಪದಾರ್ಪಣೆ ಮಾಡಿದ್ದರು. ಎಡಗೈ ವೇಗಿಯಾದ ಅರ್ಜುನ್ ಮುಂಬೈ ಇಂಡಿಯನ್ಸ್ ಪರ ನಾಲ್ಕು ಪಂದ್ಯಗಳಲ್ಲಿ ಆಡಿದ್ದಾರೆ.
Related Articles
12 ಪಂದ್ಯಗಳಲ್ಲಿ ಏಳು ಪಂದ್ಯಗಳನ್ನು ಗೆದ್ದುಕೊಂಡಿರುವ ಮುಂಬೈ ಇಂಡಿಯನ್ಸ್ ತಂಡವು ಸದ್ಯ ಮೂರನೇ ಸ್ಥಾನದಲ್ಲಿದೆ. ಇಂದಿನ ಪಂದ್ಯ ಗೆದ್ದರೆ ಮುಂಬೈನ ಪ್ಲೇ ಆಫ್ ಸ್ಥಾನ ಬಹುತೇಕ ಖಚಿತವಾಗಲಿದೆ.