Advertisement
ಬಡವರು ವಾಸಿಸುವ ಪ್ರದೇಶಗಳಿಗೆ ವಾರಕ್ಕೊಮ್ಮೆ ನೀರು ಸರಬರಾಜಾಗುತ್ತಿದೆ, ನೀರಿಗಾಗಿ ಜನ ಪರಿತಪಿ ಸುತ್ತಿದ್ದರೆ. ಈಗಾಗಲೇ ಕೆಲವು ವಾರ್ಡ್‌ಗಳಲ್ಲಿ ವಾರಕ್ಕೊಮ್ಮೆ ನೀರು, ಪ್ರತಿದಿನ ಟ್ಯಾಂಕರ್‌ಗಳಲ್ಲಿ ಕುಡಿಯವ ನೀರು ಸರಬರಾಜಾಗುತ್ತಿದೆ. ಬೇಸಿಗೆಯಲ್ಲಿ ಈ ಪರಿಸ್ಥಿತಿ ಎದುರಾಗಿದೆ. ಮಳೆ ಬರದಿದ್ದರೆ ನಗರದ ಪರಿಸ್ಥಿತಿ ಹೇಗಿರುತ್ತದೆ ಎಂದು ಊಹಿಸಲು ಅಸಾಧ್ಯವಾಗಿದೆ.
Related Articles
Advertisement
ಹಳ್ಳಿಗಳ ಪರಿಸ್ಥಿತಿಯಂತೂ ಹೇಳ ತೀರದು: ನಗರದ ಹೊರವಲಯಗಳಲ್ಲಿ ಪಾಲಿಕೆ ವ್ಯಾಪ್ತಿಗೆ ಸೇರಿರುವ ಹಳ್ಳಿಗಳ ಸ್ಥಿತಿಯಂತೂ ಹೇಳ ತೀರದಾಗಿದೆ, ಹಣ ವಂತರಿಗೆ, ನೀರಿನ ಸಮಸ್ಯೆ ಕಾಣುತ್ತಿಲ್ಲ. ಕಾರಣ ಅವರಿಗೆ ರೈಸಿಂಗ್ ಮೈನ್ ಮೂಲಕ ನಿರಂತರ ನೀರು ಬರುವಂತೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಬಡವರು ನೀರಿಗಾಗಿ ಪರಿತಪ್ಪಿಸುತ್ತಿದ್ದಾರೆ. ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ನಗರ ನಿವಾಸಿಗಳ ನೀರಿನ ಬವಣೆಯ ಕೂಗು ಕೇಳದಾಗಿದೆ. ನಗರವು 3.75, 000 ಜನಸಂಖ್ಯೆ ಹೊಂದಿದ್ದು, ಪ್ರತಿದಿನ ತಲಾವಾರು ಕನಿಷ್ಠ ಲಭ್ಯತೆ 78 ಲೀ., ಆಗಿದೆ. ತಲಾವಾರು ನೀರು ಪೂರೈಕೆ ಮಾಡಬೇಕಾಗಿರುವ ನೀರಿನ ಪ್ರಮಾಣ 135 ಲೀ., ಈಗ ಅಗತ್ಯವಿರುವ ನೀರಿನ ಒಟ್ಟು ಪ್ರಮಾಣ 57 ಎಂಎಲ್ಡಿ, ಈಗ ಲಭ್ಯವಿರುತ್ತಿರುವ ನೀರಿನ ಪ್ರಮಾಣ 36ರಿಂದ 38 ಮಾತ್ರ ಇನ್ನೂ 19 ಎಂಎಲ್ಡಿ ನೀರಿನ ಕೊರತೆ ಇದೆ.
4-5 ದಿನಕ್ಕೊಮ್ಮೆ ನೀರು ಸರಬರಾಜು: ಹೇಮಾವತಿ ನೀರು ಸಂಗ್ರಹಿಸಿರುವ ಬುಗುಡನಹಳ್ಳಿಯಲ್ಲಿ 68 ಎಂಸಿಎಫ್ಟಿ ನೀರು ಸಂಗ್ರಹವಿದೆ. ಮೈದಾಳದಿಂದ 50 ಎಂಎಲ್ಡಿ, ಕೊಳವೆಬಾವಿಗಳಿಂದ 3.00 ಎಂಎಲ್ಡಿ ಸೇರಿದಂತೆ ಬುಗುಡನಹಳ್ಳಿ ನೀರು ಸೇರಿ ಈಗ ಒಟ್ಟು 36ರಿಂದ 38 ಎಂಎಲ್ಡಿ ನೀರು ಮಾತ್ರ ಲಭ್ಯವಿದೆ ಆದ್ದರಿಂದ ನಾಲ್ಕು, ಐದು ದಿನಕ್ಕೆ ಒಮ್ಮೆ ನೀರು ಸರಬರಾಜಾಗುತ್ತಿದೆ. ನಗರ ವಾಸಿಗಳಿಗೆ ಸರಬ ರಾಜು ಮಾಡಲು ಕೊರತೆ ಇರುವ ನೀರಿನ ಪ್ರಮಾಣ 19.38 ಎಂಎಲ್ಡಿ ಆಗಿದ್ದು, ನಗರದ ಎಲ್ಲಾ ಕಡೆ ಮೇಲ್ಮಟ್ಟದಲ್ಲಿ 17 ಜಲಸಂಗ್ರಹಗಳಿದ್ದು, ನಗರದಲ್ಲಿ 472 ಕೊಳವೆ ಬಾವಿಗಳಿವೆ. 100ಕ್ಕೆ ಪಂಪುಗಳಿವೆ. ಅದರಲ್ಲಿ 54 ಚಾಲ್ತಿಯಲ್ಲಿದ್ದು, 46 ದುರಸ್ಥಿಯಲ್ಲಿವೆ.
