Advertisement

ಅರ್ಜುನ್‌ ಲೈಫ್ ಶುರು

03:50 AM Apr 14, 2017 | Team Udayavani |

ಮೊದಲ ಸಿನಿಮಾದಲ್ಲೇ ನಿರ್ದೇಶನ ಮಾಡಿ, ನಾಯಕರಾಗಿ ನಟಿಸೋದು ಸುಲಭದ ಕೆಲಸವಲ್ಲ. ಅದು ಸವಾಲಿನ ಕೆಲಸ. ಆ ಸವಾಲಿನಲ್ಲಿ ಗೆದ್ದರೆ ಒಳ್ಳೆಯ ಭವಿಷ್ಯವಿರುವುದಂತೂ ಸುಳ್ಳಲ್ಲ. ಈಗ ಯಾಕೆ ಈ ವಿಷಯ ಅಂದರೆ ಮೊದಲ ಸಿನಿಮಾದಲ್ಲೇ ಅರ್ಜುನ್‌ ಕಿಶೋರ್‌ ಚಂದ್ರ ಎಂಬ ಯುವ ಪ್ರತಿಭೆ ನಿರ್ದೇಶನದ ಜೊತೆಗೆ ನಾಯಕರಾಗಿಯೂ ನಟಿಸಿದ್ದಾರೆ. ಅದು “ಲೈಫ್ 360′ ಎಂಬ ಸಿನಿಮಾದಲ್ಲಿ. ಈಗಾಗಲೇ ಚಿತ್ರದ ಟ್ರೇಲರ್‌ ಹಾಗೂ ಹಾಡುಗಳು ಬಿಡುಗಡೆಯಾಗಿವೆ. ಹಾಡುಗಳಿಗೆ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಅರ್ಜುನ್‌ ಖುಷಿಯಾಗಿದ್ದಾರೆ. 

Advertisement

ಅರ್ಜುನ್‌ಗೆ ಇದು ಮೊದಲ ಸಿನಿಮಾ. ಒಂದು ಒಳ್ಳೆಯ ಸಿನಿಮಾ ಮಾಡಬೇಕೆಂಬ ಆಸೆ ತುಂಬಾ ದಿನಗಳಿಂದ ಇತ್ತಂತೆ. ಅದು ಈಗ “ಲೈಫ್ 360′ ಮೂಲಕ ಈಡೇರಿದೆ. ಕಾಲೇಜು ದಿನಗಳಲ್ಲಿ ನಡೆದ ಕೆಲವು ಘಟನೆಗಳನ್ನಿಟ್ಟುಕೊಂಡು ಅರ್ಜುನ್‌ “ಲೈಫ್ 360′ ಸಿನಿಮಾವನ್ನು ಮಾಡಿದ್ದಾರಂತೆ. ತಮ್ಮ ಸ್ನೇಹಿತರು ಕೂಡಾ ಕಥೆ, ಚಿತ್ರಕಥೆಗೆ ಸಾಥ್‌ ನೀಡಿದ್ದಾರಂತೆ. ಅಂದಹಾಗೆ, ಇದೊಂದು ಜರ್ನಿ ಸ್ಟೋರಿ. ನಾಯಕ ಊರು ಸುತ್ತುತ್ತಲೇ ಜೀವನ ಪಾಠ ಕಲಿಯುತ್ತಾನಂತೆ. 22 ಜಿಲ್ಲೆಗಳಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆದಿದೆ. ಅರ್ಜುನ್‌ ಕಾಲೇಜು ದಿನಗಳಲ್ಲಿ ತೋಚಿದ್ದನ್ನು ಬರೆಯುತ್ತಿದ್ದರಂತೆ. ಅವೆಲ್ಲವನ್ನು ಸೇರಿಸಿ, ತ‌ನ್ನ ಸ್ನೇಹಿತರ ಸಹಾಯದಿಂದ ಸ್ಕ್ರಿಪ್ಟ್ ಮಾಡಿ ಈಗ ಸಿನಿಮಾ ಆಗಿದೆ. ಚಿತ್ರದಲ್ಲಿ ಟೀನೇಜ್‌ ಪ್ರೀತಿಯಿಂದ ಹಿಡಿದು ಜೀವನದ ಪಾಠವನ್ನು ಹೇಳುವ ಪ್ರಯತ್ನ ಮಾಡಿದ್ದಾರಂತೆ. ಇನ್ನು, ಅರ್ಜುನ್‌ಗೆ ಸಾಥ್‌ ನೀಡಿರೋದು ನಾಯಕಿ ಅನುಷಾ. “ಸೋಡಾಬುಡ್ಡಿ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಅನುಷಾ ಮೊದಲು ಒಪ್ಪಿಕೊಂಡ ಸಿನಿಮಾ “ಲೈಫ್ 360′. ಅರ್ಜುನ್‌ ಅವರ ಸಿನಿಮಾ ಕನಸಿಗೆ ಅನುಷಾ ಸಾಥ್‌ ಕೊಟ್ಟರಂತೆ. 

ಅಂದಹಾಗೆ, ಅರ್ಜುನ್‌ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಹೊಸಬರ ಹೊಸ ಬಗೆಯ ಸಿನಿಮಾಗಳನ್ನು ಜನ ಈಗ ಇಷ್ಟಪಡುತ್ತಿರುವುದರಿಂದ “ಲೈಫ್ 360’ಯನ್ನು ಕೂಡಾ ಜನ ಇಷ್ಟಪಡುತ್ತಾರೆಂಬ ವಿಶ್ವಾಸ ಅರ್ಜುನ್‌ಗಿದೆ.

ರವಿ ರೈ

Advertisement

Udayavani is now on Telegram. Click here to join our channel and stay updated with the latest news.

Next