Advertisement

Sirsi: ಅಡಿಕೆ ದರ ಇಳಿತ; ಆತಂಕಪಡುವ ಅಗತ್ಯವಿಲ್ಲ; ಗೋಪಾಲಕೃಷ್ಣ ವೈದ್ಯ

10:21 AM Feb 22, 2024 | Team Udayavani |

ಶಿರಸಿ: ಕಳೆದ ಕೆಲವು ದಿನಗಳಿಂದ ಅಡಿಕೆ ಮಾರುಕಟ್ಟೆಯಲ್ಲಿ ದರ ಕುಸಿತವಾಗುತ್ತಿದ್ದು, ವಿದೇಶಗಳಿಂದ ಕಳ್ಳಸಾಗಾಣಿಕೆ ಮೂಲಕ ಅಡಿಕೆ ಒಳನುಸುಳುತ್ತಿರುವುದರ ಪರಿಣಾಮವೆಂದು ಅಭಿಪ್ರಾಯಪಡಲಾಗಿದೆ ಎಂದು ಟಿಎಸ್ಎಸ್ ಅಧ್ಯಕ್ಷ ಗೋಪಾಕೃಷ್ಣ ವೈದ್ಯ ತಿಳಿಸಿದ್ದಾರೆ.

Advertisement

ಈ ಕುರಿತು ಪ್ರಕಟಣೆ ನೀಡಿರುವ ಅವರು, ಪುನಃ ಪುನಃ ಅಡಿಕೆ ದರ ಕುಸಿತಗೊಳ್ಳುವುದರಿಂದ ರೈತರು ಸಂಕಷ್ಟಕ್ಕೆ ಗುರಿಯಾಗುವ ಸ್ಥಿತಿ ಇರುವುದರಿಂದ ಈ ಬಗ್ಗೆ ಕೇಂದ್ರ ಸರಕಾರದ ಸಂಬಂಧಪಟ್ಟ ಸಚಿವರುಗಳನ್ನು ಭೇಟಿ ಮಾಡಿ, ಕಳ್ಳಸಾಗಾಣಿಕೆಯನ್ನು ತಡೆಯುವಂತೆ ಒತ್ತಾಯಿಸಲು ಇಂದು ಸೇರಿದ್ದ ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ ಸಹಕಾರ ಮಹಾಮಂಡಳದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಕ್ಯಾಂಪ್ಕೋ ಅಧ್ಯಕ್ಷ ಕಿಶೋರ ಕುಮಾರ ಕೊಡ್ಗಿ, ಶಿವಮೊಗ್ಗದ ರಾಜ್ಯ ಅಡಿಕೆ ಸಹಕಾರ ಸಂಘಗಳ ಸಹಕಾರ ಮಹಾಮಂಡಳ ಅಧ್ಯಕ್ಷ ವೈ.ಎಸ್. ಸುಬ್ರಹ್ಮಣ್ಯ ಅಧ್ಯಕ್ಷರು, ಕ್ರಾಮ್ಕೋ ಶಿವಮೊಗ್ಗ ಅಧ್ಯಕ್ಷ ಹೆಚ್. ಎಸ್. ಮಂಜಪ್ಪ, ಟಿ.ಎಮ್. ಎಸ್. ಸಿದ್ದಾಪುರದ ಅಧ್ಯಕ್ಷ ಆರ್. ಎಮ್. ಹೆಗಡೆ ಬಾಳೇಸರ, ಮ್ಯಾಮ್‌ಕೋಸ್ ಶಿವಮೊಗ್ಗದ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಬರುವೆ ಹಾಗೂ ಇನ್ನಿತರ ಗಣ್ಯರನ್ನೊಳಗೊಂಡ ಸಭೆಯಲ್ಲಿ ನಿರ್ಧರಿಸಲಾಯಿತು.

ಆದಷ್ಟು ಬೇಗ ದೆಹಲಿಗೆ ಹೋಗಿ ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಒತ್ತಾಯಿಸಲಾಗುವುದು. ಈ ಸ್ಥಿತಿ ತಾತ್ಕಾಲಿಕವಾದ್ದರಿಂದ ಬೆಳೆಗಾರರು ಯಾವುದೇ ಆತಂಕಕ್ಕೆ ಒಳಗಾಗಬಾರದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next