ಬೆಂಗಳೂರು : ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮೀ ದೇವಮ್ಮ ಶನಿವಾರ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲಕ್ಷ್ಮೀದೇವಿ ಅವರನ್ನು ಕೆಲವು ದಿನಗಳ ಹಿಂದೆ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಚಿಕಿತ್ಸೆ ಫಲಿಸದೆ ಶನಿವಾರ ಮಧ್ಯಾಹ್ನ ನಿಧನಹೊಂದಿದ್ದಾರೆ.
ಇಂದು ಸಂಜೆ ಸ್ವಗ್ರಾಮ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಜಕ್ಕೇನಹಳ್ಳಿಯಲ್ಲಿ ಲಕ್ಷ್ಮೀದೇವಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಇದಕ್ಕೂ ಮುನ್ನ ಬೆಂಗಳೂರಿನ ನಿವಾಸದಲ್ಲಿ ಕೆಲಕಾಲ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಲಕ್ಷ್ಮೀದೇವಿ ಖ್ಯಾತ ನಟ ಶಕ್ತಿ ಪ್ರಸಾದ್ ಜೊತೆ ವಿವಾಹ ಆಗಿದ್ದರು. ಲಕ್ಷ್ಮಿದೇವಿ ಮತ್ತು ಶಕ್ತಿ ಪ್ರಸಾದ್ ದಂಪತಿಗೆ ಮೂವರು ಮಕ್ಕಳು. ಒಬ್ಬರು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳು. ಧ್ರುವ ಸರ್ಜಾ ಮತ್ತು ಚಿರು ಸರ್ಜಾ ತಾಯಿ ಅಮ್ಮಾಜಿ, ಅರ್ಜುನ್ ಸರ್ಜಾ ಮತ್ತು ಕಿಶೋರ್ ಸರ್ಜಾ. ಕಿಶೋರ್ ಸರ್ಜಾ 2009ರಲ್ಲೇ ಇಹಲೋಕ ತ್ಯಜಿಸಿದರು.
ಇದನ್ನೂ ಓದಿ : ಕೊಟ್ಟ ಮಾತು ತಪ್ಪದ ಗಂಡ: ವಿಭಿನ್ನವಾಗಿ ರೋಮ್ಯಾಂಟಿಕ್ ಕ್ಷಣ ಕಳೆದ ವ್ಯಕ್ತಿ; ವಿಡಿಯೋ ವೈರಲ್