ಕಾನ್ಪುರ: ಶನಿವಾರ ಅಂಪೈರ್ ನಿತಿನ್ ಮೆನನ್ ಮತ್ತು ಸ್ಪಿನ್ನರ್ ಆರ್.ಅಶ್ವಿನ್ ನಡುವೆ ಮಾತಿನ ಚಕಮಕಿ ನಡೆಯಿತು. ಇದಕ್ಕೆ ಕಾರಣವೂ ಇದೆ.
76ನೇ ಓವರ್ ವೇಳೆ ಅಶ್ವಿನ್ ವಿಕೆಟನ್ನು ಪೂರ್ಣ ಬಳಸಿ (ಅರೌಂಡ್ ದಿ ವಿಕೆಟ್) ಬೌಲಿಂಗ್ ಮಾಡುತ್ತಿದ್ದರು. ಹಾಗಂತ ಅವರು ಗೆರೆಯಿಂದ ಹೊರಗೂ ಹೋಗಿರಲಿಲ್ಲ, ಅಂಪೈರ್ ಕರ್ತವ್ಯಕ್ಕೂ ಅಡ್ಡಿ ಮಾಡುತ್ತಿರಲಿಲ್ಲ! ಆದರೂ ಅಂಪೈರ್ ಮೆನನ್, ಅಶ್ವಿನ್ ಗೆ ತುಸು ಕಠಿಣವಾಗಿಯೇ ಎಚ್ಚರಿಕೆ ನೀಡಿದರು.
ಇದನ್ನೂ ಓದಿ:ಹೆಂಡ್ತಿಗೆ ಹೊಡೆಯೋದು ಸರಿ ಅಂದ್ರು ನಮ್ಮವರು! ಸಮೀಕ್ಷೆ ವರದಿ ಪ್ರಕಟ
ಇದಕ್ಕೆ ಕಾರಣ ಬೌಲಿಂಗ್ ತುದಿಯಲ್ಲಿದ್ದ ಬ್ಯಾಟಿಗನಿಗೆ ಅಡ್ಡವಾಗುವಂತೆ ಅವರು ಬೌಲಿಂಗ್ ಮಾಡುತ್ತಿದ್ದದ್ದು. ಇದರಿಂದ ನಾನ್ ಸ್ಟ್ರೈಕರ್‌ನಲ್ಲಿದ್ದ ಬ್ಯಾಟಿಗನಿಗೆ ಸ್ಟ್ರೈಕರ್‌ನಲ್ಲಿದ್ದ ಬ್ಯಾಟಿಗ ಏನು ಮಾಡುತ್ತಿದ್ದಾನೆ ಎಂದು ತಿಳಿಯಲು ತೊಂದರೆಯಾಗುತ್ತಿತ್ತು.
ಅಂಪೈರ್ ನೀಡಿದ ಎಚ್ಚರಿಕೆ ನಂತರವೂ ಅಶ್ವಿನ್ ಮತ್ತೆ ಹಾಗೆಯೇ ಬೌಲಿಂಗ್ ಮಾಡಿದರು. ಅಂತೂ ರಹಾನೆ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು.