Advertisement
ಕೌಡಿಚ್ಚಾರು ಶ್ರೀಕೃಷ್ಣ ಭಜನ ಮಂದಿರದ ಸಭಾ ಭವನದಲ್ಲಿ ಅರಿಯಡ್ಕ ಗ್ರಾ.ಪಂ. ಗ್ರಾಮ ಸಭೆ ಪಂಚಾಯತ್ ಅಧ್ಯಕ್ಷೆ ಸವಿತಾ ಎಸ್. ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮದ ಪಯಂದೂರು- ಕೋರಿಕ್ಕಾರ್ ಸಂಪರ್ಕ ರಸ್ತೆ ಅಭಿವೃದ್ಧಿಗೆ ಮಹಿಳೆಯರು ಒತ್ತಾಯಿಸಿದರು.ಇದಕ್ಕೆ ಪಂಚಾಯತ್ ಸದಸ್ಯ ರಾಜೇಶ್ ಉತ್ತರಿಸಿ, ಈಗಾಗಲೇ ಪ್ರಥಮ ಹಂತವಾಗಿ ಅನುದಾನವನ್ನು ನೀಡಲಾಗಿದೆ. ಇದರಲ್ಲಿ ಒಂದಷ್ಟು ರಸ್ತೆ ದುರಸ್ತಿಯಾಗಿದೆ. ಮುಂದಿನ ವರ್ಷದಲ್ಲಿ ರಸ್ತೆಯನ್ನು ಹೆಚ್ಚು ಅಭಿವೃದ್ಧಿ ಮಾಡುವ ಭರವಸೆ ನೀಡಿದರು. ಇದಕ್ಕೆ ಒಪ್ಪದ ಸ್ಥಳೀಯ ನಿವಾಸಿಗಳು “ನಮಗೆ ಶೀಘ್ರವಾಗಿ ಅನುದಾನದ ಬಿಡುಗಡೆಯಾಗಬೇಕು’ ಎಂದು ಪಟ್ಟುಹಿಡಿದರು.
Related Articles
ಗ್ರಾಮ ಸಭೆಯಲ್ಲಿ ದಲಿತ ಸಂಘಟನೆ ಮುಖಂಡ ಗಿರಿಧರ್ ನಾಯ್ಕ ಉಪಸ್ಥಿತಿ ಇದ್ದು, ಮಾಟ್ನೂರು ಗ್ರಾಮದ ಮಾಡನ್ನೂರು-ಅಂಕೋತ್ತಿಮಾರ್ ರಸ್ತೆ ಅಭಿವೃದ್ಧಿ ಕುರಿತು ಪ್ರಶ್ನಿಸಲು ಮುಂದಾದರು. ಈ ವೇಳೆಯಲ್ಲಿ ಗ್ರಾಮಸ್ಥರಾದ ಜಾಬೀರ್ ಅರಿಯಡ್ಕ, ಇಕ್ಬಾಲ್ ಹುಸೇನ್, ಗ್ರಾ.ಪಂ. ಸದಸ್ಯ ದಿವ್ಯನಾಥ ಶೆಟ್ಟಿ ಹಾಗೂ ಇತರರ ಅನೇಕ ಮಂದಿ ಹೊರ ಗ್ರಾಮದವರು ನಮ್ಮ ಗ್ರಾಮಸಭೆಯಲ್ಲಿ ಬಂದು ಪ್ರಶ್ನಿಸುವ ಹಕ್ಕು ಇಲ್ಲ. ಮೊದಲು ಗ್ರಾಮದಲ್ಲದ ವ್ಯಕ್ತಿಯನ್ನು ಹೊರಗೆ ಕಳುಹಿಸಿ ಎಂದು ಸಭೆಯಲ್ಲಿ ಪಂಚಾಯತ್ ಅಧ್ಯಕ್ಷರನ್ನು, ಸಭೆಯ ಚರ್ಚಾ ನಿಯಂತ್ರಣಾಧಿಕಾರಿ ರೋಹಿತ್‌ದಾಸ್‌ಗೆ ಒತ್ತಾಯಿಸಿದರು. ಚರ್ಚೆ ವೇಳೆ ಧಿಕ್ಕಾರ, ಆರೋಪ ಪ್ರತ್ಯಾರೋಪ ನಡೆದವು. ಒಟ್ಟಾರೆ ಸಭೆಯಲ್ಲಿ ಗೊಂದಲದ ವಾತಾವರಣ. ಈ ವೇಳೆ ಸಭೆಯಿಂದ ಗ್ರಾಮಸ್ಥರಲ್ಲದಿದ್ದರೆ ಹೊರಹೋಗಲು ಪಂಚಾಯತ್ ಅಧ್ಯಕ್ಷೆ ಸವಿತಾ ಎಸ್. ಮತ್ತು ಚರ್ಚಾ ನಿಯಂತ್ರಣ ಅಧಿಧಿಕಾರಿ ಸೂಚಿದರು.
