Advertisement

“ಲಡಾಖ್‌’ನಿಂದ “ಲಾಡಿ’ಗೆ ಮರಳಿದ ಆರಿಫ್‌

06:08 PM Sep 26, 2021 | Team Udayavani |

ಮೂಡುಬಿದಿರೆ: ಪ್ರಾಂತ್ಯ ಗ್ರಾಮದ ಲಾಡಿಯಿಂದ ಸೈಕಲ್‌ ಮೂಲಕ ದೇಶದ ಗಡಿ “ಲಡಾಖ್‌’ ನತ್ತ ತೆರಳಿದ್ದ ಮಹಮ್ಮದ್‌ ಆರೀಫ್‌ ಶನಿವಾರ ಬೆಳಗ್ಗೆ ಮೂಡುಬಿದಿರೆಯ “ಲಾಡಿ’ಗೆ ಮರಳಿದ್ದಾರೆ.

Advertisement

ತುಳುನಾಡಿನ ಸೂರ್ಯ ಚಂದ್ರ ಚಿಹ್ನೆ, ಮೂಡುಬಿದಿರೆ-ಲಡಾಕ್‌, ಕರ್ನಾಟಕ -ಕಾಶ್ಮೀರ, ಮಿಸ್ಟರ್‌ ರೈಡರ್‌ ಬೆದ್ರ, ಸಂಪರ್ಕ ವಿವರ ಹೊತ್ತ ನಾಮಫಲಕಗಳೊಂದಿಗೆ ಹೊರಟು ಕ್ಷೇಮವಾಗಿ ವಾಪಾಸಾಗಿರುವ ಆರೀಫ್‌ ಅವರನ್ನು ತಾಯಿ ನಝೀಮ ಪ್ರಾಂತ್ಯದಲ್ಲಿ ಅವರನ್ನು ಸ್ವಾಗತಿಸಿದರು.

“ನಾನು ಆಗಸ್ಟ್‌ 2ರಂದು ಮೂಡುಬಿದಿರೆಯಿಂದ ಸೈಕಲ್‌ ಮೂಲಕ ಲಡಾಕ್‌ಗೆ ಪ್ರಯಾಣ ಪ್ರಾರಂಭಿಸಿದೆ. ಮನೆಯವರ ಪ್ರೋತ್ಸಾಹ, ನಾನು ಕೆಲಸ ಮಾಡುತ್ತಿರುವ ಮೆಟಲ್‌ ಶಾಪ್‌ ಮಾಲಕ ನಝೀರ್‌ ಅವರ ವಿಶೇಷ ಸಹಕಾರದಿಂದಾಗಿ ನನ್ನ ಕನಸು ನನಸಾಗಿದೆ. ಪ್ರಯಾಣದುದ್ದಕ್ಕೂ ವಿವಿಧ ಭಾಗಗಳ ಸಂಸ್ಕೃತಿಯನ್ನು ಅರಿಯಲು ಸಾಧ್ಯವಾಗಿದೆ. ಪ್ರಯಾಣದಿಂದಾಗಿ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ’ ಎಂದು ಆರಿಫ್‌ ತನ್ನ ಅನಿಸಿಕೆ ವ್ಯಕ್ತಪಡಿಸಿದರು.

ಇದನ್ನೂ ಓದಿ:ಗೋವಾದಲ್ಲಿ ಕನ್ನಡ ಭವನ ನಿರ್ಮಾಣದ ಜೊತೆ ಪದವಿ ಶಿಕ್ಷಣದವರೆಗೆ ಕನ್ನಡ ವಿಸ್ತರಣೆ : ಮಹೇಶ್ ಜೋಶಿ

ಮೆಟಲ್‌ ಶಾಪ್‌ ಮಾಲಕ ನಝೀರ್‌ ಮಾತನಾಡಿ, ನಮ್ಮ ಅಂಗಡಿಯಲ್ಲಿ ಒಂದು ವರ್ಷದಿಂದ ಕೆಲಸ ಮಾಡುತ್ತಿರುವ ಆರೀಫ್‌ ಲಡಾಕ್‌ಗೆ ಸೈಕಲ್‌ ಸವಾರಿ ಮಾಡುವ ತನ್ನ ಇಚ್ಛೆಯನ್ನು ಹೇಳಿಕೊಂಡಿದ್ದರು. 3,500 ಕಿ.ಮೀ. ಹೆಚ್ಚು ಅವರು ಸೈಕಲ್‌ ಸವಾರಿ ಮಾಡಿರುವುದು ಖುಷಿ ನೀಡಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next