Advertisement

ವೈವಿಧ್ಯಕ್ಕೆ ಸಾಕ್ಷಿಯಾದ ಅರಿಪೋ ತಿರಿಪೋ-2020 ತಂಡ

09:51 AM Feb 01, 2020 | sudhir |

ಬದಿಯಡ್ಕ: ಹತ್ತು ಹಲವು ಚಟುವಟಿಕೆಗಳ ಮೂಲಕ ವೈವಿಧ್ಯಮಯವಾಗಿ ಮೂಡಿಬಂದ ಅರಿಪೋ ತಿರಿಪೋ-2020 ಉಪಯುಕ್ತ, ಮೌಲ್ಯಯುತ ಶಿಬಿರ ಎಂಬ ಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ ಮೂರು ವರ್ಷಗಳಿಂದ ಸಹವಾಸ ಶಿಬಿರವನ್ನು ಏರ್ಪಡಿಸುತ್ತಾ ಬಂದಿರುವ ಚೆಂಗಳ ಗ್ರಾಮ ಪಂಚಾಯತ್‌ ಜಿಲ್ಲೆಯ ವಿವಿಧ ಶಾಲೆಗಳಿಂದ ಆಯ್ದ 80-100ರಷ್ಟು ವಿದ್ಯಾರ್ಥಿಗಳಿಗೆ ಅತ್ಯಪೂರ್ವವಾದ ಅನುಭವವನ್ನು ಉಣ ಬಡಿಸುವಲ್ಲಿ ಯಶಸ್ವಿಯಾಗಿದೆ.

Advertisement

ಜಿಜಿಬಿಎಸ್‌ ಪಿಲಾಂಕಟ್ಟೆಯಲ್ಲಿ ಸಂಪನ್ನಗೊಂಡ ಈ ವರ್ಷದ ಶಿಬಿರವೂ ಅದಕ್ಕೆ ಹೊರತಾಗಿಲ್ಲ. ಸಮಾಜದ ಪರ ಚಿಂತನೆಗಳನ್ನು, ವಿಚಾರಧಾರೆಗಳನ್ನು ಹೊಂದಿರುವ ಆಯೋಜಕರ ಪ್ರಯತ್ನ ಶ್ಲಾಘನೀಯ.

ಪ್ಲಾಸ್ಟಿಕ್‌ ವಿರುದ್ಧ ರ್ಯಾಲಿ
ಪ್ಲಾಸ್ಟಿಕ್‌ ತ್ಯಾಜ್ಯ ಸƒಷ್ಟಿಸುತ್ತಿರುವ ಅವಾಂತರ ಒಂದೆರಡಲ್ಲ. ಏಕ ಬಳಕೆ ಪ್ಲಾಸ್ಟಿಕ್‌ ಭೂಮಿಯನ್ನು ದೆ„ತ್ಯನಂತೆ ಆವರಿಸಿಕೊಂಡಿದ್ದು ತನ್ನ ಕಪಿಮುಷ್ಟಿಯಲ್ಲಿ ಹಿಡಿದಿಟ್ಟಿದೆ. ಇವುಗಳು ಮಣ್ಣಿನಲ್ಲಿ ಕರಗುವುದಿಲ್ಲ. ಜೈವಿಕವಾಗಿ ವಿಘಟನೆ ಆಗುವುದಿಲ್ಲ. ಆದುದರಿಂದ ವಿವೇಚನೆಯಿಂದ ಈ ಸಮಸ್ಯೆಗೆ ಪರಿಹಾರ ಕಾಣಬೇಕಾಗಿದೆ. ಈ ಕಾರಣಕ್ಕಾಗಿ ಜನರಲ್ಲಿ ಜಾಗƒತಿ ಮೂಡಿಸಿ ಪ್ಲಾಸ್ಟಿಕ್‌ ಬಳಕೆಯನ್ನು ನಿಲ್ಲಿಸಿ ನೆಲಜಲ ಸಂರಕ್ಷಿಸುವಂತೆ ಮಾಡುವ ಉದ್ದೇಶದಿಂದ ಬದಿಯಡ್ಕದಲ್ಲಿ ಶಿಬಿರಾರ್ಥಿಗಳು ರ್ಯಾಲಿ ನಡೆಸಿದರು. ಪ್ಲಾಸ್ಟಿಕ್‌ನಿಂದುಂಟಾಗುವ ಸಮಸ್ಯೆ ಮತ್ತು ಅದನ್ನು ಹೋಗಲಾಡಿಸಲು ಇರುವ ಪರಿಹಾರವನ್ನು ಸೂಚಿಸುವ ಫಲಕಗಳು ಗಮನ ಸೆಳೆದುವು.