ಗ್ರಾ.ಪಂ. ಅಧ್ಯಕ್ಷೆ, ತಾ.ಪಂ. ಸದಸ್ಯ ರಾಧಾಕೃಷ್ಣ ಬೋರ್ಕರ್, ಪಂ. ಉಪಾಧ್ಯಕ್ಷ ಲೋಕೇಶ್ ಚಾಕೋಟೆ ಜನ ಅಸೀನರಾಗಿದ್ದ ಸ್ಥಳಕ್ಕೆ ಬಂದು ಗಿರಿಧರ್ ನಾಯ್ಕ ಅವರಲ್ಲಿ ಸಭೆಯಿಂದ ಹೊರಹೋಗಲು ಮನವಿ ಮಾಡಿಕೊಂಡರು. ಈ ನಡುವೆ ಪೋಲಿಸರು ಸಭೆಗೆ ಬಂದು ಸಭೆಯನ್ನು ನಿಯಂತ್ರಣ ಮಾಡಿದರು. ಪೋಲಿಸರ ನಡೆಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿ ಸಭೆಯಿಂದ ಹೊರ ಗ್ರಾಮದವರನ್ನು ಹೊರಗೆ ಕಳುಹಿಸಲು ಒತಾಯಿಸಿದರು. ಅನಂತರ ಸಭೆಯಿಂದ ಇತರರು ಹೊರನಡೆದ ಬಳಿಕ ಸಭೆ ಶಾಂತವಾಗಿ ಮುಂದುವರಿಯಿತು.
Advertisement
ದಲಿತ ಮುಖಂಡರು ಒತ್ತಾಯಿಸಿದ ಮಾಡನ್ನೂರು- ಅಂಕೋತ್ತಿಮಾರ್ ರಸ್ತೆ ಅಭಿವೃದ್ಧಿಗೆ ಪಂಚಾಯತ್‌ನಿಂದ ಮೀಸಲು ಇಟ್ಟ ಸುಮಾರು 1 ಲಕ್ಷ ರೂ. ಅನುದಾನದ ಕಾಮಗಾರಿ ಶೀಘ್ರ ನಡೆಸಿಕೊಡುವ ಭರವಸೆಯನ್ನು ವಾರ್ಡ್ ಸದಸ್ಯ ದಿವ್ಯನಾಥ ಶೆಟ್ಟಿ ನೀಡಿದಾಗ ಚರ್ಚೆ ಕೊನೆಯಾಯಿತು.
