Advertisement

25 ವರ್ಷ ಪೂರೈಸಿದ ಸ್ವದೇಶಿ ಅನಿಮೇಷನ್‍ ಬ್ರಾಂಡ್‍ ‘ಅರೆನಾ’

04:14 PM Dec 24, 2021 | Team Udayavani |

ಮುಂಬಯಿ: ಭಾರತೀಯ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ಔಪಚಾರಿಕವಲ್ಲದ ಶೈಕ್ಷಣಿಕ ಪಠ್ಯಕ್ರಮದಲ್ಲಿ ಪ್ರಮುಖ ಸ್ವದೇಶಿ ಕಂಪೆನಿಯಾದ ಅರೆನಾ ಅನಿಮೇಷನ್‍ 25 ವರ್ಷಗಳನ್ನು ಪೂರೈಸಿದೆ.

Advertisement

ಭಾರತ ದೇಶ ಸ್ವಾತಂತ್ರ್ಯದ 75 ನೇ ವರ್ಷದ ಸಂಭ್ರಮಾಚರಣೆಯಲ್ಲಿರುವಾಗ, ಸುಮಾರು 1/3 ಭಾಗವನ್ನು ಸ್ವದೇಶಿ ಬ್ರ್ಯಾಂಡ್ – ಅರೆನಾ ಅನಿಮೇಷನ್‌ ಜಾಗತಿಕವಾಗಿ ಔದ್ಯೋಗಿಕ ಮತ್ತು ಕೌಶಲ್ಯ ನಿರ್ಮಾಣಕ್ಕೆ ಅಡಿಪಾಯ ಹಾಕಿದೆ. ಮೂರು ದಶಕಗಳಿಂದ ದೇಶದಲ್ಲಿ ಅನೌಪಚಾರಿಕ ವೃತ್ತಿಪರ ತರಬೇತಿ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಆಪ್ಟೆಕ್ ಲಿಮಿಟೆಡ್ 1996 ರಲ್ಲಿ ಮಾಧ್ಯಮ ಮತ್ತು ಮನರಂಜನಾ ಬ್ರ್ಯಾಂಡ್ – ಅರೆನಾ ಅನಿಮೇಷನ್ ಸ್ಥಾಪಿಸಿದ್ದು, ಇಂದು, ಸವಿಸ್ತಾರ ಜಾಲ ಕೇಂದ್ರಗಳನ್ನು ಹೊಂದಿದೆ, 18 ದೇಶಗಳಲ್ಲಿ ಅಸ್ತಿತ್ವದಲ್ಲಿದೆ ಮತ್ತು ಜಾಗತಿಕವಾಗಿ 4,50,000 ವಿದ್ಯಾರ್ಥಿಗಳಿಗೆ ತರಬೇತಿ ನೀಡಿದೆ ಎಂದು ಕಂಪೆನಿ ತಿಳಿಸಿದೆ.

ಅರೆನಾ ಇಂದು ಅನಿಮೇಷನ್, ವಿಎಫ್‌ಎಕ್ಸ್, ಗೇಮಿಂಗ್, ವೆಬ್ ವಿನ್ಯಾಸ, ಗ್ರಾಫಿಕ್ಸ್ ವಿನ್ಯಾಸ, ಯುಐಯುಎಕ್ಸ್ ಪ್ರಸಾರ, ಮಲ್ಟಿಮೀಡಿಯಾ, ಡಿಜಿಟಲ್ ಜಾಹೀರಾತು ಮತ್ತು ಮಾರ್ಕೆಟಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವೃತ್ತಿ ಮತ್ತು ವೃತ್ತಿಪರ ತರಬೇತಿಯನ್ನು ನೀಡುತ್ತಿದೆ. ಅತ್ಯುತ್ತಮ ಔದ್ಯೋಗಿಕ ಸಂಪರ್ಕಗಳು ಮತ್ತು ಅಂಗಸಂಸ್ಥೆಗಳೊಂದಿಗೆ, ಪ್ರಸ್ತುತ ಶೈಕ್ಷಣಿಕ ಕೋರ್ಸ್‌ಗಳನ್ನು ವಿನ್ಯಾಸಗೊಳಿಸುತ್ತಿದೆ ಮತ್ತು ವಿದ್ಯಾರ್ಥಿಗಳನ್ನು ಬೇಗನೆ ಉದ್ಯೋಗಿಯನ್ನಾಗಿಸುವ ಕೌಶಲ್ಯಗಳನ್ನು ನೀಡುತ್ತದೆ.

ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅನಿಲ್ ಪಂತ್, “ಕಳೆದ 25 ವರ್ಷಗಳಲ್ಲಿ ಅರೆನಾ ಅನಿಮೇಷನ್‌ ಸಾಧನೆ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ. ಭಾಗವಹಿಸುವ ಪ್ರತಿಯೊಬ್ಬ ಪಾಲುದಾರರು – ನಮ್ಮ ವಿದ್ಯಾರ್ಥಿಗಳು, ವ್ಯಾಪಾರ ಪಾಲುದಾರರು, ನೇಮಕಾತಿದಾರರು, ಉದ್ಯೋಗಿಗಳು ಅಥವಾ ಷೇರುದಾದರರು ಸಮಾನ ಪಾತ್ರಗಳನ್ನು ಹೊಂದಿದ್ದಾರೆ ಮತ್ತು ಕೌಶಲ್ಯವನ್ನು ಬೆಳೆಸುವ ಮತ್ತು ವೃತ್ತಿಜೀವನವನ್ನು ಸಕ್ರಿಯಗೊಳಿಸುವ ಈ ಪ್ರಯಾಣದಲ್ಲಿ ಸಶಕ್ತ ಪ್ರಮುಖ ಸ್ತಂಭಗಳಾಗಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next