ಈಗಿನ ನೀರಿನ ಸಮಸ್ಯೆ ತೀವ್ರವಾಗುತ್ತಿರುವ ಹಿನ್ನೆಲೆ ಯಲ್ಲಿ ನಗರದ 22, 23, 29, 32, 33, 34, 35 ವಾರ್ಡ್ ಗಳಿಗೆ ನಾಲ್ಕು ದಿನಕ್ಕೆ ಕೆಲವು ಕಡೆ ಐದು ದಿನಕ್ಕೆ ನೀರು ನೀಡಲಾಗುತ್ತಿದೆ. ನಗರದ ಎಲ್ಲಾ ಕಡೆಯೂ ಐದು ದಿನಕ್ಕೆ ನೀರು ಒದಗಿಸಲು ಪಾಲಿಕೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
14 ಸಾವಿರಕ್ಕೂ ರೈಸಿಂಗ್ ಮೇನ್‌ಗಳು: ನಗರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ರೈಸಿಂಗ್ ಕೊಳಾಯಿ ಸಂಪರ್ಕವನ್ನು ಈವರೆಗೂ ಇವರು ಕಡಿತ ಮಾಡುವ ಕೆಲಸವನ್ನು ಕೈಗೆತ್ತಿಕೊಳ್ಳದೇ ಇರುವುದು ವಿಪರ್ಯಾಸ ವಾಗಿದೆ. ಖಾಸಗಿ ಹೋಟೆಲ್, ಕಲ್ಯಾಣ ಮಂಟಪಗಳು, ಆಸ್ಪತ್ರೆಗಳು, ವಾಣಿಜ್ಯೋದ್ಯಮ ಮಳಿಗೆಗಳಿಗೆ ನಲ್ಲಿ ಸಂಪರ್ಕವನ್ನು ಕೆಲವು ಕಡೆ ಅಕ್ರಮವಾಗಿ ನೀಡಿದ್ದಾರೆ. ಈ ಬಗ್ಗೆ ಈವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ.
ನೀರಿನ ಸಮಸ್ಯೆ ನಿವಾರಣೆಗೆ ಅದ್ಯತೆ: ನಗರದಲ್ಲಿ ಉದ್ಭವವಾಗಿರುವ ಕುಡಿಯುವ ನೀರಿನ ಸಮಸ್ಯೆ ಯನ್ನು ನಿವಾರಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲು ಪಾಲಿಕೆ ಆಯುಕ್ತರಾದ ಭೂಪಾಲನ್ ಮುಂದಾಗಿ ದ್ದಾರೆ. ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಬರದಂತೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿ ದ್ದಾರೆ. ಜೊತೆಗೆ ಅಧಿಕಾರಿಗಳೊಂದಿಗೆ ಮಾತನಾಡಿ ಮುಂದೆ ಕುಡಿಯುವ ನೀರಿಗೆ ಸಮಸ್ಯೆಯಾದರೆ ಯಾವ ರೀತಿ ಕ್ರಮ ಕೈಗೊಳ್ಳಬೇಕೆನ್ನುವ ಬಗ್ಗೆ ಚಿಂತನೆ ನಡೆಸಿದ್ದಾರೆ.
ಜಿಲ್ಲಾಧಿಕಾರಿಗಳು ಗಮನ ಹರಿಸುವರೇ: ಮುಂದಿನ ದಿನದಲ್ಲಿ ನಗರದಲ್ಲಿ ಕುಡಿಯುವ ನೀರಿನ ತಾತ್ವಾರ ತೀವ್ರಗೊಳ್ಳಲಿದೆ. ಅಂಕಿ ಅಂಶದ ಪ್ರಕಾರ ಈಗ ಇರುವ ಕುಡಿಯುವ ನೀರು ಇನ್ನು ಒಂದು ತಿಂಗಳು ಮಾತ್ರ ಬರಲಿದ್ದು, ಮುಂದಿನ ದಿನದಲ್ಲಿ ನಗರದಲ್ಲಿ ನೀರಿನ ಸಮಸ್ಯೆ ತೀವ್ರಗೊಳ್ಳಲಿದೆ ಎನ್ನುವ ಮಾತುಗಳು ಆಡಳಿತ ವರ್ಗದಿಂದಲೇ ಕೇಳಿಬರುತ್ತಿವೆ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಿ ಮುಂದಿನ ದಿನದಲ್ಲಿ ಎದುರಾಗುವ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಗಮನ ಹರಿಸುವುದು ಅಗತ್ಯವಾಗಿದೆ.
● ಚಿ.ನಿ.ಪುರುಷೋತ್ತಮ್