ಬೇರೆ ಶಾಲೆಗೆ ದಾಖಲಾತಿಗ್ರಾಮದ ಶಾಲೆಯೊಂದರಲ್ಲಿ ಇತರ ಶಾಲೆಗಳ ಮಕ್ಕಳನ್ನು ದಾಖಲಾತಿ ಮಾಡುತ್ತಿದ್ದಾರೆ. ಈ ಮಕ್ಕಳು ನಮ್ಮ ಶಾಲೆಯಿಂದ ಟಿ.ಸಿ.ಯನ್ನು ಪಡೆದಿಲ್ಲ. ಜತೆಗೆ ದಾಖಲಾತಿ ಶುಲ್ಕವನ್ನು ಬಾಕಿ ಇರಿಸಿಕೊಂಡಿದ್ದಾರೆ. ಇವರನ್ನು ಹೇಗೆ ಬೇರೆ ಶಾಲೆಗೆ ಸೇರಿಸಲಾಗುತ್ತಿದೆ ಎಂದು ಅಬ್ದುಲ್ ಅಝೀಜ್ ಬುಶ್ರಾ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿ ಶಿಕ್ಷಣ ಇಲಾಖೆ ಅಧಿಧಿಕಾರಿ, ಮಕ್ಕಳ ಹೆತ್ತವರು ದಾಖಲಾತಿಗೆ ಮನವಿ ಮಾಡಿದರೆ ಮಕ್ಕಳನ್ನು ದಾಖಲು ಮಾಡಬಹುದು. ವಿದ್ಯಾರ್ಥಿ ಈ ಹಿಂದೆ ವ್ಯಾಸಂಗ ಮಾಡುತ್ತಿದ್ದ ಶಾಲೆಯಿಂದ ಟಿ.ಸಿಗೆ ಅರ್ಜಿ ಪಡೆಯಲು ಪತ್ರ ಮೂಲಕ ಕೇಳಿಕೊಳ್ಳಬಹುದು ಎಂದರು. ವಿವಿಧ ಚರ್ಚೆಯಲ್ಲಿ ಪ್ರಮುಖರಾದ ಸಾರ್ಥಕ್ ರೈ ಅರಿಯಡ್ಕ, ಲೋಹಿತ್ ಅಮಿcನಡ್ಕ ಮತ್ತಿತರರು ಪಾಲ್ಗೊಂಡರು.
ಮಾಟ್ನೂರು ಕೊಳ್ತಿಗೆ ತಾ.ಪಂ. ಸದಸ್ಯರಾದ ರಾಮ ಪಂಬಾರು, ಸದಸ್ಯರಾದ ಸಂತೋಷ್ ಕುಮಾರ್ ಕೆ, ಸದಾನಂದ ಮಣಿಯಾಣಿ, ಸಾವಿತ್ರಿ ಎಂ.ಬಿ., ಅಮೃತಾ, ರಾಜೇಶ್, ಸುಂದರ, ಪ್ರೇಮಲತಾ, ಹೇಮಾವತಿ, ಚಿತ್ರಾ ಎನ್. ನಾಯ್ಕ, ನಿರ್ಮಲಾ ಎಸ್., ಹೊನ್ನಪ್ಪ ಪೂಜಾರಿ, ಲೋಹಿತ್ ಪೂಜಾರಿ, ಸೀತಾರಾಮ ಮೇಲ್ಪಾದೆ, ಎ. ದಿವ್ಯನಾಥ ಶೆಟ್ಟಿ, ರವೀಂದ್ರ ಪೂಜಾರಿ, ಮಹಾಲಿಂಗ ನಾಯ್ಕ, ನವೀನ ಬಿ.ಡಿ., ಸರೋಜಿನಿ, ಸಲ್ಮಾ, ಸಹನಾ ನಳಿನಾಕ್ಷಿ ಮತ್ತು ವಿವಿಧ ಇಲಾಖೆಯ ಅಧಿಧಿಕಾರಿಗಳು ಹಾಜರಿದ್ದರು. ಪಿಡಿಒ ಜಯಪ್ರಕಾಶ್ ವಿವಿಧ ಮಾಹಿತಿ ನೀಡಿದರು. ತಿಲಕ್ ರೈ ಕುತ್ಯಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. 1.5 ಲಕ್ಷ ರೂ. ಅನುದಾನ
ನೆಟ್ಟಣಿಗೆಮೂಟ್ನೂರು ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಪಯಂದೂರು ರಸ್ತೆ ಅಭಿವೃದ್ಧಿಗೆ ಜಿ.ಪಂ.ನಿಂದ 1.5 ಲಕ್ಷ ಅನುದಾನ ಒದಗಿಸುವ ಭರವಸೆ ನೀಡಿದರು. ಉತ್ತರಕ್ಕೆ ಮಹಿಳೆಯರು ಸಂತಸ ವ್ಯಕ್ತಪಡಿಸಿ ಚರ್ಚೆ ಕೊನೆಗೊಳಿಸಿದರು.