ಸಿನಿಮಾ ಚಿತ್ರೀಕರಣಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈಗ ಕನ್ನಡ ಚಿತ್ರರಂಗಕ್ಕೆ ಸಂಸ್ಥೆಯೊಂದು ಕಾಲಿಟ್ಟಿದೆ. ಈ ಮೂಲಕ ಹೊರರಾಜ್ಯಗಳಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಸೇರಿದಂತೆ ನಿರ್ಮಾಪಕ ಸ್ನೇಹಿ ಸಾಕಷ್ಟು ಅಂಶಗಳೊಂದಿಗೆ ಈ ಸಂಸ್ಥೆ ಕಾರ್ಯಾಚರಿಸಲಿದೆ.
ಆರ್ಗಸ್ ಎಂಟರ್‌ಟೈನ್ಮೆಂಟ್ ಸಂಸ್ಥೆ ಈ ತರಹದ ಒಂದು ಕಾರ್ಯಕ್ಕೆ ಕೈಹಾಕಿದೆ. ಆರ್ಗಸ್ ಸಂಸ್ಥೆಯ ಜೈಪುರದಲ್ಲಿ ಮುಖ್ಯ ಕಛೇರಿಯನ್ನು ಹೊಂದಿದ್ದು, ಇದರ ಬೆಂಗಳೂರು ವಿಭಾಗದ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ನಿರ್ಮಾಪಕರಾದ ಸಾ.ರಾ ಗೋವಿಂದು, ನಿರ್ಮಾಪಕ ಕೆ. ಮಂಜು, ಎನ್.ಎಂ.ಸುರೇಶ್,
ನಿರ್ದೇಶಕ ನಾಗಣ್ಣ ಸೇರದಂತೆ ಚಿತ್ರೋದ್ಯಮದ ಹಲವಾರು ಪಾಲ್ಗೊಂಡಿದ್ದರು.
ಇದನ್ನೂ ಓದಿ:ಬಿರುಸಿನ ಚಿತ್ರೀಕರಣದಲ್ಲಿ ‘ಲಗಾಮ್’
ಸಾ.ರಾ. ಗೋವಿಂದು ಮಾತನಾಡಿ, “ನಮ್ಮ ಚಿತ್ರರಂಗ ಈಗಾಗಲೇ ತುಂಬಾ ಕಷ್ಟದಲ್ಲಿದೆ. ವಿದೇಶದಲ್ಲಿ ಶೂಟ್ ಮಾಡುವಾಗ ಅವರು ಹೇಳಿದ್ದೇ ರೇಟ್ ಆಗಿರುತ್ತದೆ. ಈಗ ನೀವು ಇದೆಲ್ಲ ವ್ಯವಸ್ಥೆಗಳನ್ನು ಮಾಡಿಕೊಡುತ್ತೇವೆ ಎಂದು ಮುಂದೆ ಬಂದಿದ್ದೀರಿ, ನಮ್ಮ ನಿರ್ಮಾಪಕರಿಗೆ ಅನುಕೂಲಕರವಾಗುವ ಹಾಗೆ ವ್ಯವಸ್ಥೆ ಮಾಡಿಕೊಡಿ’ ಎಂದರು. ಮಂಡಳಿ ಅಧ್ಯಕ್ಷ ಜೈರಾಜ್ ಕೂಡಾ ಕನ್ನಡ ಚಿತ್ರರಂಗಕ್ಕೆ ಸಹಾಯವಾಗುವ ಕೆಲಸ ಮಾಡಿ ಎಂದು ಹೇಳಿದರು. ಆರ್ಗಸ್‌ನ ಸಂಸ್ಥಾಪಕರಾದ ಸುದೀಪೋ ಚಟರ್ಜಿ, ಸಹ ಸ್ಥಾಪಕರಾದ ಜೈರಾಜ ಸಿಂಗ್ ಶೇಖಾವತ್ ಹಾಗೂ ವ್ಯವಸ್ಥಾಪಕರಾದ ಖುಷಿ ರಾಜ ಸಿಂಗ್ ಶೇಖಾವತ್ ಕಾರ್ಯಕ್ರಮದಲ್ಲಿ ಹಾಜರಿದ್ದು, ಸಂಸ್ಥೆಯ ಕುರಿತಂತೆ ಮಾಹಿತಿ ನೀಡಿದರು.