ಮಕ್ಕಳ ಚಿತ್ತ ನಾರಾಯಣೀಯಂನತ್ತ, ಸಾಂಸ್ಕೃತಿಕ ಸ್ವಾಗತ
ಸಂಗೀತ ವಿದ್ವಾನ್‌ ಯೋಗೀಶ್‌ ಶರ್ಮ ಅವರ ನಾರಾಯಣೀಯಂ ಸಂಗೀತ ಶಾಲೆ ಹಲವು ವಿಶೇಷಗಳಿಂದ ಕೂಡಿದೆ. ಆದುದ ರಿಂದ ಸಾಧಕರೊಂದಿಗೆ ಸಂವಾದದ ಭಾಗವಾಗಿ ಶಿಬಿರಾರ್ಥಿಗಳಿಗೆ ನಾರಾಯಣೀಯಂನ್ನು ಭೇಟಿಮಾಡುವ ಅವಕಾಶ ಒದಗಿಸಲಾಯಿತು. ಆಗಮಿಸಿದ ವಿದ್ಯಾರ್ಥಿಗಳಿಗೆ ಬೆಳಗುವ ದೀಪ ದೊಂದಿಗೆ ಸಾಂಸ್ಕೃತಿಕವಾಗಿ ಸ್ವಾಗತ ಕೋರಲಾಯಿತು.

ಉಪಾಹಾರದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆ ಬಳಿಕ ನಾರಾಯಣೀಯಂನ್ನು ಕುತೂಹಲದಿಂದ ವೀಕ್ಷಿಸಿದ ಶಿಬಿರಾರ್ಥಿಗಳಿಗೆ ಗಾನಗಂಧರ್ವ ಯೇಸುದಾಸ್‌ ಅವರ ಹುಟ್ಟುಹಬ್ಬವನ್ನು ಆಚರಿಸುವ ಅವಕಾಶವೂ ದೊರೆಯಿತು. ಶರ್ಮರು ಅತ್ಯಂತ ಜನಜನಿತವಾಗಿರುವ ಯೇಸುದಾಸ್‌ ಹಾಡಿದ ಕೆಲವು ಹಾಡುಗಳನ್ನು ಹಾಡಿದರು. ಆಬಳಿಕ ತನ್ನ ಯೇಸುದಾಸ್‌ ಅವರೊಂದಿಗೆ ಕಳೆದ ದಿನಗಳನ್ನು ಮೆಲುಕು ಹಾಕಿದರು. ಶಿಬಿರಾರ್ಥಿಗಳು ಶರ್ಮರೊಂದಿಗೆ ಮುಕ್ತವಾಗಿ ಸಂವಾದ ನಡೆಸಿದರು.

Advertisement

ಸಂಗೀತದ ಕ್ಷೇತ್ರದತ್ತ ಆಕರ್ಷಿತರಾದ ಬಗೆ, ಬೆಳೆದು ಬಂದ ಹಾದಿ, ಅನುಭವಗಳು, ತರಗತಿಗಳ ಬಗ್ಗೆಯೂ ಕೇಳಿ ತಿಳಿದುಕೊಂಡರು. ಬಹುದೊಡ್ಡ ಸಾಧಕ ರೊಬ್ಬರನ್ನು ಹತ್ತಿರದಿಂದ ನೋಡಿ ಮಾತನಾಡಿದ ಸಂತಸವನ್ನು ಹಾಡುಹಾಡಿ ಸಂಭ್ರಮಿಸಿದರು.

