ಲಕ್ನೋ: ಸುಲ್ತಾನ್ ಪುರ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಹಾಗೂ ಕೆಂದ್ರ ಸಚಿವೆಯೂ ಆಗಿರುವ ಮನೇಕಾ ಗಾಂಧಿ ಅವರು ತಮ್ಮ ಎದುರಾಳಿ ಮಹಾಘಟಬಂಧನ ಕೂಟದ ಅಭ್ಯರ್ಥಿಗೆ ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ ಘಟನೆ ವರದಿಯಾಗಿದೆ.
ಮಹಾಘಟಬಂಧನ್ ಮೈತ್ರಿ ಅಭ್ಯರ್ಥಿ ಸೋನು ಸಿಂಗ್ ಬೆಂಬಲಿಗರು ಮತದಾರರನ್ನು ಬೆದರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಮನೇಕಾ ಗಾಂಧಿ ಅವರು ಸೋನು ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಈ ಇಬ್ಬರು ಅಭ್ಯರ್ಥಿಗಳು ಸಾರ್ವಜನಿಕವಾಗಿ ವಾಗ್ವಾದ ನಡೆಸುತ್ತಿರುವ ದೃಶ್ಯ ಇದೀಗ ವಿಡಿಯೋದಲ್ಲಿ ಸೆರೆಯಾಗಿದೆ. ಅದರಲ್ಲಿ ಸಚಿವೆ ಮನೇಕಾ ಗಾಂಧಿ ಅವರು ಸೋನು ಸಿಂಗ್ ಅವರತ್ತ ಬೆರಳು ತೋರಿಸಿ, ‘ನಿಮ್ಮ ದಾದಾಗಿರಿ ಎಲ್ಲಾ ಇಲ್ಲಿ ನಡೆಯುವುದಿಲ್ಲ’ ಎಂದು ಹೇಳುತ್ತಾರೆ.
Related Articles
ಆದರೆ ತಾನೇನೂ ಮಾಡಿಲ್ಲ ಎಂಬುದಾಗಿ ಸೋನು ಸಿಂಗ್ ಹೇಳುತ್ತಾರೆ. ಇದೇ ಹೊತ್ತಿಗೆ ಮಹಾಘಟಬಂಧನ್ ಬೆಂಬಲಿಗರು ಸೋನು ಸಿಂಗ್ ಪರ ಘೋಷಣೆಗಳನ್ನು ಕೂಗುತ್ತಾರೆ.