ಶಿಬಿರದ ಆಕರ್ಷಣೆ
18 ಶಾಲೆಗಳಿಂದ 89 ವಿದ್ಯಾರ್ಥಿಗಳು ಒಟ್ಟಾಗಿ ಅನುಭವಗಳನ್ನು ಹಂಚಿಕೊಂಡು, ಜತೆಯಾಗಿ ಕಲೆತ ಸಹವಾಸ ಶಿಬಿರದ ಶಿಬಿರಾರ್ಥಿಗಳಿಗೆ ವಿವಿಧ ತರಬೇತಿಯನ್ನೂ ನೀಡಲಾಯಿತು. ಸ್ವಯಂ ರಕ್ಷೆ, ಪ್ರಕೃತಿ ದುರಂತದಿಂದ ಪಾರಾಗುವ ಬಗೆಯನ್ನು ಕಾಸರಗೋಡು ಅಗ್ನಿಶಾಮಕ ದಳದ ಅನೀಶ್‌, ಕೃಷ್ಣಕುಮಾರ್‌, ಜೀವನ್‌ ಡೆಮೋ ಮೂಲಕ ತೋರಿಸಿಕೊಟ್ಟರು.
ಪ್ಲಾಸ್ಟಿಕ್‌ ವಿರುದ್ಧ ಜಾಗƒತಿ ಮೂಡಿಸುವ ಜಾಥಾ, ಪೇಪರ್‌ ಬ್ಯಾಗ್‌ ತಯಾರಿ, ನಾರಾಯಣೀಯಂನ ಹೊಸತನ, ರಾಜ್ಯ ಶಾಲಾ ಯುವಜನೋತ್ಸವದಲ್ಲಿ ಕಾರಡ್ಕ ಶಾಲಾ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಪಾಪಾತಿ ಎಂಬ ನಾಟಕ, ನಾಸಿಕ ನಾದ ವಿಸ್ಮಯದ ಮೂಲಕ ಅಂಬಿಕಾ ಹಾಗೂ ಮಿಮಿಕ್ರಿಯ ಮೂಲಕ ಮನರಂಜಿಸಿದ ಸರಿತಾ ಯಾದವ್‌ ಮತ್ತು ಮಕ್ಕಳು, ಪಾಂಡಿ ರಾಜೇಶ್‌ ನೇತƒತ್ವದ ಚಿಲಂಬೊಲಿ ಜನಪದ ವೈವಿಧ್ಯ ಕಲಾವಿಸ್ಮಯಕ್ಕೆ ಸಾಕ್ಷಿಯಾಯಿತು.

ಪ್ಲಾಸ್ಟಿಕ್‌ ರಾಕ್ಷಸ
ಸುರೇಂದ್ರನ್‌ ಪೂಕಾನಂ ಬಳಸಿ ಎಸೆದ ಪ್ಲಾಸ್ಟಿಕ್‌ ವಸ್ತುಗಳನ್ನು ಬಳಸಿ ಪ್ಲಾಸ್ಟಿಕ್‌ ರಾಕ್ಷಸನನ್ನು ತಯಾರಿಸಿ ಪ್ಲಾಸ್ಟಿಕ್‌ ಮರುಬಳಕೆ ಮತ್ತು ಪ್ಲಾಸ್ಟಿಕ್‌ ಎಂಬ ರಾಕ್ಷಸ ತರುವ ದುರಂತವನ್ನು ಸಾಂಕೇತಿಕವಾಗಿ ತೋರಿಸಿಕೊಟ್ಟರೆ, ಲಹರಿ ಮುಂತಾದ ವಿದ್ಯಾರ್ಥಿಗಳಿಗೆ, ಯುವಜನತೆಗೆ ಸವಾಲಾಗಿರುವ ವಿಷಯಗಳ ಬಗ್ಗೆ ಮಾಹಿತಿ ಮತ್ತು ಜಾಗƒತಿ ಹೀಗೆ ಹತ್ತು ಹಲವು ಚಟುವಟಿಕೆಗಳ ಮೂಲಕ ಅದ್ಭುತ ಯಶಸ್ಸು ಕಂಡ ಶಿಬಿರ ಅರಿಪೊ ತಿರಿಪೊ-2020.

– ಅಖೀಲೇಶ್‌ ನಗುಮುಗಂ

Advertisement

Udayavani is now on Telegram. Click here to join our channel and stay updated with the latest news.

Next